ಚಿತ್ರ ಸಂಪುಟ: ಕ್ರಿಕೆಟ್ ರಂಗದ ಸಾಧಕರಿಗೆ ಪ್ರಶಸ್ತಿಯ ಗೌರವ
ಬೆಂಗಳೂರಿನ ಪ್ರತಿಷ್ಠಿತ ಐಶಾರಾಮಿ ಹೋಟೇಲೊಂದರಲ್ಲಿ ಬುಧವಾರ ರಾತ್ರಿ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಕನ್ನಡತಿ ಹಾಗೂ ಮಾಜಿ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವ ಮಹಿಳಾ ದಿನದಂದು ಅವರು ಈ ಪ್ರಶಸ್ತಿ ಸ್ವೀಕರಿಸಿರುವುದು ಹೆಮ್ಮೆಯ ವಿಚಾರ.
ಅದರಂತೆ, 2015-16ನೇ ಸಾಲಿನಲ್ಲಿ ಉತ್ತಮ ಸಾಧನೆ ತೋರಿದ ವಿರಾಟ್ ಕೊಹ್ಲಿ (ಶ್ರೇಷ್ಠ ಬ್ಯಾಟ್ಸ್ ಮನ್ ಗಾಗಿ ಪಾಲಿ ಉಮ್ರಿಗಾರ್ ಪ್ರಶಸ್ತಿ) ಹಾಗೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (ಶ್ರೇಷ್ಠ ಬೌಲರ್ - ದಿಲೀಪ್ ಸರ್ದೇಸಾಯ್ ಪ್ರಶಸ್ತಿ) ಗೌರವಿಸಲಾಯಿತು.
ಆ ಭವ್ಯ ಸಮಾರಂಭದ ಕೆಲವಾರು ಫೋಟೋ ಝಲಕ್ ಇಲ್ಲಿವೆ.

ಸಾಧಕನಿಗೆ ಸಂದ ಗೌರವ
ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಪಾತ್ರರಾದರು. ಅಂದಹಾಗೆ, ಈ ಪ್ರಶಸ್ತಿ ಕೊಹ್ಲಿಗೆ ಲಭಿಸುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ, 2011-12, 2014-15ರಲ್ಲಿ ಈ ಪ್ರಶಸ್ತಿಯನ್ನು ಅವರು ಪಡೆದಿದ್ದರು.

ಎರಡನೇ ಬಾರಿಗೆ ಪ್ರಶಸ್ತಿ ಗರಿ
ಶ್ರೇಷ್ಠ ಬೌಲಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ದಿಲೀಪ್ ಸರ್ದೇಸಾಯ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2011ರಲ್ಲೂ ಇದೇ ಪ್ರಶಸ್ತಿ ಪಡೆದಿದ್ದ ಅವರು, ಈ ಪ್ರಶಸ್ತಿಯನ್ನು ಎರಡು ಬಾರಿ ಪಡೆದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಹಿಳಾ ಸಾಧಕಿರಗೆ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳಾ ಕ್ರಿಕೆಟ್ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಬಿಹಾರ ಕ್ರಿಕೆಟಿಗನಿಗೆ ಸಿಂಧಿಯಾ ಪ್ರಶಸ್ತಿ
2015-16ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬಿಹಾರದ ಕ್ರಿಕೆಟಿಗ ಶಾಬಾಜ್ ನದೀಮ್ ಅವರಿಗೆ ಮಾಧವರಾವ್ ಸಿಂಧಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಧನೆಗೆ ಸಂದ ಗೌರವ
2015-16ನೇ ಸಾಲಿನಲ್ಲಿ ಉತ್ತಮ ಸಾಧನೆ ತೋರಿದ್ದಕ್ಕಾಗಿ ಮುಂಬೈ ಕ್ರಿಕೆಟ್ ಸಂಸ್ಥೆಗೆ ಉತ್ತಮ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶಾಂತಾ ರಂಗಸ್ವಾಮಿಗೆ ಜೀವಮಾನ ಸಾಧನೆ ಪ್ರಶಸ್ತಿ
ಕನ್ನಡತಿ ಹಾಗೂ ಮಾಜಿ ಕ್ರಿಕೆಟ್ ಆಟಗಾರ್ತಿಯಾದ ಶಾಂತಾ ರಂಗಸ್ವಾಮಿ ಅವರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications