Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶತಕ ಬಾರಿಸಲು ವಿಫಲವಾಗುತ್ತಿರುವ ವಿಚಾರದ ಕುರಿತು ಮೌನ ಮುರಿದ ಕೊಹ್ಲಿ

Kohli breaks the silence on the issue of failing to hit a century in ODI Cricket

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕೊನೆಯದಾಗಿ ಶತಕ ಬಾರಿಸಿದ್ದು 2019ರ ನವೆಂಬರ್‌ನಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ. ಇನ್ನು ಏಕದಿನ ಪಂದ್ಯದ ವಿಚಾರಕ್ಕೆ ಬಂದರೆ 2019ರ ಮಾರ್ಚ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸಿಡಿಸಿದ ಶತಕ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಕೊನೆಯ ಶತಕವಾಗಿದೆ. ಇದಾದ ಬಳಿಕ ವಿರಾಟ್ ಕೊಹ್ಲಿ ಶತಕವನ್ನು ಬಾರಿಸುವಲ್ಲಿ ಪದೇಪದೆ ವಿಫಲರಾಗುತ್ತಿದ್ದಾರೆ.

70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಅವರು 71ನೇ ಶತಕವನ್ನು ಯಾವಾಗ ಬಾರಿಸುತ್ತಾರೆ ಎಂದು ವಿರಾಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ವಿರಾಟ್ 71ನೇ ಅಂತಾರಾಷ್ಟ್ರೀಯ ಶತಕ ಬಾರಿಸುವ ಸಮಯ ಇನ್ನೂ ಬಂದೇ ಇಲ್ಲ.

ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಲಿದ್ದಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯುಂಟಾಯಿತು. 66 ರನ್ ಗಳಿಸಿ ಪೆವಿಲಿಯನ್ ಕಡೆಗೆ ವಿರಾಟ್ ಪಯಣ ಬೆಳೆಸಿದರು. ಪಂದ್ಯ ಮುಗಿದ ಬಳಿಕ ವಿರಾಟ್ ಶತಕ ಬಾರಿಸಲು ಪದೇಪದೆ ವಿಫಲವಾಗುತ್ತಿರುವ ವಿಷಯದ ಕುರಿತು ಮಾತನಾಡಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ನಾನು ಯಾವತ್ತೂ ವೈಯಕ್ತಿಕವಾಗಿ ಶತಕ ಬಾರಿಸಬೇಕು ಎಂದು ಆಟವಾಡಿಲ್ಲ , ಯಾವಾಗಲೂ ನಾನು ನನ್ನ ತಂಡಕ್ಕೋಸ್ಕರ ಮಾತ್ರ ಬ್ಯಾಟ್ ಮಾಡುತ್ತೇನೆ ಎಂದಿದ್ದಾರೆ ಕೊಹ್ಲಿ. ಒಂದು ವೇಳೆ ನಾನು ಶತಕ ಬಾರಿಸಿ ನನ್ನ ತಂಡ ಸೋತರೆ ಪ್ರಯೋಜನವೇನು , ಕ್ರಿಕೆಟ್ ಜೀವನ ಮುಗಿದ ನಂತರ ರನ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ತಂಡಕ್ಕೆ ಹೇಗೆ ಆಟ ಆಡಿದ್ದೇವೆ ಎನ್ನುವುದು ಮಾತ್ರ ಉಳಿದುಕೊಳ್ಳುತ್ತದೆ ಎಂದು ಕೊಹ್ಲಿ ಅವರು ಪ್ರತಿಕ್ರಿಯಿಸಿದರು.

Story first published: Saturday, March 27, 2021, 16:33 [IST]
Other articles published on Mar 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+