For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ದಾಖಲೆ ಮೇಲೆ ವಿರಾಟ್ ಕಣ್ಣು: ಮುಂಬೈನಲ್ಲಿ ಬ್ರೇಕ್‌ ಆಗುತ್ತೆ ದೊಡ್ಡ ದಾಖಲೆ

ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ ವಿರಾಟ್ ಕೊಹ್ಲಿ ಮುಂಬೈನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅಂಗಳಕ್ಕೆ ಇಳಿಯುತ್ತಿದ್ದಂತೆ ಮಹತ್ವದ ಮೈಲಿಗಲ್ಲು ಮುಟ್ಟಲಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೂರನೇ ಟೆಸ್ಟ್‌ ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭರದ ಸಿದ್ಧತೆಗಳು ಆರಂಭವಾಗಿವೆ. ಆದರೆ ವಿರಾಟ್‌ ಕೊಹ್ಲಿ ಚಿತ್ತ ಮಾತ್ರ ಆ ಒಂದು ದಾಖಲೆಯತ್ತ ನೆಟ್ಟಿದೆ.

ಈ ಸರಣಿಯಲ್ಲಿ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಮುಂಬೈನಲ್ಲಿ ಇವರ ಬ್ಯಾಟ್‌ನಿಂದ ದೊಡ್ಡ ಪ್ರದರ್ಶನ ಮೂಡಿ ಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಮೂರನೇ ಟೆಸ್ಟ್‌ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ವಿರಾಟ್‌ ಪ್ಯಾಡ್ ಕಟ್ಟಿ ಬ್ಯಾಟ್ ಮಾಡಲು ಮೈದಾನಕ್ಕೆ ಇಳಿದಿದ್ದೇ ಆದರೆ, ಟೀಮ್ ಇಂಡಿಯಾದ ಮಾಜಿ ಕೋಚ್‌ ಹಾಗೂ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. .

Kohli Poised to Break Dravid s Record in Third Test Against New Zealand

ದ್ರಾವಿಡ್‌ ಸಮಕ್ಕೆ ನಿಂತಿರುವ ವಿರಾಟ್

ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಒಟ್ಟು 599 ಇನಿಂಗ್ಸ್‌ಗಳಲ್ಲಿ ಮೈದಾನಕ್ಕೆ ಇಳಿದಿದ್ದಾರೆ. ಇನ್ನು 600 ಇನಿಂಗ್ಸ್‌ ಪೂರೈಸಲು ಇನ್ನೊಂದೆ ಪಂದ್ಯ ಬಾಕಿ. ವಾಣಿಜ್ಯ ನಗರಿಯಲ್ಲಿ ನವೆಂಬರ್‌ 1 ರಿಂದ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ಮೈದಾನಕ್ಕಿಳಿದ ತಕ್ಷಣ, ಅವರು ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ದೇಶದ ಪರ ವೃತ್ತಿ ಜೀವನದಲ್ಲಿ 599 ಇನಿಂಗ್ಸ್‌ಗಳನ್ನು ಆಡಿದ್ದಾರೆ. ಅಲ್ಲದೆ ಅವರು ಇನ್ನೊಂದು ಪಂದ್ಯವನ್ನು ಆಡುವುದುನ್ನು ತಪ್ಪಿಸಿಕೊಂಡರು. ಹಾಗೆ ನೋಡಿದರೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600ಕ್ಕೂ ಹೆಚ್ಚು ಇನಿಂಗ್ಸ್‌ ಆಡಿದ ಹಿರಿಮೆ ಹೊಂದಿದ್ದಾರೆ. ಆದರೆ ಇದರಲ್ಲಿ ಏಷ್ಯಾ 11 ಪರ ಕೆಲವು ಪಂದ್ಯಗಳನ್ನು ಆಡಿದ್ದಾರೆ. ಈ ಎಲ್ಲ ಪಂದ್ಯಗಳನ್ನು ಲೆಕ್ಕಾ ಹಾಕಿದರೆ ಇವರು ಸಹ 600ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಸಾಧನೆ ಮಾಡಿದಂತೆ ಆಗುತ್ತದೆ. ಆದರೆ ರಾಹುಲ್‌ ದ್ರಾವಿಡ್ ಭಾರತದ ಪರ ಈ ಸಾಧನೆ ಮಾಡಿಲ್ಲ.

ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅಂಗಳಕ್ಕೆ ಇಳಿಯುತ್ತಿದ್ದಂತೆ ರಾಹುಲ್ ದ್ರಾವಿಡ್ ಅವರ ಸಾಧನೆಯ ಸಮಕ್ಕೆ ನಿಂತಿದ್ದಾರೆ. ಆದರೆ ವಿರಾಟ್ ಇನ್ನೊಂದು ಪಂದ್ಯದಲ್ಲಿ ಬ್ಯಾಟ್ ಮಾಡಿದರೆ, ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಈ ದಾಖಲೆ ಮೊದಲ ದಿನ ಮುರಿಯುತ್ತದೋ ಅಥವಾ ನಂತರ ದಿನಗಳಲ್ಲಿ ಮುರಿಯುತ್ತದೋ ಕಾದು ನೋಡಬೇಕಿದೆ.

Kohli Poised to Break Dravid s Record in Third Test Against New Zealand

ಸಚಿನ್‌ ನಂಬರ್ 1

ಭಾರತದ ಪರ ಅತಿ ಹೆಚ್ಚು ಇನಿಂಗ್ಸ್‌ಗಳಲ್ಲಿ ಅಂಗಳಕ್ಕೆ ಇಳಿದ ಖ್ಯಾತಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 782 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಈ ಸಾಧನೆ ಮಾಡುವುದು ಕೊಂಚ ಕಷ್ಟ ಇದ್ದಂತೆ ಕಾಣುತ್ತದೆ. ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರು ತಮ್ಮ ರೋಲ್ ಮಾಡಲ್‌ ಸಾಧನೆಯ ಹತ್ತಿರಕ್ಕೆ ಬರುತ್ತಾರಾ ಎಂಬುದೇ ಕುತೂಹಲ ಮೂಡಿಸಿದೆ.

Story first published: Wednesday, October 30, 2024, 14:20 [IST]
Other articles published on Oct 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+