For Quick Alerts
ALLOW NOTIFICATIONS  
For Daily Alerts
 

ರಾಯುಡು ಬೇಡ ಮಯಾಂಕ್‌ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!

ICC World Cup 2019 : ಅಂಬಾಟಿ ರಾಯುಡು ನಿವೃತ್ತಿಗೆ ಕೊಹ್ಲಿ, ಶಾಸ್ತ್ರಿ ಕಾರಣ..? | Ambati Rayudu
Kohli, Shastri wanted Mayank Agarwal as replacement

ಲಂಡನ್‌, ಜುಲೈ 03: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾದಿಂದ ಒಂದು ಅಚ್ಚರಿಯ ಸುದ್ದಿ ಹೊರಬಿದ್ದಿತ್ತು. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಡುವ 11ರ ಬಳಗದಿಂದ ಹೊರಬಿದ್ದು ಪಂದ್ಯದಲ್ಲಿ ವಾಟರ್‌ ಬಾಯ್‌ ಕೆಲಸ ನಿರ್ವಹಿಸಿದ್ದ ಆಲ್‌ರೌಂಡರ್‌ ವಿಜಯ್‌ ಶಂಕರ್‌, ಬಾಂಗ್ಲಾದೇಶ ವಿರುದ್ಧದ ಪಂದ್ಯದ ಹೊತ್ತಿಗೆ ಗಾಯಾಳು ಎಂದು ಪರಿಗಣಿಸಿ ವಿಶ್ವಕಪ್‌ನಿಂದ ಹೊರಗುಳಿಯುವಂತೆ ಮಾಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅಷ್ಟೇ ಅಲ್ಲದೆ ಟೀಮ್‌ ಇಂಡಿಯಾದ ಕಾಯ್ದಿರಿಸಲ್ಪಟ್ಟ ಆಟಗಾರ ಅಂಬಾಟಿ ರಾಯುಡು ಅವರ ಬದಲಾಗಿ ಮಯಾಂಕ್‌ ಅಗರ್ವಾಲ್‌ ಅವರನ್ನು ವಿಜಯ್‌ಗೆ ಬದಲಿ ಆಟಗಾರನಾಗಿ ನೇಮಕ ಮಾಡಿದ್ದು, ಕ್ರಿಕೆಟ್‌ ಪ್ರಿಯರ ಗುಮಾನಿಗೆ ಕಾರಣವಾಯಿತು.

ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್‌, ವಿಶ್ವಕಪ್‌ಗೂ ಮುನ್ನ ಪ್ರಕಟಿಸಿದ್ದ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಅಂಬಾಟಿ ರಾಯುಡು ಮುಂಚೂಣಿಯಲ್ಲಿದ್ದರು. ಆದರೆ, ಇದೀಗ ಗಾಯಾಳು ವಿಜಯ್‌ ಶಂಕರ್‌ ಅವರ ಸ್ಥಾನದಲ್ಲಿ ತಂಡಕ್ಕೆ ಬದಲಿ ಆಟಗಾರನ ಸೇರ್ಪಡೆ ಸಂದರ್ಭದಲ್ಲಿ ರಾಯುಡು ಬದಲಾಗಿ ಮಯಾಂಕ್‌ಗೆ ಸ್ಥಾನ ನೀಡಿದ್ದಾರೆ. ಆಯ್ಕೆ ಸಮಿತಿಯ ಈ ಅಚ್ಚರಿಯ ನಿರ್ಧಾರಕ್ಕೆ ಕಾರಣವಾದರೂ ಏನು? ಎಂಬ ಪ್ರಶ್ನೆ ಇದೀಗ ಹಲವರನ್ನು ಕಾಡುತ್ತಿದೆ.

ಈ ಎಲ್ಲಾ ಸಂಗತಿಗಳಿಗೆ ಹತ್ತಿರವಿರುವ ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಡನೆ ಮಾತನಾಡಿದ್ದು, ಅಂಬಾಟಿ ರಾಯುಡು ಅವರ ಬದಲಾಗಿ ಮಯಾಂಕ್‌ ಅಗರ್ವಾಲ್‌ ಅವರನ್ನು ಆಯ್ಕೆ ಮಾಡಿರುವುದು 5 ಸದಸ್ಯರ ಆಯ್ಕೆ ಸಮಿತಿಯಲ್ಲ ಬದಲಾಗಿ ಟೀಮ್‌ ಇಂಡಿಯಾದ ಮ್ಯಾನೇಜ್ಮೆಂಟ್‌ ಎಂದು ತಿಳಿಸಿದ್ದಾರೆ.

"ವಿಜಯ್‌ ಶಂಕರ್‌ ಅವರ ಬದಲಾಗಿ ಮಯಾಂಕ್‌ ಅವರನ್ನೇ ನೀಡಬೇಕು ಎಂದು ಟೀಮ್‌ ಇಂಡಿಯಾದ ಮ್ಯಾನೇಜ್ಮೆಂಟ್‌ ಕಟ್ಟುನಿಟ್ಟಾಗಿ ಹೇಳಿತ್ತು. ಹೀಗಾಗಿ ಇಲ್ಲಿ ಆಯ್ಕೆ ಸಮಿತಿಗೆ ಚರ್ಚೆ ಮಾಡುವ ಯಾವುದೇ ಅವಕಾಶವಿರಲಿಲ್ಲ," ಎಂದು ಮೂಲಗಳು ತಿಳಿಸಿವೆ. ಕೋಚ್‌ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾದ ಮ್ಯಾನೇಜ್ಮೆಂಟ್‌ನ ಡಿಸಿಷನ್‌ ಮೇಕರ್‌ಗಳಾಗಿದ್ದಾರೆ.

ಇದೇ ವರ್ಷ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಯಾಂಕ್‌ ಅಗರ್ವಾಲ್‌ ಸತತ ಎರಡು ಅರ್ಧಶತಕಗಳನ್ನು ದಾಖಲಿಸಿ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲು ಆರಂಭಿಕರಾಗಿ ಕಣಕ್ಕಿಳಿದು ಸ್ವಿಂಗ್‌ ಪಡೆಯುವ ಚೆಂಡಿನೆದುರು ಉತ್ತಮವಾಗಿ ಬ್ಯಾಟಿಂಗ್‌ ಮಾಡಬಲ್ಲ ಸಾಮರ್ಥ್ಯ ಮಯಾಂಕ್‌ ಅಗರ್ವಾಲ್‌ ಅವರದ್ದು. ಹೀಗಾಗಿ ಆರಂಭಿಕರಾಗಿ ಮಯಾಂಕ್‌ಗೆ ಸ್ಥಾನ ನೀಡಿ ಕೆ.ಎಲ್‌ ರಾಹುಲ್‌ ಅವರನ್ನು ಮರಳಿ ನಂ.4 ಸ್ಥಾನದಲ್ಲಿ ಆಡಿಸುವ ಉದ್ದೇಶದಿಂದ ಟೀಮ್‌ ಇಂಡಿಯಾದ ಮ್ಯಾನೇಜ್ಮೆಂಟ್‌ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ.

ಇನ್ನು ಮೂಲಗಳು ಹೇಳುವಂತೆ ಕಳೆದ ವರ್ಷ ನಡೆದ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳನ್ನು ಒಳಗೊಂಡ "ಎ' ತಂಡಗಳ ತ್ರಿಕೋನ ಸರಣಿಯಲ್ಲಿ ಮಯಾಂಕ್‌ ಅಗರ್ವಾಲ್‌ ನೀಡಿದ್ದ ಭರ್ಜರಿ ಪ್ರದರ್ಶನದ ಕಾರಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.

"ಮಯಾಂಕ್‌ 'ಎ' ತಂಡಗಳ ಸರಣಿಯಲ್ಲಿ ಹೊಂದಿರುವ ದಾಖಲೆಗಳನ್ನು ಗಮನಿಸಿದರೆ ನಾಲ್ಕು ಇನಿಂಗ್ಸ್‌ನಲ್ಲಿ ಅವರು 287 ರನ್‌ಗಳನ್ನು ಚಚ್ಚಿದ್ದಾರೆ. ಲೈಸ್ಟರ್‌ಶೈರ್‌ ಎದುರು 151 ರನ್‌ಗಳನ್ನು ಬಾರಿಸಿರುವುದನ್ನು ಮರೆಯುವಂತಿಲ್ಲ. ಅದರಲ್ಲೂ ಅವರು ಈ ರನ್‌ಗಳನ್ನು ಗಳಿಸಿರುವುದು ಜುಲೈ ಮತ್ತು ಆಗಸ್ಟ್‌ ಅವಧಿಯಲ್ಲಿ. ಹೀಗಾಗಿ ಅಲ್ಲಿನ ಸ್ಥಿತಿಗತಿಗಳಿಗೆ ಅವರು ಹೊಂದಿಕೊಳ್ಳುವುದು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಮಯಾಂಕ್‌ ಅವರನ್ನು ಆಯ್ಕೆ ಮಾಡಲಾಗಿದೆ," ಎಂದು ಮಯಾಂಕ್‌ ಆಯ್ಕೆ ಹಿಂದಿನ ಗುಟ್ಟನ್ನು ಮೂಲಗಳು ವಿವರಿಸಿವೆ.

Story first published: Wednesday, July 3, 2019, 19:03 [IST]
Other articles published on Jul 3, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+