ಒಂದೇ ದಿನ ಎರಡೆರಡು ಮ್ಯಾಚು: ಇಕ್ಕಟ್ಟಿನಲ್ಲಿ ವಿರಾಟ್ ಕೊಹ್ಲಿ!

Posted By: Sadashiva
Kohli needs to be in two places at once on June 27

ನವದೆಹಲಿ, ಮೇ 9: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈಗ ಇಕ್ಕಟ್ಟಿನಲ್ಲಿದ್ದಾರೆ. ಒಂದೇ ದಿನ ಅವರು ಎರಡು ಪಂದ್ಯಗಳಲ್ಲಿ ಪಾಲ್ಗೊಳ್ಳಬೇಕಾಗಿ ಬಂದಿದೆ. ಎರಡೂ ಇಂಪಾರ್ಟೆಂಟು ಮ್ಯಾಚುಗಳೇ. ಆದರೆ ಯಾವ ಕಡೆ ಹೋಗೋದು ಅಂತ ಕೊಹ್ಲಿಯೀಗ ತಲೆ ಕೆರೆದುಕೊಳ್ಳಬೇಕಾಗಿ ಬಂದಿದೆ!

ಇಂಗ್ಲೆಂಡ್ ಸರ್ರೆ ವೆಬ್ಸೈಟ್ ನಲ್ಲಿ 'ಟೀಮ್ ಇಂಡಿಯಾ ಪ್ರವಾಸ ಸಂದರ್ಭ ಇಲ್ಲಿಗೆ ಆಗಮಿಸುವ ವಿರಾಟ್ ಕೊಹ್ಲಿ ಪಂದ್ಯ ನಡೆಯುವ ತಿಂಗಳಿನ ಉದ್ದಕ್ಕೂ ನಮ್ಮ ಜೊತೆಗಿರಲಿದ್ದಾರೆ' ಎಂದಿದೆ. ಇತ್ತ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಐರ್ಲೆಂಡ್ ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಗೆ ಕೊಹ್ಲಿಯನ್ನು ಆರಿಸಿದೆ. ಸರ್ರೆ ಪಂದ್ಯಾಟ ಜೂನ್ 25ರಿಂದ 28ರ ವರೆಗೆ ನಡೆಯಲಿದ್ದರೆ, ಐರ್ಲೆಂಡ್ ಪಂದ್ಯಾಟ ಜೂನ್ 27ರಿಂದ 29ರ ವರೆಗೆ ನಡೆಯಲಿದೆ. ಹಾಗಾದರೆ ವಿರಾಟ್ ಯಾವುದರಲ್ಲಿ ಪಾಲ್ಗೊಳ್ಳಬೇಕು?!

ಎರಡೂ ಸ್ಥಳಗಳಿಗೂ ಸಾವಿರಾರು ಮೈಲುಗಟ್ಟರೆ ದೂರವಿರುವಾಗ ಕೊಹ್ಲಿ ಯಾವ ಪಂದ್ಯದಲ್ಲೀಂತ ಭಾಗವಹಿಸಿಯಾರು? ಭಾರತೀಯ ಆಯ್ಕೆ ಸಮಿತಿ ಕೊಹ್ಲಿಯನ್ನು ಆರಿಸುವಾಗ ಏನನ್ನು ತಲೆಯಲ್ಲಿಟ್ಟುಕೊಂಡು ಆರಿಸಿದೆಯೋ ಆ ದೇವರೇ ಬಲ್ಲ. ಅಂತೂ ಕೊಹ್ಲಿಯ ಪಾಡೀಗ ಆಚೂ ಅಲ್ಲ-ಈಚೂ ಅಲ್ಲ ಅನ್ನುವಂತಾಗಿದೆ. ಮುಂದೆ ಏನು ಮಾಡುತ್ತಾರೋ ಅದು ಕೊಹ್ಲಿಯೊಬ್ಬರಿಗೇ ಗೊತ್ತು!

ಆದರೆ ಮಾಹಿತಿಯೊಂದರ ಪ್ರಕಾರ ಕೊಹ್ಲಿ ಮೊದಲ ಐರ್ಲೆಂಡ್ ಟಿ20 ಪಂದ್ಯವನ್ನು ಆಡದೆ ನಾಲ್ಕು ದಿನಗಳ ಸರ್ರೆ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಎರಡನೇ ಐರ್ಲೆಂಡ್ ಟಿ20ಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನಲಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, May 9, 2018, 20:00 [IST]
Other articles published on May 9, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more