ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಕೆಕೆಆರ್, ಸನ್‌ಗೆ ಜಯದ ಕನಸು
ಹೈದರಾಬಾದ್: 19ನೇ ಆವೃತ್ತಿ ಐಪಿಎಲ್‌ನ 45ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಹೈದರಾಬಾದ್ ತಂಡದ್ದಾಗಿದೆ. ಕೆಕೆಆರ್ ತಂಡ ಸತತ ಎರಡು ಪಂದ್ಯಗಳನ್ನು ಗೆದ್ದಿದ್ದು ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಕನಸು ಕಾಣುತ್ತಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಸನ್ ತಂಡದ ಆಡಿದ 9 ಪಂದ್ಯಗಳಲ್ಲಿ 6 ಜಯ, 3 ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಕೆಕೆಆರ್ ತಂಡ ಆಡಿದ 8 ಪಂದ್ಯಗಳಲ್ಲಿ 2 ಜಯ, 5 ಸೋಲು, 1 ಪಂದ್ಯ ರದ್ದಾಗಿದೆ. ಸದ್ಯ ಕೆಕೆಆರ್ 5 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

ಸನ್‌ರೈಸರ್ಸ್ ತಂಡದ ಆರಂಭಿಕ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅಭಿಷೇಕ್ ಶರ್ಮಾ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದು, ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 425 ರನ್ ಸಿಡಿಸಿದ್ದಾರೆ. ಇನ್ನು ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (262 ರನ್) ಕಳೆದ ಪಂದ್ಯದಲ್ಲಿ ರನ್ ಕಲೆ ಹಾಕಿದ್ದು, ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿ ಕ್ಲಾಸೆನ್ (414 ರನ್) ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಇಶಾನ್ ಕಿಶನ್ (312 ರನ್) ರನ್ ರೇಟ್ ಹಿಗ್ಗಿಸುವಲ್ಲಿ ನೆರವಾಗಬಲ್ಲರು.
ಮಲಿಂಗ್ ಆಕರ್ಷಣೆ
ವೇಗದ ಬೌಲಿಂಗ್ ನೊಗವನ್ನು ಇಶಾನ್ ಮಾಲಿಂಗ್ ಮುನ್ನಡೆಸಲಿದ್ದು, ಇವರು ಈ ಲೀಗ್‌ನಲ್ಲಿ 15 ವಿಕೆಟ್ ಕಬಳಿಸಿದ್ದಾರೆ. ಉಳಿದಂತೆ ಯುವ ಆಟಗಾರ ಶಕೀಬ್ ಹುಸೇನ್ (8 ವಿಕೆಟ್), ಹರ್ಷ್ ದುಬೆ (8 ವಿಕೆಟ್), ಪ್ರಫುಲ್ ಹಿಂಗೆ (8 ವಿಕೆಟ್) ರನ್‌ಗಳಿಗೆ ಕಡಿವಾಣ ಹಾಕಿ ಮಿಂಚುವ ಅನಿವರ್ಯತೆ ಇದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಆಟಗಾರರಾದ ಅಜಿಂಕ್ಯ ರಹಾನೆ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ (215 ರನ್), ಅಂಗ್‌ಕ್ರಿಷ್ ರಘುವಂಶಿ (209 ರನ್), ಕ್ಯಾಮರೂನ್ ಗ್ರೀನ್ (196 ರನ್) ಜವಾಬ್ದಾರಿಯುತ ಆಟವನ್ನು ಆಡಿ ಸನ್ ತಂಡದ ಬೌಲರ್‌ಗಳನ್ನು ಕಾಡಬೇಕಿದೆ. ಸ್ಪಿನ್ ಬೌಲಿಂಗ್‌ನಲ್ಲಿ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಬಿಗುವಿನ ದಾಳಿ ನಡೆಸುತ್ತಿದ್ದಾರೆ. ಕಾರ್ತಿಕ್ ತ್ಯಾಗಿ ಹಾಗೂ ವೈಭವ್ ಆರೋರಾ ವೇಗದ ಬೌಲಿಂಗ್ ನೊಗವನ್ನು ಹೊರಲಿದ್ದಾರೆ.
ಗೆಲುವಿನ ವಿಶ್ವಾಸದಲ್ಲಿ ಪಂಜಾಬ್
ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಎರಡೂ ತಂಡಗಳು 2 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ. ಪಂಜಾಬ್ ತಂಡ ಆಡಿದ 8 ಪಂದ್ಯಗಳಲ್ಲಿ 6 ಜಯ, 1 ಸೋಲು ಕಂಡಿದ್ದು, 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನು ಜಿಟಿ ಆಡಿದ 9 ಪಂದ್ಯಗಳಲ್ಲಿ 5 ಜಯ, 4 ಸೋಲು ಕಂಡಿದ್ದು 10 ಅಂಕಗಳೊಮದಿಗೆ 5ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿವೆ. ಪಂಜಾಬ್ ತಂಡದ ಪರ ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಗುಜರಾತ್ ಪರ ಸಾಯಿ ಸುದರ್ಶನ್, ಶುಭಮನ್ ಗಿಲ್, ಜೋಸ್ ಬಟ್ಲರ್ ರನ್ ಕಲೆ ಹಾಕುತ್ತಿದ್ದ ಭರವಸೆ ಮೂಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications