For Quick Alerts
ALLOW NOTIFICATIONS  
For Daily Alerts
 

ವಿಂಬಲ್ಡನ್‌ ಪಂದ್ಯದ ವೇಳೆ ಕಾಣಿಸಿಕೊಂಡ ವಿರಾಟ್‌: ಫೋಟೋ ವೈರಲ್

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಸದ್ಯ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿ ಅವರು ತಮ್ಮ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದಾರೆ. ಇದೇ ವೇಳೆ ವಿರಾಟ್‌ ಹಾಗೂ ಅನುಷ್ಕಾ ಅವರ ಒಂದು ಫೋಟೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ವಿಂಬಲ್ಡನ್‌ ಪಂದ್ಯದ ವೇಳೆ ಸೆರೆ ಹಿಡಿಯಲಾಗಿದ್ದು, ವಿರಾಟ್‌ ದಂಪತಿ ವಿಶ್ವದ ಸ್ಟಾರ್ ಆಟಗಾರ ನೋವೊಕಾ ಜೊಕೊವಿಚ್ ಪಂದ್ಯವನ್ನು ನೋಡಿ ಖುಷಿಪಟ್ಟಿದ್ದಾರೆ.

ಸಾಮಾಜಿಕ ತಾಣದಲ್ಲಿ ವಿರಾಟ್‌ ಕೊಹ್ಲಿ ಸೂಟ್‌ ಹಾಕಿಕೊಂಡು ವಿಂಬ್ಡಲನ್‌ ನೋಡ್ತಾ ಇರುವ ಫೋಟೋ ಸಖತ್ ವೈರಲ್ ಆಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕೆಲವು ವರ್ಷಗಳ ಹಿಂದೆ ವಿಂಬಲ್ಡನ್‌ನಲ್ಲಿ ಒಟ್ಟಿಗೆ ಭಾಗವಹಿಸಿದ್ದ ದಂಪತಿಗಳ ಹಳೆಯ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಈ ಪೋಟೋಗಳು ಸಖತ್ ವೈರಲ್ ಆಗಿವೆ.

Kohli and Sharma spotted at Wimbledon as Djokovic advances to quarterfinals

ಸಾಮಾಜಿಕ ಬಳಕೆದಾರರು ಈ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ಇವರಿಬ್ಬರಿಗೂ ಟೆನಿಸ್‌ನಲ್ಲಿ ಆಸಕ್ತಿ ಇದೆಯಾ ಎಂದು ಬಬ್ಬ ಬಳಕೆದಾರ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಇನ್ನೊಬ್ಬ ಬಳಕೆದಾರ, ಇದು ಪ್ರತಿಷ್ಠಿತ ಟೂರ್ನಿ. ಈ ಟೂರ್ನಿಯನ್ನು ನೋಡಲು ಶ್ರೀಮಂತ ವ್ಯಕ್ತಿಗಳು ಇರುತ್ತಾರೆ. ಹಾಗಾಗಿ ವಿರಾಟ್‌ ಕೊಹ್ಲಿ ಅನುಷ್ಕಾ ಬಂದಿರಬಹುದು ಎಂದು ತಿಳಿಸಿದ್ದಾರೆ. ವಿರಾಟ್‌ ದಂಪತಿ ನಿಜಕ್ಕೂ ವಿಂಬಲ್ಡನ್ ಪಂದ್ಯವನ್ನು ಆನಂದಿಸಿರಬಹುದು. ಆದರೆ ಇವರ ಫೋಟೋ ನೋಡಿದರೆ ಹಾಗೆ ಅನಿಸುತ್ತಿಲ್ಲ ಎಂದು ಇನ್ನೊಬ್ಬ ಬಳಕೆದಾರ ತಿಳಿಸಿದ್ದಾರೆ.

ಜೋಕೊಗೆ ಜಯ

ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಸರ್ಬಿಯಾದ ನೋವಾಕ್ ಜೋಕೊವಿಚ್ ಅವರು ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಅವರನ್ನು ಮಣಿಸಿ ಮುನ್ನಡೆ ಸಾಧಿಸಿದರು. 24 ಗ್ರ್ಯಾನ್‌ ಸ್ಲ್ಯಾಮ್‌ಗಳನ್ನು ಗೆದ್ದ ದಾಖಲೆಯನ್ನು ಹೊಂದಿರುವ ನೋವಾಕ್‌ ಜೋಕೊವಿಚ್ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ನಂತರದ ಮೂರು ಸೆಟ್‌ಗಳಲ್ಲಿ ತಮ್ಮ ಶಿಸ್ತು ಬದ್ಧ ಆಟವನ್ನು ಪ್ರದರ್ಶಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರು. 16ನೇ ಸುತ್ತಿನ ಪಂದ್ಯದಲ್ಲಿ ನೋವಾಕ್‌ 1-6, 6-4, 6-4, 6-4 ರಿಂದ ಆಸ್ಟ್ರೇಲಿಯಾ ಆಟಗಾರನನ್ನು 3 ಗಂಟೆ 19 ನಿಮಿಷಗಳ ಆಟದಲ್ಲಿ ಮಣಿಸಿ ಮುನ್ನಡೆ ಸಾಧಿಸಿದರು. ಈ ಮೂಲಕ ಏಳನೆ ಬಾರಿಗೆ ಜೋಕೊ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

Story first published: Tuesday, July 8, 2025, 10:20 [IST]
Other articles published on Jul 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+