Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ-ಹೆಡ್‌ ಹ್ಯಾಂಡ್‌ಶೇಕ್‌ ವಿವಾದ: ಟ್ರಾವಿಸ್‌ ಕುಟುಂಬಕ್ಕೆ ದ್ವೇಷ ಸಂದೇಶ

ಐಪಿಎಲ್ 2026 ರ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪಂದ್ಯದ ನಂತರ ಕೊಹ್ಲಿ ಅವರು ಹೆಡ್‌ರ ಹಸ್ತಲಾಘವವನ್ನು ನಿರಾಕರಿಸಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಘಟನೆಯ ನಂತರ ನೆಟ್ಟಿಗರು ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಅವರನ್ನು ಆನ್‌ಲೈನ್‌ನಲ್ಲಿ ಗುರಿಯಾಗಿಸಿಕೊಂಡಿರುವುದು, ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಸ್ತಲಾಘವ ವಿವಾದದ ನಂತರ ತನಗೆ, ತನ್ನ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಕಾಮೆಂಟ್‌ಗಳು ಬರುತ್ತಿವೆ ಎಂದು ಟ್ರಾವಿಸ್‌ ಹೆಡ್‌ ಪತ್ನಿ ಜೆಸ್ಸಿಕಾ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ 'ದಿ ಅಡ್ವರ್ಟೈಸರ್' ಜೊತೆ ಮಾತನಾಡಿದ ಅವರು, "ನಾನು ಬೆಳಿಗ್ಗೆ ನನ್ನ ಸಾಮಾಜಿಕ ಮಾಧ್ಯಮ ನೋಡಿದಾಗ ಅವುಗಳು ಟ್ರೋಲರ್‌ಗಳಿಂದ ತುಂಬಿ ಹೋಗಿದ್ದವು. ಹಲವರು ನನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ" ಎಂದು ಆತಂಕ ವ್ಯಕ್ತಪಡಿಸಿದರು.

Kohli Handshake Row

ಈ ಹಿಂದೆ 2023ರ ಏಕದಿನ ವಿಶ್ವಕಪ್ ಫೈನಲ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ 2024ರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿದಾಗಲೂ ಇದೇ ರೀತಿ ಟ್ರೋಲಿಂಗ್ ಎದುರಾಗಿತ್ತು ಎಂದು ಜೆಸ್ಸಿಕಾ ನೆನಪಿಸಿಕೊಂಡರು. ಈಗ ಐಪಿಎಲ್ 2026ರಲ್ಲೂ ಇದು ಮರುಕಳಿಸುತ್ತಿದೆ ಎಂದರು. ಕ್ರೀಡೆಯಲ್ಲಿ ಆಕ್ರಮಣಕಾರಿ ಮನೋಭಾವ ಸಹಜ, ಆದರೆ ಆಟದ ಹಿಂದೆ ನಿಜವಾದ ಮನುಷ್ಯರು ಹಾಗೂ ಅವರ ಕುಟುಂಬದವರು ಇರುತ್ತಾರೆ ಎಂದು ನೆನಪಿಟ್ಟುಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ಪರಸ್ಪರ ಗೌರವದ ಬಗ್ಗೆ ಸಮಾಜದಲ್ಲಿ ಚರ್ಚೆ ನಡೆಯಬೇಕು ಎಂದು ಅವರು ಸಲಹೆ ನೀಡಿದರು.

ವಿವಾದ ಏಕೆ?

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ತಂಡಗಳು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯನ್ನು, ಎಸ್‌ಆರ್‌ಎಚ್‌ ಫೀಲ್ಡರ್‌ ಟ್ರಾವಿಸ್ ಹೆಡ್‌ ಕೆಣಕಿದರು. ಟ್ರಾವಿಸ್ ಹೆಡ್ ಕೊಹ್ಲಿಯನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಆಡುವಂತೆ ಪ್ರಚೋದಿಸಿದಾಗ, ಕೊಹ್ಲಿ "ನೀವೇ ಬಂದು ಬೌಲಿಂಗ್ ಮಾಡಿ" ಎಂದು ಸವಾಲು ಎಸೆದರು. ಕೊಹ್ಲಿ ಔಟಾದ ಕೂಡಲೇ, ಹೆಡ್, "ನನಗೆ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ" ಎಂದು ನಸುನಗುತ್ತಾ ಕೀಟಲೆ ಮಾಡಿದರು. ಈ ಕಾಮೆಂಟ್‌ಗಳು ಕೊಹ್ಲಿಗೆ ಇಷ್ಟವಾಗದ ಕಾರಣ ಪಂದ್ಯದ ಬಳಿಕ ಹೆಡ್‌ಗೆ ಹಸ್ತಲಾಘವ ನೀಡಲು ನಿರಾಕರಿಸಿದರು ಎಂದು ತಿಳಿದುಬಂದಿದೆ.

Story first published: Monday, May 25, 2026, 12:46 [IST]
Other articles published on May 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+