For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್‌, ರೋಹಿತ್‌ ನಿರ್ಮಿಸಿದ 10 ದಾಖಲೆಗಳು

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಈ ಜೋಡಿ ಹಲವು ದಾಖಲೆಗಳನ್ನು ನಿರ್ಮಿಸಿತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ನೀಡಿದ ಪ್ರದರ್ಶನವನ್ನೇ ಈ ಜೋಡಿ ಮುಂದುವರೆಸಿತು. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ರೊ-ಕೊ ಜೋಡಿ ನಿರ್ಮಿಸಿದ 10 ದಾಖಲೆಗಳ ಪಟ್ಟಿ ಇಲ್ಲಿದೆ.

1- ರೋಹಿತ್‌ ಶರ್ಮಾ ರಾಂಚಿಯಲ್ಲಿ ಮೂರು ಸಿಕ್ಸರ್ ಬಾರಿಸುವ ಮೂಲಕ ದೊಡ್ಡ ದಾಖಲೆಯನ್ನು ನಿರ್ಮಿಸದರು. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ ಶಾಹಿದ್ ಅಫ್ರೀದಿ ಅವರ ದಾಖಲೆ ಅಳಿಸಿ ಹಾಕಿದರು. ಶಾಹಿದ್ ಅಫ್ರೀದಿ ಏಕದಿನ ಕ್ರಿಕೆಟ್‌ನಲ್ಲಿ 351 ಸಿಕ್ಸರ್‌ ಬಾರಿಸಿದರು.

Kohli s 52nd Century amp amp Rohit s Sixes The 10 Big Records Broken in Ranchi

2- ವಿರಾಟ್‌ ಕೊಹ್ಲಿ ಒಂದೇ ಮಾದರಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸುವ ಮೂಲಕ 52ನೇ ಶತಕ ಸಿಡಿಸಿದರು. ಇದು ಏಕದಿನ ಫಾರ್ಮೆಟ್‌ನಲ್ಲಿ ವಿಶ್ವದಾಖಲೆ ಆಗಿದೆ. ಸಚಿನ್ ತೆಂಡೂಲ್ಕರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 51 ಶತಕ ಬಾರಿಸಿದ್ದರು.

3- ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿತ್ತು. ಇವರಿಬ್ಬರು ಭಾರತದ ಪರ 391 ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ.

4- ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 52ಕ್ಕೂ ಹೆಚ್ಚು ಬಾರಿ 50 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಇದ್ದು ಇವರಿಬ್ಬರು 83 ಐವತ್ತು ಪ್ಲಸ್ ಜೊತೆಯಾಟವಾಡಿದ್ದಾರೆ.

Kohli s 52nd Century amp amp Rohit s Sixes The 10 Big Records Broken in Ranchi

7 ಸಾವಿರನೇ ಶತಕ

5- ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್‌ ಶತಕ ಬಾರಿಸುತ್ತಿದ್ದಂತೆ ಮತ್ತೊಂದು ದಾಖಲೆ ನಿರ್ಮಿಸಿದರು. ಈ ಶತಕ ವಿಶ್ವ ಕ್ರಿಕೆಟ್‌ನಲ್ಲಿ ನಿರ್ಮಾಣವಾದ 7 ಸಾವಿರನೇ ಶತಕವಾಗಿದೆ.

6- ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪರ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದರು. ಇದು ಹರಿಣಗಳ ವಿರುದ್ಧ ಕೊಹ್ಲಿ ಸಿಡಿಸಿದ 6ನೇ ಶತಕವಾಗಿದೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ (5 ಶತಕ) ಹೆಸರಿನಲ್ಲಿತ್ತು.

7- ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೋಡಿ 20ನೇ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಶತಕದ ಜೊತೆಯಾಟವನ್ನು ಆಡಿ ದಾಖಲೆ ನಿರ್ಮಿಸಿದರು.

8- ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಪೂರ್ಣಗೊಳಿಸಿದರು. ಇವರು ಸದ್ಯ 2030 ರನ್‌ ಸಿಡಿಸಿದ್ದಾರೆ.

9- ರಾಂಚಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು. ಒಂದೇ ಮೈದಾನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಈಗ ವಿರಾಟ್ ಅವರು ಸಚಿನ್ ಅವರೊಂದಿಗೆ ಜಂಟಿ ಅಗ್ರ ಸ್ಥಾನ ಪಡೆದಿದ್ದಾರೆ. ಸಚಿನ್ ವಡೋಧರಾದಲ್ಲಿ ಆಡಿದ 7 ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದರು.

10- ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 349 ರನ್‌ ಸಿಡಿಸುತ್ತಿದ್ದಂತೆ ಈ ಮೈದಾನದಲ್ಲಿ ಕಲೆ ಹಾಕಿದ ದೊಡ್ಡ ಮೊತ್ತ ಎಂಬ ದಾಖಲೆ ನಿರ್ಮಿಸಿತು. ಇದಕ್ಕೂ ಮೊದಲು 2019ರಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗೆ 313 ರನ್‌ ಸಿಡಿಸಿತ್ತು.

Story first published: Monday, December 1, 2025, 11:43 [IST]
Other articles published on Dec 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+