Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಪಂದ್ಯಕ್ಕೂ ಮುನ್ನ ಕ್ಯಾನ್‌ಬೆರಾದ ಕೆಫೆಯಲ್ಲಿ ಟೀಮ್ ಇಂಡಿಯಾ ಸ್ಟಾರ್ಸ್

Kohli, Pandya, Rahul and Agarwal head out in beautiful Canberra ahead of 1st T20I

ಶುಕ್ರವಾರ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕ್ಯಾನ್‌ಬೆರಾದ ಕೆಫೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಪಾಂಡ್ಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕ್ಯಾನ್‌ಬೆರಾದ ಕೆಫೆಯಲ್ಲಿ ಕಾಳ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಮಯಾಂಕ್ ಅಗರ್ವಾಲ್ ಪತ್ನಿ ಆಶಿತಾ ಸೂದ್ ಕೂಡ ಸಾಥ್ ನೀಡಿದ್ದಾರೆ.

ಕೊರೊನಾ ವೈರಸ್‌ನ ಹಿನ್ನೆಲೆಯಲ್ಲಿ ಬಯೋಬಬಲ್‌ನಲ್ಲಿರುವ ಕಾರಣ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಆಟಗಾರರಿಗೆ ಸಾಕಷ್ಟು ನಿರ್ಬಂಧಗಳು ಇದೆ. ಆದರೆ ಈ ನಿರ್ಭಂದದ ಚೌಕಟ್ಟಿನಲ್ಲಿಯೇ ಟೀಮ್ ಇಂಡಿಯಾ ಸದಸ್ಯರು ಕೆಫೆಗೆ ತೆರಳಿ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 1-2 ಅಂತರದಿಂದ ಕಳೆದುಕೊಂಡಿತ್ತು. ಈಗ ಆಸ್ಟ್ರೇಲಿಯಾ ತಂಡದ ವಿರುದ್ಧ ತಿರುಗಿ ಬೀಳುವ ಉತ್ಸಾಹದಲ್ಲಿ ಟೀಮ್ ಇಂಡಿಯಾ ಇದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಮತ್ತಷ್ಟು ಹುಮ್ಮಸ್ಸು ಪಡೆದುಕೊಳ್ಳಲಿದೆ.

ಚುಟುಕು ಕ್ರಿಕೆಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಹೋಲಿಸಿದರೆ ಟೀಮ್ ಇಂಡಿಯಾ ಸಾಕಷ್ಟು ಬಲಿಷ್ಟವಾಗಿರುವಂತೆ ಕಾಣಿಸುತ್ತದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಶಿಖರ್ ಧವನ್ ಜೊತೆಗೆ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ

Story first published: Friday, December 4, 2020, 10:58 [IST]
Other articles published on Dec 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+