ಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ವಿರಾಟ್, ರೋಹಿತ್, ಸಾನಿಯಾ

ನವದೆಹಲಿ, ಮೇ 4: ಭಾರತದ ಜನಪ್ರಿಯ ಕ್ರೀಡಾಪಟುಗಳಾದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಿಯಮಿತ ಓವರ್‌ನಲ್ಲಿನ ಭಾರತದ ಉಪನಾಯಕ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಝಾ ಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡಿದ್ದಾರೆ.
ವಿಶ್ವದಾದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ಪಿಡುಗು ಹತ್ತಿಕ್ಕಲು ದೇಣಿಗೆ ಸಂಗ್ರಹಿಸುವುದಕ್ಕಾಗಿ ವಿರಾಟ್, ರೋಹಿತ್, ಸಾನಿಯಾ ಕೈ ಜೋಡಿಸಿದ್ದಾರೆ. ಕೊರೊನಾದಿಂದ ಭಾರತದಲ್ಲಿ ಸುಮಾರು 1373 ಮಂದಿ ಸಾವನ್ನಪ್ಪಿದ್ದಾರೆ.
'ಐಫಾರ್ ಇಂಡಿಯಾ' ಕಾರ್ಯಕ್ರಮದ ಭಾಗವಾಗಿ ನಟರು, ಗಾಯಕರು, ಸಂಗೀತಗಾರರು, ಕ್ರೀಡಾಪಟುಗಳು, ಉದ್ಯಮಿಗಳು ಜೊತೆಯಾಗಿ ತಮ್ಮ ಮನೆಯಿಂದಲೇ ಜನರನ್ನು ಮನರಂಜಿಸಿ, ದೇಣಿಗೆ ಸಂಗ್ರಹಿಸಿ ಆ ಮೂಲಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೊಹ್ಲಿ, ರೋಹಿತ್, ಸಾನಿಯಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಸಂಗೀತ ಕಛೇರಿಯಲ್ಲಿ ಸಂಗ್ರಹವಾದ ಹಣ ಭಾರತದಲ್ಲಿ ಕೊರೊನಾವೈರಸ್ ಪಿಡುಗಿಗೆ ಪರಿಹಾರಾರ್ಥವಾಗಿ ಬಳಸಲಾಗುತ್ತದೆ. ಆನ್ ಲೈನ್ ಮೂಲಕ ದೇಣಿಗೆ ಸಂಗ್ರಹಿಸಿ ನೆರವಾಗುವ 'ಗಿವ್ ಇಂಡಿಯಾ' ಮೂಲಕ ಸಹಾಯ ಬೇಕಿದ್ದವರಿಗೆ ಹಣ/ಸೇವೆ ತಲುಪಲಿದೆ.
ಆನ್‌ಲೈನ್ ಸಂಗೀತ ಕಛೇರಿಯಲ್ಲಿ ಕೊಹ್ಲಿಯ ನಟಿ ಪತ್ನಿ ಅನುಷ್ಕಾ ಶರ್ಮಾ, ಶಾರೂಖ್ ಖಾನ್, ಎ.ಆರ್. ರಹಮಾನ್, ಉಸ್ತಾದ್ ಝಾಕಿರ್ ಹುಸೇನ್, ಅಮೀರ್ ಖಾನ್, ಐಶ್ವರ್ಯಾ ರೈ ಬಚ್ಚನ್, ಆಲಿಯಾ ಭಟ್, ಆಯುಷ್ಮಾನ್ ಖುರಾನಾ, ಬ್ರಿಯಾನ್ ಆಡಮ್ಸ್, ಗುಲ್ಜಾರ್, ನಿಕ್ ಜೊನಾಸ್, ಪ್ರಿಯಾಂಕಾ ಚೋಪ್ರಾ ಜೊನಾಸ್, ರಣವೀರ್ ಸಿಂಗ್, ಶ್ರೇಯಾ ಘೋಷಲ್, ಸೋಫಿ ಟರ್ನರ್, ಜೋಯಾ ಅಖ್ತರ್ ಮತ್ತು ವಿದ್ಯಾ ಬಾಲನ್ ಕೂಡ ಪಾಲ್ಗೊಂಡು ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications