ಇಂಡೋ- ಆಂಗ್ಲ ಕದನ, ಅಂಕಿ ಅಂಶ ಕುತೂಹಲಕಾರಿ
ಬರ್ಮಿಂಗ್ ಹ್ಯಾಂ, ಆಗಸ್ಟ್ 01: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗುತ್ತಿದ್ದು, ವಿರಾಟ್ ಕೊಹ್ಲಿ ಪಡೆ ಅಗ್ರಸ್ಥಾನದಲ್ಲಿ ಉಳಿಯಲು ಸಜ್ಜಾಗಿದೆ. ಈ ಕದನ ಕುತೂಹಲವನ್ನು ಅಂಕಿ ಅಂಶಗಳ ಮೂಲಕ ನೋಡುವ ಯತ್ನ ಇಲ್ಲಿದೆ...
2014ರ ಇಂಗ್ಲೆಂಡ್-ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ, ಭಾರತ ಹಾಗೂ ವಿರಾಟ್ ಕೊಹ್ಲಿ ಪಾಲಿಗೆ ಕಹಿ ನೆನಪಾಗಿ ಉಳಿದಿದೆ. ಆ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ, ಕೊಹ್ಲಿ ಕೇವಲ 134 ರನ್ ಗಳಿಸಿದ್ದರು.
ಭಾರತ ಈ ಸರಣಿಯನ್ನು (ಒಂದು ಪಂದ್ಯ ಡ್ರಾ ದೊಂದಿದೆ) 3-1ರಿಂದ ಕಳೆದುಕೊಂಡಿತ್ತು. ಆದರೆ, ಇದಾದ ಬಳಿಕ ತವರು ನೆಲದಲ್ಲಿ ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ ತಂಡದ ವಿರುದ್ಧ 4-0ರಲ್ಲಿ ಭಾರತ ಭರ್ಜರಿ ಜಯ ದಾಖಲಿಸಿತು.
2018ರ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾವು ಟಿ20 ಸರಣಿಯನ್ನು 2-1ರಲ್ಲಿ ಗೆದ್ದರೆ, ಏಕದಿನ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 2-1ರಲ್ಲಿ ತನ್ನದಾಗಿಸಿಕೊಂಡಿತು. ಈಗ ಕ್ರಿಕೆಟ್ ನ ಅಸಲಿ ಆಟ ಶುರುವಾಗಲಿದ್ದು, ಕೊಹ್ಲಿ ಹಾಗೂ ಜೋ ರೂಟ್ ನಾಯಕತ್ವದ ಸತ್ವಃಪರೀಕ್ಷೆ ನಡೆಯಲಿದೆ.

ಇಂಗ್ಲೆಂಡಿಗೆ ಇದು 1,000ನೇ ಟೆಸ್ಟ್ ಪಂದ್ಯ
1,000: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವು ಇಂಗ್ಲೆಂಡ್ ಪಾಲಿಗೆ ಸಾಧನೆಯಾಗಲಿದೆ. 1,000 ಟೆಸ್ಟ್ ಪಂದ್ಯವಾಡಲಿರುವ ಇಂಗ್ಲೆಂಡ್ ಅತಿ ಈ ಸಾಧನೆ ಮಾಡಿರುವ ಮೊದಲ ತಂಡವೆನಿಸಲಿದೆ. 357 ಗೆಲುವು, 345 ಡ್ರಾ, 297 ಪಂದ್ಯಗಳಲ್ಲಿ ಸೋಲು ಕಂಡಿದೆ.
3: ಕಳೆದ 33 ಟೆಸ್ಟ್ ಪಂದ್ಯಗಳಲ್ಲಿ ಭಾರತ 3 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. 23 ಪಂದ್ಯಗಳಲ್ಲಿ ಜಯ ದಾಖಲಿಸಿದೆ.

ಎಜ್ ಬಾಸ್ಟನ್ ನಲ್ಲಿ ಭಾರತ ಗೆಲುವು ಸಾಧಿಸಿಲ್ಲ
0: ಎಜ್ ಬಾಸ್ಟನ್ ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಇಲ್ಲಿ ತನಕ ಆರು ಬಾರಿ ಸ್ಪರ್ಧಿಮುಖಾಮುಖಿಯಾಗಿದ್ದು, ಐದು ಪಂದ್ಯಗಳಲ್ಲಿ ಸೋತಿರುವ ಭಾರತ, ಒಂದು ಪಂದ್ಯವನ್ನು ಗೆದ್ದಿಲ್ಲ.
294: ಇಂಗ್ಲೆಂಡಿನ ಮಾಜಿ ನಾಯಕ ಅಲೆಸ್ಟರ್ ಕುಕ್ ಅವರು ಎಜ್ ಬಾಸ್ಟನ್ ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ(294ರನ್) ದಾಖಲಿಸಿದ್ದಾರೆ. 2011ರಲ್ಲಿ ಭಾರತದ ವಿರುದ್ಧವೇ 545 ಎಸೆತಗಳಲ್ಲಿ 294ರನ್ ಚೆಚ್ಚಿದ್ದರು. ಈಗ ಕುಕ್ ಅವರು 144ರನ್ ಗಳಿಸಿದರೆ ಎಜ್ ಬಾಸ್ಟನ್ ನಲ್ಲಿ 1,000 ಟೆಸ್ಟ್ ರನ್ ಪೂರೈಸಿದ ಮೊದಲ ಆಟಗಾರ ಎನಿಸಲಿದ್ದಾರೆ.

ದಾಖಲೆ ಹೊಸ್ತಿಲಲ್ಲಿ ಜೇಮ್ಸ್ ಆಂಡರ್ಸನ್
540: ಇಂಗ್ಲೆಂಡಿನ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ಅವರು 24 ವಿಕೆಟ್ ಗಳಿಸಿದರೆ ಗ್ಲೆನ್ ಮೆಗ್ರಾ (563) ದಾಖಲೆ ಮುರಿದು ಅತಿ ಹೆಚ್ಚು ವಿಕೆಟ್ ಪಡೆದ ವೇಗಿ ಎನಿಸಲಿದ್ದಾರೆ. ಆಂಡರ್ಸನ್ ಸದ್ಯ 540 ವಿಕೆಟ್ ಗಳಿಸಿದ್ದಾರೆ.
14: ಭಾರತದ ವಿರುದ್ಧ 100 ವಿಕೆಟ್ ಪಡೆದಿರುವ ಎರಡನೇ ಬೌಲರ್ ಎನಿಸಿಕೊಳ್ಳಲು ಆಂಡರ್ಸನ್ ಗೆ 14 ವಿಕೆಟ್ ಬೇಕಿದೆ. ಭಾರತದ ವಿರುದ್ಧ ಮುತ್ತಯ್ಯ ಮುರಳೀಧರನ್ 105 ವಿಕೆಟ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ರನ್ ಸರಾಸರಿ
13.4 : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು 2014ರಲ್ಲಿ 10 ಇನ್ನಿಂಗ್ಸ್ ಗಳನ್ನಾಡಿ 134ರನ್ ಗಳಿಸಿದ್ದರು. ಕೊಹ್ಲಿ ಅವರು 13.4 ರನ್ ಸರಾಸರಿಯನ್ನು ಉತ್ತಮ ಪಡಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಇದು ಇಂಗ್ಲೆಂಡ್ ನಲ್ಲಿ ಅತಿ ಕಡಿಮೆ ರನ್ ಸರಾಸರಿಯಾಗಿದೆ.

ಆಂಡರ್ಸನ್ ದಾಖಲೆಗಳು
10: ಆಂಡರ್ಸನ್ (86) ಅವರು 10 ವಿಕೆಟ್ ಪಡೆದರೆ, ಭಾರತ ಹಾಗೂ ಇಂಗ್ಲೆಂಡ್ ನಡುವೆ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಎನಿಸಲಿದ್ದಾರೆ. ಇಲ್ಲಿ ತನಕ ಬಿ ಚಂದ್ರಶೇಖರ್ ಅವರು 95 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
100 : 100 ವಿಕೆಟ್ ಗಳನ್ನು ಒಂದೇ ಮೈದಾನದಲ್ಲಿ ಪಡೆದಿರುವ ಮುತ್ತಯ್ಯ ಮುರಳೀಧರನ್ ನಂತರ ಜೇಮ್ಸ್ ಆಂಡರ್ಸನ್ ಅವರು ಲಾರ್ಡ್ಸ್ ಮೈದಾನದಲ್ಲಿ ಈ ದಾಖಲೆ ಬರೆಯಬಹುದು. ಮುರಳೀಧರನ್ ಅವರು ಮೂರು ಬೇರೆ ಬೇರೆ ಮೈದಾನಗಳಲ್ಲಿ 100ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ.

ಕುಕ್ ಹಾಗೂ ಸ್ಟೋಕ್ ಸಾಧನೆ
256: ಅಲೆಸ್ಟರ್ ಕುಕ್ ಅವರು 256ರನ್ ಗಳಿಸಿದರೆ ಸಾರ್ವಕಾಲಿಕ ಅತ್ಯಧಿಕ ಟೆಸ್ಟ್ ರನ್ ಗಳಿಕೆ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಲಿದ್ದಾರೆ. ಸದ್ಯ ಕುಮಾರ ಸಂಗಕ್ಕಾರ ಆ ಸ್ಥಾನದಲ್ಲಿದ್ದಾರೆ.
2: ಬೆನ್ ಸ್ಟೋಕ್ಸ್ ಅವರಿಗೆ 100 ವಿಕೆಟ್ ಗಳಿಸಲು ಇನ್ನು 2 ವಿಕೆಟ್ ಸಾಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications