ಕೊಹ್ಲಿಗೇನೋ ಹೇಳಲಿಕ್ಕಿದೆ; ನಾಳೆ ಮಧ್ಯಾಹ್ನ ಮಿಸ್ ಮಾಡ್ದೆ ಬನ್ನಿ..

ನವದೆಹಲಿ, ಮೇ 10: ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಏನೋ ಹೇಳಲಿಕ್ಕಿದೆ. ಅಭಿಮಾನಿಗಳ ಜೊತೆ ಏನನ್ನೋ ಅವರು ಚರ್ಚಿಸಲು ಬಯಸಿದ್ದಾರೆ. ಹೀಗಂತ ಅವರೇ ಅವರ ಟ್ವಿಟರ್ ಪೇಜಿನಲ್ಲಿ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯ ಟ್ವಿಟರ್ ಪೇಜಿಗೆ ಭೇಟಿಕೊಟ್ಟರೆ ಅಲ್ಲಿ ಪೇಜ್ ಮೇಲ್ಭಾಗದಲ್ಲೇ ವಿರಾಟ್ ಅವರ ವೀಡಿಯೋವೊಂದು ಕಾಣಿಸುತ್ತದೆ. ಅದರಲ್ಲಿ ವಿರಾಟ್, ನಾಳೆ ಮಧ್ಯಾಹ್ನ 1.30ಕ್ಕೆ ನಿಮ್ಮಲ್ಲಿ ಏನನ್ನೋ ಚರ್ಚಸಬೇಕಿದೆ. ನನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಗೆ ತಪ್ಪದೆ ಬನ್ನಿ ಅಂತ ವಿನಂತಿಸಿಕೊಂಡಿದ್ದಾರೆ.
ಯಾವ ಸಂಗತಿಯ ಬಗ್ಗೆ ನಾಳೆ ಚರ್ಚೆಯೆಂಬುದನ್ನು ಕೊಹ್ಲಿ ಹೇಳಿಕೊಂಡಿಲ್ಲ. ಅಂತೂ ಏನೋ ಮಹತ್ವದ ಸಂಗತಿಯನ್ನಂತೂ ಹೇಳಲಿಕ್ಕಿರುವುದು ನಿಜ. ಅದು ಆರ್ಸಿಬಿ ಸೋಲಿನ ಬಗ್ಗೆಯೋ ಅಥವಾ ಅನುಷ್ಕಾ ಬಗೆಗಿನ ಸಿಹಿ ಸಂಗತಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ನಾಳೆ ಮಧ್ಯಾಹ್ನ ಒಂದೂವರೆ ಗಂಟೆಗೆ ಕೊಹ್ಲಿಯ ಫೇಸ್ಬುಕ್, ಇನ್ಸ್ಟಾಗ್ರಾಮ್ ಗೆ ತಪ್ಪದೆ ಬನ್ನಿಯಷ್ಟೇ, ಕೊಹ್ಲಿ ಕಾಯ್ತಿರ್ತಾರೆ..
Story first published: Thursday, May 10, 2018, 19:10 [IST]
Other articles published on May 10, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications