For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ರೋಹಿತ್ ಹಾಗೂ ಕೋಚ್ ನಡುವೆ ಬಿರುಕು? ವಿಡಿಯೋ ವೈರಲ್‌

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಏಕದಿನ ಪಂದ್ಯ ರಾಯ್ಪುರದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಎರಡೂ ತಂಡಗಳು ರಾಯ್ಪುರ್ ತಲುಪಿವೆ. ಈಗ ಬರುತ್ತಿರುವ ಸುದ್ದಿಗಳ ಪ್ರಕಾರ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಅನುಭವಿ ಆಟಗಾರರು ಹಾಗೂ ಕೋಚ್‌ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತದೆ. ಇದಕ್ಕೆ ಪುಷ್ಠಿ ಎಂಬಂತೆ ವಿಮಾನ ನಿಲ್ದಾಣದ ಒಂದು ದೃಶ್ಯವೂ ಸಹ ಈಗ ಸಖತ್ ವೈರಲ್ ಆಗುತ್ತಿದೆ.

ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ನಡುವೆ ಸಂಬಂಧ ಒಡೆದ ಹಾಲಿನಂತೆ ಇದೆ ಎಂದು ಇತ್ತೀಚಿಗೆ ತಿಳಿದು ಬಂದಿತ್ತು. ಈಗ ಅನುಭವಿ ಆಟಗಾರರು ಹಾಗೂ ಕೋಚ್‌ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಮ್ಯಾನೇಜ್ಮೆಂಟ್‌ ಸಹ ಜಾಣ ಮೌನಕ್ಕೆ ಶರಣಾಗಿದೆ. ಮಂಗಳವಾರ ಎರಡು ವಿಡಿಯೋಗಳು ವೈರಲ್ ಆಗಿದ್ದು, ಈ ವಿಡಿಯೋಗಳು ಡ್ರೆಸ್ಸಿಂಗ್‌ ರೂಮ್‌ನ ಸ್ಥಿತಿಗತಿಯನ್ನು ಹೇಳುವಂತಿದೆ. ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ವಿಮಾನಕ್ಕಾಗಿ ಲಾಂಚ್‌ನಲ್ಲಿ ಕಾಯುತ್ತಿರುವ ದೃಶ್ಯ ಸಖತ್ ವೈರಲ್ ಆಗಿದೆ.

Kohli Rohit amp amp Coach Rift Airport Video Sparks Controversy Before IND vs SA Match

ಲಾಂಚ್‌ನಲ್ಲಿ ಅನುಭವಿ ವಿರಾಟ್, ರೋಹಿತ್‌ ಕಾಯುತ್ತಿದ್ದಾಗ ಅಲ್ಲಿಗೆ ಆಯ್ಕೆ ಸಮಿತಿಯ ಸದಸ್ಯ ಪ್ರಜ್ಞಾನ್‌ ಓಜಾ ಅವರು ಬಂದರು. ಅಲ್ಲದೆ ಉಭಯ ಆಟಗಾರರು ಅವರನ್ನು ಮಾತನಾಡಿಸಿದರು. ಈ ಮೂವರು ಟೀಮ್ ಇಂಡಿಯಾದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ. ಈ ಮೂವರು ಆತ್ಮೀಯ ಸ್ನೇಹವನ್ನು ಈ ವಿಡಿಯೋ ತೋರಿಸುತ್ತದೆ. ಈ ವಿಡಿಯೋ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈರಲ್‌ ವಿಡಿಯೋ

ಪ್ರಜ್ಞಾನ್ ಓಜಾ ಇದೇ ಸಮಯದಲ್ಲಿ ವಿರಾಟ್ ಹಾಗೂ ರೋಹಿತ್‌ ಶರ್ಮಾ ಅವರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗುವಹಿಸುತ್ತೀರಾ ಎಂಬುದನ್ನು ಕೇಳಿದಂತೆ ಕಾಣುತ್ತಿದೆ. ಈ ಇಬ್ಬರೂ ಆಟಗಾರರಿಗೆ ಬಿಸಿಸಿಐ ದೇಶೀಯ ಏಕದಿನ ಫಾರ್ಮೆಟ್‌ನಲ್ಲಿ ಆಡುವಂತೆ ಸೂಚಿಸಿದೆ. ವಿರಾಟ್‌, ಪ್ರಸ್ತುತ ಲಂಡನ್‌ನಲ್ಲಿ ಇರುವುದರಿಂದ ಈ ಟೂರ್ನಿಯಲ್ಲಿ ಆಡುವುದು ಕಷ್ಟ. ಹೀಗಾಗಿ ಬಿಸಿಸಿಐ ಪ್ರಜ್ಞಾನ್‌ ಓಜಾ ಅವರನ್ನು ಇಬ್ಬರೂ ಆಟಗಾರರನ್ನು ಸಂಪರ್ಕಿಸಲು ಕೇಳಿದಂತಿದೆ ಎಂದು ನಂಬಲಾಗಿದೆ.

ಪ್ರಜ್ಞಾನ್‌ ಓಜಾ ಹಾಗೂ ವಿರಾಟ್‌ ಕೊಹ್ಲಿ ಅವರು ಸಂಭಾಷಣೆಯಲ್ಲಿ ನಿರತರಾಗಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ಪ್ರಕಾರ ಪ್ರಜ್ಞಾನ್‌, ವಿರಾಟ್ ಅವರಿಗೆ ಏನನ್ನು ವಿವರಿಸುವಂತೆ ಇದೆ. ಈ ವೇಳೆ ವಿರಾಟ್‌ ಮುಖದ ಭಾವ ಬದಲಗಿತ್ತು ಎಂದು ಗುರುತಿಸಲಾಗಿದೆ. ಟೀಮ್ ಇಂಡಿಯಾದ ಆಯ್ಕೆ ಸಮಿತಿ ಅಜಿತ್‌ ಅಗರ್ಕರ್‌ ಅವರ ಸಂಪರ್ಕದಲ್ಲಿಲ್ಲದ ಕಾರಣ ಈ ಸಂಭಾವಣೆ ಮಹತ್ವ ಪಡೆದಿದೆ. ಇನ್ನು ಅಜಿತ್ ಅಗರ್ಕರ್ ಅವರ ಅಧಿಕಾರಾವಾಧಿ 2026ರ ಟಿ20 ವಿಶ್ವಕಪ್‌ ವರೆಗೂ ಇರಲಿದೆ. ಬಳಿಕ ಮುಖ್ಯ ಆಯ್ಕೆದಾರರ ಜವಾಬ್ದಾರಿಯನ್ನು ಪ್ರಜ್ಞಾನ್ ಓಜಾ ಹೊರುವ ಸಾಧ್ಯತೆ ಇದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಯಕೆ ಹೊಂದಿದ್ದಾರೆ.

Story first published: Tuesday, December 2, 2025, 20:37 [IST]
Other articles published on Dec 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+