Virat Kohli, Rohit Sharma: ಟೀಮ್ ಮ್ಯಾನೇಜ್ಮೆಂಟ್‌ನಿಂದ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ
ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಮುಗಿದಿದೆ. ಈ ಟೆಸ್ಟ್ ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಸೋಲು ಕಂಡಿದೆ. ಭಾರತ ಈ ಸೋಲು ಅಭಿಮಾನಿಗಳ ಮನಸ್ಸಿನಲ್ಲಿ ನೂರು ಪ್ರಶ್ನೆ ಹುಟ್ಟುವಂತೆ ಮಾಡಿವೆ. ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಸಹ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಕ್ಷಮತೆಯನ್ನು ತೋರಿಸದೇ ಇರುವುದು ಪ್ರಶ್ನೆಗಳು ಏಳುವಂತೆ ಮಾಡಿವೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಟಗಾರರಿಗೆ ಬೇರೆ ಬೇರೆ ಮಾನದಂಡಗಳನ್ನು ಅನುಸರಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಇವರ ಆಟದ ಮೇಲೆ ಪ್ರಶ್ನೆಗಳು ಎದ್ದಿವೆ. ಅಲ್ಲದೆ ಅಭಿಮಾನಿಗಳು ಬೇರೆ ಆಟಗಾರರಿಗೆ ಒಂದು ಕಾನುನೂ, ಇನ್ನೊಬ್ಬರಿಗೆ ಇನ್ನೊಂದು ನಿಯಮ ಎನ್ನುವಂತೆ ಮಾಡಿದೆ. ಒತ್ತಡದ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರ ಬ್ಯಾಟಿಂಗ್ ಮೇಲೆ ಪ್ರಶ್ನೆಗಳು ಎದ್ದಿವೆ.

ಅವರಿಗೊಂದು ನ್ಯಾಯ..
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಫ್ಲಾಪ್ ಪ್ರದರ್ಶನ ನೀಡುತ್ತಿರುವುದಕ್ಕೆ ಅಭಿಮಾನಿ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾದಿಂದ ದೂರ ಇರುವ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅವರಿಗೆ ಸಿಗದೇ ಇರುವಷ್ಟು ಅವಕಾಶಗಳು, ರೋಹಿತ್, ವಿರಾಟ್‌ಗೆ ಏಕೆ ಎಂಬ ಪ್ರಶ್ನೆಗಳು ಕೇಳುತ್ತಿದ್ದಾರೆ. ಅಂದಹಾಗೆ ವಿರಾಟ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಆಲ್‌ಮೋಸ್ಟ್ ಸೇಮ್ ವಯಸ್ಸಿನವರು. ಆದರೆ ರೋಹಿತ್ ಒಂದು ವರ್ಷ ಹಿರಿಯರು. ಒಂದೇರಡು ಸರಣಿಯಲ್ಲಿ ಈ ಸ್ಪೆಷಲಿಸ್ಟ್ ಆಟಗಾರರು ಆಡದೇ ಇರುವುದಕ್ಕೆ ತಂಡದಿಂದ ಹೊರಗಿಟ್ಟರೆ, ಇವರಿಗೆ ಯಾವ ಮಾನದಂಡಗಳನ್ನು ಮ್ಯಾನೇಜ್ಮೆಂಟ್ ಅನುಸರಿಸುತ್ತಿದೆ ಎಂದು ಕೇಳುತ್ತಿದ್ದಾರೆ.
ಅನುಭವಿಗಳ ಕಡೆಗಣನೆ
ಆಸ್ಟ್ರೇಲಿಯಾದಲ್ಲಿ ಕಳೆದ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಸಮರ್ಥವಾಗಿ ಮುನ್ನಡೆಸಿ, ಬಾರ್ಡರ್ ಗವಾಸ್ಕರ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಜಿಂಕ್ಯ ರಹಾನೆ ಸದ್ಯ ತಂಡದಿಂದ ದೂರ ಉಳಿದಿದ್ದಾರೆ. ಅಸಲಿಗೆ ಅಜಿಂಕ್ಯ 2023ರಲ್ಲಿ ಭಾರತದ ಪರ ಕೊನೆಯ ಟೆಸ್ಟ್ ಆಡಿದ್ದರು. ಆ ವರ್ಷದಲ್ಲಿ ಅವರ ಸರಾಸರಿಯನ್ನು ನೋಡಿದರೆ 36.50 ಆಗಿದೆ. ಇವರು ಆಡಿದ 3 ಪಂದ್ಯಗಳಲ್ಲಿ 146 ರನ್ ಕಲೆ ಹಾಕಿದ್ದು, ಫಾರ್ಮ್ ಇಲ್ಲ ಎಂಬ ಕಾರಣಕ್ಕೆ ಇವರನ್ನು ತಂಡದಿಂದ ಕೈ ಬಿಡಲಾಗಿತ್ತು.
ಹೇಗಿದೆ ಸರಾಸರಿ?
ಇನ್ನು 2023ರಲ್ಲಿ ಚೇತೇಶ್ವರ್ ಪೂಜಾರ ಸಹ ಭಾರತದ ಪರ 2023ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಈ ವೇಳೆ ಇವರ ಸರಾಸರಿ ಸಹ 25.85 ಆಗಿದೆ. ಇವರು ಆಡಿದ 5 ಪಂದ್ಯಗಳಲ್ಲಿ 181 ರನ್ ಸಿಡಿಸಿದ್ದರು. ಇವರಿಗೂ ಸಹ ಫಾರ್ಮ್ ವಿಚಾರಕ್ಕೆ ಹೊರಗಿಡಲಾಗಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪ್ರಸಕ್ತ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಕಲೆ ಹಾಕಿರುವ ಸರಾಸರಿ ಈ ಇಬ್ಬರು ಬ್ಯಾಟರ್‌ಗಳಿಗಿಂತಲೂ ಕಡಿಮೆ ಇದೆ. ಹಾಗಿದ್ದರೆ ಟೀಮ್ ಮ್ಯಾನೇಜ್ಮೆಂಟ್ ಇವರ ಮೇಲೆ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆಗಳು ಮೂಡಿವೆ.
ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ ಕೊನೆಯ ವರ್ಷದ ಸಾಧನೆ
| ಕ್ರಮ ಸಂಖ್ಯೆ | ಆಟಗಾರ | ವರ್ಷ | ಪಂದ್ಯ | ರನ್ | ಸರಾಸರಿ |
| 1 | ವಿರಾಟ್ ಕೊಹ್ಲಿ | 2024 | 10 | 417 | 24.52 |
| 2 | ರೋಹಿತ್ ಶರ್ಮಾ | 2024 | 14 | 619 | 24.76 |
| 3 | ಅಜಿಂಕ್ಯ ರಹಾನೆ | 2023 | 3 | 146 | 36.5 |
| 4 | ಚೇತೇಶ್ವರ್ ಪೂಜಾರ | 2023 | 5 | 181 | 25.85 |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications