ಅಭ್ಯಾಸ ಪಂದ್ಯಕ್ಕೆ ಶಾರ್ಟ್ಸ್ ಧರಿಸಿ ಬಂದ ಕೊಹ್ಲಿ ವಿರುದ್ಧ ಕಿಡಿ

ಅಭ್ಯಾಸ ಪಂದ್ಯಕ್ಕೆ ಶಾರ್ಟ್ಸ್ ಧರಿಸಿ ಬಂದ ಕೊಹ್ಲಿ ವಿರುದ್ಧ ಕಿಡಿ..! | Oneindia Kannada

ಸಿಡ್ನಿ, ನವೆಂಬರ್ 29: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಪಡೆ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದ ಟಾಸ್ ವೇಳೆ ವಿರಾಟ್ ಕೊಹ್ಲಿ ಅವರು ಶಾರ್ಟ್ಸ್ ಧರಿಸಿ ಬಂದಿದ್ದು ಈಗ ಚರ್ಚೆ ವಿಷ್ಯವಾಗಿದೆ.
ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆ ನಡುವೆ ಪಂದ್ಯ ಆಯೋಜನೆಗೊಂಡಿದ್ದು, ಮೊದಲ ದಿನದ ಆಟ ಒಂದು ಎಸೆತ ಕಾಣದೆ ರದ್ದುಗೊಂಡಿತ್ತು.
ಎರಡನೇ ದಿನ ಗುರುವಾರದಂದು ಟಾಸ್ ಸಂದರ್ಭದಲ್ಲಿ ಕೊಹ್ಲಿ ಶಾರ್ಟ್ಸ್ ಧರಿಸಿ ಅಂಗಳಕ್ಕೆ ಆಗಮಿಸಿದ್ದರು. ಟಾಸ್ ಪ್ರಕ್ರಿಯೆಯ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿತ್ತು.
ಈ ಟ್ವೀಟ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕೊಹ್ಲಿ ಅಗೌರವದ ವರ್ತನೆ ತೋರಿದ್ದಾರೆ ಎಂದು ಟ್ವಿಟರ್ ಬಳಕೆದಾರರು ವಿರಾಟ್ ವಿರುದ್ಧ ಕಿಡಿ ಕಾರಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ 3ರನ್ ಗಳಿಸಿ ಔಟಾಗಿದ್ದು ಬಿಟ್ಟರೆ, ಉಳಿದ ಆಟಗಾರರು ಉತ್ತಮವಾಗಿ ಆಡಿದರು.
ಕೊಹ್ಲಿ 87 ಎಸೆತಗಳಲ್ಲಿ 64ರನ್ ಬಾರಿಸಿದರೆ, ಪೃಥ್ವಿ ಶಾ 66, ಅಜಿಂಕ್ಯ ರಹಾನೆ 56, ಚೇತೇಶ್ವರ್ ಪೂಜಾರಾ 54, ಹನುಮ ವಿಹಾರಿ 53ರನ್ ಗಳಿಸಿ ತಂಡದ ಮೊತ್ತವನ್ನು 358 ಸ್ಕೋರಿಗೆ ಏರಿಸಿದರು. ದಿನದ ಅಂತ್ಯಕ್ಕೆ ಕ್ರಿಕೆಟ್ ಅಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 24ರನ್ ಸ್ಕೋರ್ ಮಾಡಿತ್ತು.
Story first published: Friday, November 30, 2018, 0:47 [IST]
Other articles published on Nov 30, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications