ಕ್ರಿಶ್ಚಿಯಾನೋ ರೊನ್ಯಾಲ್ಡೋಗೆ ಕೊಹ್ಲಿಯನ್ನು ಹೋಲಿಸಿದ ಲಾರಾ

ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಮತ್ತೆ ಹೊಗಳಿಕೆ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಬ್ರಿಯಾನ್ ಲಾರಾ ಫೂಟ್ಬಾಲ್ ದಂತಕತೆಯೊಂದಿಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರನ್ನು ಹೋಲಿಸಿದ್ದಾರೆ. ಕೊಹ್ಲಿ ಬದ್ಧತೆಯ ವಿಚಾರವಾಗಿ ಈ ಹೋಲಿಕೆಯನ್ನು ಮಾಡಿದ್ದಾರೆ ಬ್ರಿಯಾನ್ ಲಾರಾ.
ಬ್ರಿಯಾನ್ ಲಾರಾ ಕೊಹ್ಲಿ ಅವರ ಆಟದ ಬದ್ಧತೆಯನ್ನು ಫುಟ್ಬಾಲ್ ದಂತಕತೆ ಕ್ರಿಶ್ಚಿಯಾನೋ ರೋನ್ಯಾಲ್ಡೋ ಅವರ ಬದ್ಧತೆಗೆ ಹೋಲಿಸಿದ್ದಾರೆ ಲಾರಾ. ಆಟದ ಕೌಶಲ್ಯದ ವಿಚಾರಕ್ಕೆ ಬಂದಾಗ ರೋಹಿತ್ ಶರ್ಮಾ, ಕೆಎಲ್ ರಾಹುಲ್ ತುಂಬಾ ಮುಂದಿದ್ದಾರೆ ಎನಿಸುವುದಿಲ್ಲ. ಆದರೆ ಆಟದ ಮೇಲೆ ಕೊಹ್ಲಿಯವರ ಬದ್ಧತೆ ಕೊಹ್ಲಿಯನ್ನು ಶ್ರೇಷ್ಠರನ್ನಾಗಿಸಿದೆ ಎಂದಿದ್ದಾರೆ.
ಆಟದ ಬಗ್ಗೆ ಮಾತ್ರವಲ್ಲದೆ ಕೊಹ್ಲಿಯ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಾಮರ್ಥ್ಯದ ಬಗ್ಗೆ ಕೂಡ ಲಾರಾ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯದಲ್ಲೂ ಕೊಹ್ಲಿ ಉತ್ಕೃಷ್ಟ ಮಟ್ಟದಲ್ಲಿದ್ದಾರೆ ಎಂದಿದ್ದಾರೆ. ಮಾತ್ರವಲ್ಲದೆ ಎಲ್ಲಾ ಕಾಲಘಟ್ಟದ ಅತ್ಯುತ್ತಮ ಆಟಗಾರರ ಪೈಕಿ ಕೊಹ್ಲಿಯೂ ಒಬ್ಬರು ಎಂದು ಲಾರಾ ಹೇಳಿದ್ದಾರೆ.
ಕೊಹ್ಲಿ ಜೊತೆಗೆ ಲಾರಾ ಅವರು ಇಂಗ್ಲೆಂಡ್‌ನ ಮತ್ತೋರ್ವ ಆಟಗಾರನ ಬಗ್ಗೆಯೂ ಲಾರಾ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಅದು ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟ್ರೋಕ್ಸ್. ವಿಶ್ವಕಪ್‌ನಲ್ಲಿ ಹಾಗೂ ಆ್ಯಾಶಸ್‌ನಲ್ಲಿ ಬೆನ್ ಸ್ಟ್ರೋಕ್ ಅಧ್ಭುತ ಆಟವನ್ನು ಪ್ರದರ್ಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications