Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲ ಗೆಲುವಿನ ನಗೆ ಬೀರಿದ ಕೆಕೆಆರ್‌: ರಿಂಕು ಸಿಂಗ್ ಮಿಂಚು

ಕೋಲ್ಕತ್ತಾ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್ (ಕೆಕೆಆರ್) ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಅಬ್ಬರಿಸಿದೆ. ಈ ಮೂಲಕ ಕೆಕೆಆರ್‌ 19ನೇ ಆವೃತ್ತಿ ಐಪಿಎಲ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಕೆಕೆಆರ್‌ ತಂಡಕ್ಕೆ ರಿಂಕು ಸಿಂಗ್‌ ಹಾಗೂ ಅನುಕೂಲ್ ರಾಯ್‌ ಭರ್ಜರಿ ಜೊತೆಯಾಟ ನೀಡಿ ಜಯದಲ್ಲಿ ಮಿಂಚಿದರು.

ಟಾಸ್‌ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ರಾಯಲ್ಸ್ ಪರ ಇನಿಂಗ್ಸ್‌ ಆರಂಭಿಸಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 8.4 ಓವರ್‌ಗಳಲ್ಲಿ 81 ರನ್‌ ಸೇರಿಸಿತು. ವೈಭವ್ ತಮ್ಮ ಆಟದ ಶೈಲಿಗೆ ವಿರುದ್ಧವಾಗಿ ಬ್ಯಾಟ್ ಮಾಡಿ 26 ಎಸೆತಗಳಲ್ಲಿ 46 ರನ್‌ ಸೇರಿಸಿ ಔಟ್ ಆದರು.

Kolkata

ಧ್ರುವ್ ಜುರೇಲ್‌ (5) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 39 ರನ್‌ ಬಾರಿಸಿ ನರೈನ್‌ಗೆ ವಿಕೆಟ್‌ ಒಪ್ಪಿಸಿದರು. ನಾಯಕ ರಿಯಾನ್‌ ಪರಾಗ್ (12), ಶಿಮ್ರೋನ್‌ ಹೆಟ್ಮೆಯರ್ (15) ರನ್ ಕಲೆ ಹಾಕುವಲ್ಲಿ ವಿಫಲರಾದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಅಂತಿಮವಾಗಿ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್‌ ಸೇರಿಸಿತು. ಕೆಕೆಆರ್ ಪರ ವರುಣ್‌ ಚಕ್ರವರ್ತಿ ಹಾಗೂ ಕಾರ್ತಿಕ್ ತ್ಯಾಗಿ ತಲಾ ಮೂರು ವಿಕೆಟ್‌ ಪಡೆದರು.

ಕಳಪೆ ಆರಂಭ

ಕೆಕೆಆರ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಟಿಮ್ ಸಿಫರ್ಟ್‌, ನಾಯಕ ಅಜಿಂಕ್ಯ ರಹಾನೆ ಸೊನ್ನೆ ಸುತ್ತಿದರು. ಭರವಸೆಯ ಬ್ಯಾಟರ್‌ ಅಂಗ್‌ಕ್ರಿಷ್‌ ರಘುವಂಶಿ (10) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಕ್ಯಾಮರೂನ್‌ ಗ್ರೀನ್‌ (27) ಸಮಯೋಚಿತ ಪ್ರದರ್ಶನ ನೀಡಿದರೂ ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ರೋವ್‌ಮನ್ ಪೊವೆಲ್ 23, ರಮಣ್‌ದೀಪ್ ಸಿಂಗ್ 10 ರನ್‌ ಬಾರಿಸಿ ಔಟ್ ಆದರು.

Kolkata

85 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್ ತಂಡಕ್ಕೆ ಭರವಸೆಯ ಬ್ಯಾಟರ್ ರಿಂಕು ಸಿಂಗ್ ಹಾಗೂ ಅನುಕೂಲ್ ರಾಯ್‌ ಜೋಡಿ ತಂಡದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ರಾಯಲ್ಸ್‌ ಬೌಲರ್‌ಗಳು ವಿಫಲರಾದರು. ಈ ಜೋಡಿ 37 ಎಸೆತಗಳಲ್ಲಿ ಅಜೇಯ 76 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ರಿಂಕು ಅಬ್ಬರ

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ರಿಂಕು ಸಿಂಗ್‌ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು 34 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ ಅಜೇಯ 53 ರನ್‌ ಸಿಡಿಸಿ ಜಯದಲ್ಲಿ ಮಿಂಚಿದರು. ಅನುಕೂಲ್ ರಾಯ್ ಅಜೇಯ 29 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಕೆಕೆಆರ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್‌ ಸೇರಿಸಿ ಜಯ ಸಾಧಿಸಿತು.

Story first published: Sunday, April 19, 2026, 19:24 [IST]
Other articles published on Apr 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+