Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿಯಲ್ಲಿರುವ ತಂತ್ರಗಾರಿಕೆ ವಿರಾಟ್ ಕೊಹ್ಲಿಯಲ್ಲಿ ಇಲ್ಲವಂತೆ!

ಎಂ ಎಸ್ ಧೋನಿಯಲ್ಲಿರುವ ತಂತ್ರಗಾರಿಕೆ ವಿರಾಟ್ ಕೊಹ್ಲಿಯಲ್ಲಿ ಇಲ್ಲವಂತೆ
Kohli Does Not Have MS Dhonis Tactical Expertise, Says Keshav Banerjee

ನವದೆಹಲಿ, ಮೇ 9: ವಿರಾಟ್ ಕೊಹ್ಲಿ ಮುಂದಾಳತ್ವದ ಭಾರತ ವಿಶ್ವಕಪ್ ತಂಡಕ್ಕೆ ಮಾಜಿ ನಾಯಕ ಎಂಎಸ್ ಧೋನಿ ಉತ್ತಮ ಮಾರ್ಗದರ್ಶಕರಾಗಬಲ್ಲರು ಎಂದು ಧೋನಿಯ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜೀ ಹೇಳಿಕೊಂಡಿದ್ದಾರೆ. ಧೋನಿ ರಾಂಚಿಯ ಶಾಲೆಯಲ್ಲಿದ್ದಾಗ ಕೇಶವ್ ಕ್ರೀಡಾ ಟೀಚರ್ ಆಗಿದ್ದರು.

ಪಂದ್ಯದ ಸ್ಥಿತಿಗತಿಯನ್ನು ಅರ್ಥೈಸಿ, ತಂತ್ರಗಾರಿಕೆ ಮೆರೆಯುವಲ್ಲಿ ಧೋನಿಗಿರುವ ಪರಿಣಿತಿ ಕೊಹ್ಲಿಗಿಲ್ಲ ಎಂದೂ ಕೇಶವ್ ಬ್ಯಾನರ್ಜೀ ಅಭಿಪ್ರಾಯಪಟ್ಟಿದ್ದಾರೆ. ಇಂಡೋ ಏಷ್ಯನ್ ನ್ಯೂಸ್ ಸರ್ವೀಸ್ (ಐಎಎನ್‌ಎಸ್) ಜೊತೆ ಗುರುವಾರ (ಮೇ 9) ಮಾತನಾಡುತ್ತ ಕೇಶವ್ ಹೀಗಂದರು.

'ಪಂದ್ಯವನ್ನು ಅರ್ಥೈಸಿಕೊಳ್ಳೋದು ಮತ್ತು ತಂತ್ರಗಾರಿಕೆಯಲ್ಲಿ ಧೋನಿಯಂತೆ ಯಾರೂ ಇಲ್ಲ. ಕೊಹ್ಲಿಯಲ್ಲೂ ಈ ವಿಶೇಷತೆಯಿಲ್ಲ. ಏನಾದರೂ ಸಲಹೆ ಪಡೆಯುವುದಿದ್ದರೆ ಕೊಹ್ಲಿ ಯಾವಾಗಲೂ ಧೋನಿಯ ಸಹಾಯ ಪಡೆಯಬಹುದು' ಎಂದು ಬ್ಯಾನರ್ಜೀ ಹೇಳಿದ್ದಾರೆ.

ಮಾತು ಮುಂದುವರೆಸಿ ಕೇಶವ್, 'ಭಾರತ ತಂಡದಲ್ಲಿ ಒಂದು ವೇಳೆ ಧೋನಿ ಇರದಿದ್ದರೆ ಕೊಹ್ಲಿಗೆ ಸಹಾಯ ಮಾಡುವವರು ಯಾರೂ ಇಲ್ಲ. ಧೋನಿ ರೀತಿಯ ನಾಯಕತ್ವ ಬರಲು ಕೊಹ್ಲಿಗೆ ಇನ್ನೂ ಕೊಂಚ ಕಾಲಾವಕಾಶ ಬೇಕಿದೆ' ಎಂದಿದ್ದಾರೆ. ಧೋನಿಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಮಾತನಾಡಿರುವ ಬ್ಯಾನರ್ಜೀ, ಧೋನಿಗೆ 4ನೇ ಕ್ರಮಾಂಕ ಸೂಕ್ತ ಎಂದಿದ್ದಾರೆ.

Story first published: Thursday, May 9, 2019, 22:35 [IST]
Other articles published on May 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+