ಮೆಸ್ಸಿ, ರೊನಾಲ್ಡೊ ಸಾಲಿನಲ್ಲಿ ಟೀಮ್ ಇಂಡಿಯಾ ನಾಯಕ ಕೊಹ್ಲಿ!

ಹೊಸದಿಲ್ಲಿ, ಜೂನ್ 12: ಫೋಬ್ಸ್ ನಿಯತಕಾಲಿಕೆ ಪ್ರತಿ ವರ್ಷ ಪ್ರಕಟಿಸುವ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಅಗ್ರಮಾನ್ಯ ಅಥ್ಲೀಟ್‌ಗಳ ಪೈಕಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕಮಾತ್ರ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಫೋಬ್ಸ್ ಬುಧವಾರ ಪ್ರಕಟಿಸಿರುವ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಅಗ್ರಮಾನ್ಯ ಅಥ್ಲೀಟ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಇತರ ಒಡಂಬಡಿಕೆಗಳಿಂದ ಒಟ್ಟು 145 ಕೋಟಿ ರೂ. ಹಾಗೂ ವೇತನ ರೂಪದಲ್ಲಿ 28 ಕೋಟಿ ರೂ. ಆದಾಯ ಹೊಂದಿದ್ದಾರೆ. ಈ ಮೂಲಕ ಅಗ್ರ ನೂತರ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವರ್ಷ ಇದೇ ಪಟ್ಟಿಯಲ್ಲಿ ವಿರಾಟ್ 83ನೇ ಸ್ಥಾನದಲ್ಲಿದ್ದರು.
ಈ ಪಟ್ಟಿಯಲ್ಲಿ ಎಫ್‌ಸಿ ಬಾರ್ಸಿಲೋನಾದ ತಾರೆ ಲಿಯೋನೆಲ್ ಮೆಸ್ಸಿ (881, ಕೋಟಿ ರೂ.) ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅಮೆರಿಕದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಅಗ್ರಸ್ಥಾನದಲ್ಲಿದ್ದರು. ಇನ್ನು ಮೆಸ್ಸಿ ಅವರ ದೀರ್ಘಕಾಲದ ಎದುರಾಳಿ ಯುವೆಂಟಸ್ ತಂಡದ ಫಾರ್ವರ್ಡ್ ಕ್ರಿಸ್ಟಿಯಾನೊ ರೊನಾಲ್ಡೊ (756 ಕೋಟಿ ರೂ.) ದ್ವಿತೀಯ ಸ್ಥಾನ ಹೊಂದಿದ್ದಾರೆ. ಮತ್ತೊಬ್ಬ ಫುಟ್ಬಾಲ್ ತಾರೆ ಬ್ರೆಜಿಲ್‌ನ ನೆಯ್ಮಾರ್ (728 ಕೋಟಿ ರೂ.) ತೃತೀಯ ಸ್ಥಾನ ಪಡೆದಿದ್ದಾರೆ.
ಇನ್ನು ನಾಲ್ಕನೇ ಸ್ಥಾನದಲ್ಲಿ ಅಮೆರಿಕದ ಬಾಕ್ಸರ್ ಕ್ಯಾನೆಲೊ ಅಲ್ವರೆಸ್ ಮತ್ತು ಐದನೇ ಸ್ಥಾನದಲ್ಲಿ ಸಿಜರ್ಲೆಂಡ್‌ನ ಟೆನಿಸ್ ದಂತಕತೆ ರೋಜರ್ ಫೆಡರರ್ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಅಗ್ರ 100 ಅಥ್ಲೀಟ್‌ಗಳ ಪಟ್ಟಿಯಲ್ಲಿ 63ನೇ ಸ್ಥಾನದಲ್ಲಿರುವ ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಏಕಮಾತ್ರ ಮಹಿಳೆ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications