RCB vs KKR: 'ಕೊಹ್ಲಿ ಒಬ್ಬರೇ ಎಲ್ಲಿಯ ವರೆಗೂ ಆಡುತ್ತಾರೆ': ಸುನಿಲ್ ಗವಾಸ್ಕರ್
ಆರ್‌ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯ ಶುಕ್ರವಾರ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಿತು. 2016ರಿಂದ ಮಾಡಲು ಸಾಧ್ಯವಾಗದ್ದನ್ನು ಮಾಡಿ ತೋರಿಸುವ ಬಲದಿಂದ ಆರ್‌ಸಿಬಿ, ಕೆಕೆಆರ್ ವಿರುದ್ಧ ಕಣಕ್ಕೆ ಇಳಿಯಿತು. ಈ ಪಂದ್ಯದಲ್ಲಿ ಗೆಲುವಿನ ಕನಸು ಕಂಡಿದ್ದ, ಆರ್‌ಸಿಬಿ ಶಾಕ್ ಕಾದಿತ್ತು. ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು, ತಾವೇ ಒತ್ತಡಕ್ಕೆ ಒಳಗಾಗಿ ಎದುರಾಳಿಗೆ ಒತ್ತಡ ಹೇರಲಿಲ್ಲ.
ಆರ್‌ಸಿಬಿ ಮೂರನೇ ಪಂದ್ಯದಲ್ಲಿ ಸೋಲಿಗೆ ಹಲವು ಕಾರಣಗಳು ಎದ್ದು ಕಾಣುತ್ತವೆ. ಅದ್ರಲ್ಲಿ ಪ್ರಮುಖವಾದದ್ದು ಸ್ಟಾರ್ ಬ್ಯಾಟರ್‌ಗಳ ವೈಫಲ್ಯ. ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್‌ಗಳು ವೈಫಲ್ಯವನ್ನು ಕಂಡರು ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟವನ್ನು ನಡೆಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಶ್ರಮಿಸಿದರು. ಆರ್‌ಸಿಬಿ ಆಟದ ಕುರಿತಾಗಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ 59 ಎಸೆತಗಳಲ್ಲಿ 83* ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿವೆ. ಕೊಹ್ಲಿಯ ಇನ್ನಿಂಗ್ಸ್‌ಗೆ ಫಲವಾಗಿ ಆರ್‌ಸಿಬಿ 183 ರನ್ ಗುರಿ ನೀಡಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಯಾವುದೇ ಆಟಗಾರ ಕೊಹ್ಲಿಯನ್ನು ಬೆಂಬಲಿಸಿಲ್ಲ ಎಂದು ತಿಳಿಸಿದ್ದಾರೆ.
ಗವಾಸ್ಕರ್ ಹೇಳಿದ್ದೇನು?
ಓಂದು ವೇಳೆ ಬೇರೆ ಆಟಗಾರ ಕೊಹ್ಲಿಯನ್ನು ಬೆಂಬಲಿಸಿದ್ದರೆ ಆಗ ಚಿತ್ರಣವೇ ಬದಲಾಗುತ್ತಿತ್ತು. ಯಾರಾದರೂ ಕೊಹ್ಲಿಗೆ ಬೆಂಬಲ ನೀಡಿದ್ದರೆ 83ರ ಬದಲಿಗೆ ಅವರು 120 ರನ್ ಗಳಿಸಬಹುದಿತ್ತು ಎಂದು ಹೇಳಿದ್ದಾರೆ. ಕೊಹ್ಲಿ ಇನ್ನಿಂಗ್ಸ್ ಆರಂಭಿಸಲು ತೆರೆಯಲು ಬಂದರು ಮತ್ತು ಕೊನೆಯವರೆಗೂ ಅಜೇಯರಾಗಿ ಉಳಿದರು. ಇವರಿಗೆ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಸಾಥ್ ನೀಡಲಿಲ್ಲ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ಹಿರಿಯ ಆಟಗಾರ ಗವಾಸ್ಕರ್, "ಕೊಹ್ಲಿ ಏಕಾಂಗಿಯಾಗಿ ಎಷ್ಟು ಕೆಲಸ ಮಾಡುತ್ತಾನೆ ನೀವೇ ಹೇಳಿ? ಯಾರಾದರೂ ಅವರನ್ನು ಬೆಂಬಲಿಸಬೇಕಿತ್ತು, ಯಾರಾದರೂ ಇಂದು ಅವರನ್ನು ಬೆಂಬಲಿಸಿದ್ದರೆ, ಅವರು ಖಂಡಿತವಾಗಿಯೂ 83 ರ ಬದಲಿಗೆ 120 ರನ್ ಗಳಿಸುತ್ತಿದ್ದರು. ಇದು ತಂಡದ ಟೀಮ್ ವರ್ಕ್, ಒನ್ ಮ್ಯಾನ್ ಶೋ ಅಲ್ಲ ಎಂದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್ ಗಳಿಸಿತು. ಕೆಕೆಆರ್ ಕೇವಲ 16.5 ಓವರ್ ಗಳಲ್ಲಿ 3 ವಿಕೆಟ್ ಗಳ ಕಳೆದುಕೊಂಡು ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications