For Quick Alerts
ALLOW NOTIFICATIONS  
For Daily Alerts
 

Virat Kohli: 32 ರನ್ ಬಾರಿಸುತ್ತಲೇ ವಿರಾಟ್ ದಾಖಲೆ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್‌ ಸರಣಿಗಳು ಮುಗಿದಿವೆ. ಈಗ ಉಭಯ ದೇಶಗಳ ನಡುವಣ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ವೇಳೆ ಎಲ್ಲರ ಚಿತ್ತ ನೆಟ್ಟಿದೆ. ಏಕದಿನ ಸರಣಿಯಲ್ಲಿ ಎಲ್ಲ ಅಭಿಮಾನಿಗಳ ಕಣ್ಣುಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿರಲಿವೆ. ಈ ಸ್ಟಾರ್ ಆಟಗಾರರು ಈಗ ಭಾರತದ ಪರ ಏಕದಿನ ಕ್ರಿಕೆಟ್‌ ಮಾತ್ರ ಆಡಲಿದ್ದಾರೆ. ಹೀಗಾಗಿ ಅಭಿಮಾನಿಗಳ ಕಣ್ಣು ಈ ಆಟಗಾರರ ಮೇಲೆ ನೆಟ್ಟಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೊದಲೆರೆಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರು. ಆದರೆ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದರು. ಈ ಮೂಲಕ ಭಾರತದಲ್ಲೂ ಆರ್ಭಟಿಸಲು ತಯಾರಾಗಿರುವುದಾಗಿ ವಿರಾಟ್‌ ತಿಳಿಸಿದಂತೆ ಇತ್ತು. ರಾಂಚಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಅಬ್ಬರದ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ಈ ವೇಳೆ ವಿರಾಟ್ ಕೊಹ್ಲಿ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

Kohli Eyes Massive Records Against South Africa in ODI Series Set to Eclipse Kallis

ದಕ್ಷಿಣ ಆಫ್ರಿಕಾದಲ್ಲಿ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಆಡುವ ಕನಸು ಕಾಣುತ್ತಿರುವ ವಿರಾಟ್ ಅವರಿಗೆ ಈ ಸರಣಿ ಪ್ರಮುಖವಾಗಿದೆ. ಈ ಸರಣಿಯಲ್ಲಿ ವಿರಾಟ್‌ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದೇ ಆದಲ್ಲಿ ದೊಡ್ಡ ದಾಖಲೆ ಬರೆಯಬಹುದಾಗಿದೆ. ವಿರಾಟ್‌ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ 32 ರನ್‌ ಬಾರಿಸುವಲ್ಲಿ ಸಫಲರಾದರೆ, ದೊಡ್ಡ ದಾಖಲೆ ಬರೆಯಬಹುದಾಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇವರು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ 57 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 2001 ರನ್ ಕಲೆ ಹಾಕಿದ್ದಾರೆ. ಈ ವೇಳೆ 5 ಶತಕ, 8 ಅರ್ಧಶತಕ ಬಾರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಜಾಕ್‌ ಕಾಲಿಸ್‌ ಇದ್ದು, ಇವರು ಆಡಿದ 37 ಪಂದ್ಯಗಳಲ್ಲಿ 1535 ರನ್‌ ಕಲೆ ಹಾಕಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧ 31 ಪಂದ್ಯಗಳಲ್ಲಿ 65ರ ಸರಾಸರಿಯಲ್ಲಿ 1504 ರನ್‌ ಕಲೆ ಹಾಕಿದ್ದಾರೆ. ವಿರಾಟ್ ಮೊದಲ ಪಂದ್ಯದಲ್ಲಿ 32 ರನ್ ಬಾರಿಸಿದಲ್ಲಿ ಜಾಕ್‌ ಕಾಲಿಸ್‌ ದಾಖಲೆಯನ್ನು ಅಳಿಸುವ ಸನಿಹದಲ್ಲಿದ್ದಾರೆ.

ಶತಕ ಬಾರಿಸುತ್ತಲೇ ದಾಖಲೆ

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಂದು ಶತಕ ಬಾರಿಸದರೆ, ಮತ್ತೊಂದು ದಾಖಲೆ ಬರೆಯಲಿದ್ದಾರೆ. ಶತಕ ಬಾರಿಸುವಲ್ಲಿ ವಿರಾಟ್ ಸಫಲರಾದಲ್ಲಿ ಎಬಿಡಿ ಹಾಗೂ ಕ್ವಿಂಟನ್‌ ಡಿಕಾಕ್‌ ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ. ಉಭಯ ದೇಶಗಳ ನಡುವಣ ಏಕದಿನ ಸರಣಿಯಲ್ಲಿ ಎಬಿಡಿ, ಡಿಕಾಕ್‌ ತಲಾ 6 ಶತಕ ಬಾರಿಸಿದ್ದಾರೆ. ವಿರಾಟ್ 5 ಶತಕ ಸಿಡಿಸಿದ್ದಾರೆ.

Story first published: Saturday, November 29, 2025, 8:05 [IST]
Other articles published on Nov 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+