ಐಸಿಸಿ ಏಕದಿನ Ranking: ನಂ.1 ಸ್ಥಾನಕ್ಕೆ ಅಂಟಿಕೂತ ಕೊಹ್ಲಿ, ಬೂಮ್ರಾ

ನವದೆಹಲಿ, ನವಂಬರ್ 13: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಮಂಗಳವಾರ (ನವೆಂಬರ್ 13) ಪ್ರಕಟಿಸಲಾಗಿರುವ ಐಸಿಸಿ ನೂತನ ರ್ಯಾಂಕಿಂಗ್ ನಲ್ಲಿ ಇಬ್ಬರೂ ನಂ.1 ಸ್ಥಾನದಲ್ಲೇ ಉಳಿದಿದ್ದಾರೆ.
ಏಕದಿನ ಕ್ರಿಕೆಟ್ ನ ಬ್ಯಾಟ್ಸ್ಮನ್ ಗಳ ಯಾದಿಯಲ್ಲಿ ಒಟ್ಟು 899 ಅಂಕ ಗಳಿಸಿರುವ ಕ್ಯಾಪ್ಟನ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದರೆ, ಭಾರತದ ಉಪನಾಯಕ ರೋಹಿತ್ ಶರ್ಮಾ 871 ಅಂಕಗಳೊಂದಿಗೆ ಕೊಹ್ಲಿ ಬೆನ್ನಲ್ಲಿದ್ದಾರೆ. ನ್ಯೂಜಿಲ್ಯಾಂಡ್‌ನ ರಾಸ್ ಟೇಲರ್, ಇಂಗ್ಲೆಂಡ್ ನ ಜೋ ರೂಟ್, ಪಾಕಿಸ್ತಾನ ಆಟಗಾರ ಬಾಬರ್ ಅಝಮ್ 3-5ರೊಳಗೆ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ನಿಷೇಧಿತ ಆಟಗಾರ ಡೇವಿಡ್ ವಾರ್ನರ್, ಸೌತ್ ಆಫ್ರಿಕಾದ ಫಾ ಡು ಪ್ಲೆಸಿಸ್, ಶಿಖರ್ ಧವನ್, ನ್ಯೂಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್, ಸೌತಾಫ್ರಿಕಾ ಬ್ಯಾಟ್ಸ್ಮನ್ ಕ್ವಿಂಟನ್ ಡಿ'ಕಾಕ್ ಕ್ರಮವಾಗಿ 6ರಿಂದ 10ರಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಇತ್ತ ಬೌಲಿಂಗ್ ವಿಭಾಗದಲ್ಲಿ 841 ಅಂಕ ಕಲೆ ಹಾಕಿರುವ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಮೊದಲ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ ಆಟಗಾರ ರಶೀದ್ ಖಾನ್, ಭಾರತದ ಕುಲದೀಪ್ ಯಾದವ್, ಸೌತ್ ಆಫ್ರಿಕಾದ ಕಾಗಿಸೊ ರಬಾಡ, ಭಾರತದ ಯುಜುವೇಂದ್ರ ಚಾಹಲ್ ಕ್ರಮವಾಗಿ 2-5ನೇ ಶ್ರೇಯಾಂಕದಲ್ಲಿದ್ದಾರೆ.
ಟೆಸ್ಟ್ ರ್ಯಾಂಕಿಂಗ್ ನಲ್ಲಿ ಕೊಹ್ಲಿ (ಬ್ಯಾಟಿಂಗ್), ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ (ಬೌಲಿಂಗ್), ಶಕೀಬ್ ಅಲ್ ಹಸನ್ (ಆಲ್ ರೌಂಡರ್) ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಟಿ20 ಪಟ್ಟಿಯಲ್ಲಿ ಪಾಕ್ ಆಟಗಾರ ಬಾಬರ್ ಅಝಮ್ (ಬ್ಯಾಟಿಂಗ್), ಅಫ್ಘಾನ್ ಸ್ಟಾರ್ ರಶೀದ್ (ಬೌಲಿಂಗ್), ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್ ರೌಂಡರ್) ಮೊದಲ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications