For Quick Alerts
ALLOW NOTIFICATIONS  
For Daily Alerts
 

ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನೂ ಸಂಪೂರ್ಣ ಗೇಮ್ ಆಡಿಲ್ಲ: ಕಮಿನ್ಸ್

Kolkata Knight Riders haven’t played their complete game yet: Pat Cummins

ದುಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ನಾವು ಇನ್ನೂ ಸಂಪೂರ್ಣ ಗೇಮ್ ನೀಡಲಾಗಿಲ್ಲ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಟೂರ್ನಿಯ ಮಧ್ಯ ಘಟ್ಟದಲ್ಲಿ ಕೋಲ್ಕತ್ತಾ ತಂಡ ನಾಲ್ಕನೇ ಸ್ಥಾನದಲ್ಲಿರುವುದು ಖುಷಿ ನೀಡಿದೆ ಎಂದು ಕಮಿನ್ಸ್ ನುಡಿದಿದ್ದಾರೆ.

ಸದ್ಯದ ಐಪಿಎಲ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ 7 ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ 8 ಅಂಕ ಕಲೆ ಹಾಕಿದೆ. ಮುಂದಿನ ಪಂದ್ಯದಲ್ಲಿ ಕೆಕೆಆರ್, ಮುಂಬೈ ಇಂಡಿಯನ್ಸ್ ಸವಾಲು ಸ್ವೀಕರಿಸಲಿದೆ.

'ನನ್ನ ಪ್ರಕಾರ, ನಾಲ್ಕು ಪಂದ್ಯಗಳನ್ನು ಗೆದ್ದು, ಮೂರು ಪಂದ್ಯಗಳನ್ನು ಸೋತಿದ್ದೇವೆ ಅಂದರೆ ಅದು ಒಳ್ಳೆಯ ಫಲಿತಾಂಶವೆ. ನಾವೀಗ ಟಾಪ್ 4ರಲ್ಲಿ ಸ್ಥಾನ ಪಡೆದುಕೊಂಡಿದ್ದೇವೆ. ನಾವು ಇನ್ನೂ ನಮ್ಮ ಬೆಸ್ಟ್ ಕ್ರಿಕೆಟ್‌ನ ಹತ್ತಿರದಲ್ಲಿ ಆಡಿದ್ದೇವೆ ಅಂತ ನಾನು ಭಾವಿಸುವುದಿಲ್ಲ. ನಾವು ನಮ್ಮ ಸಂಪೂರ್ಣ ಆಟ ಆಡಿಲ್ಲ. ಹೀಗಾಗಿ ಕೊಂಚ ಹಿನ್ನಡೆಯಲ್ಲಿದ್ದೇವೆ,' ಎಂದು ಕಮಿನ್ಸ್ ಹೇಳಿದ್ದಾರೆ.

ಕಮಿನ್ಸ್ ಹೇಳಿರುವ ಮಾತು ನಿಜವೆ. ಯಾಕೆಂದರೆ ಕೆಕೆಆರ್ ತಂಡದಲ್ಲಿ ಸಾಕಷ್ಟು ಮಂದಿ ಬಲಿಷ್ಠ ಆಟಗಾರರಿದ್ದರೂ ಅವರಿಂದ ಇನ್ನೂ ಉತ್ತಮ ಪ್ರದರ್ಶನ ಬಂದಿಲ್ಲ. ದಿನೇಶ್ ಕಾರ್ತಿಕ್ ಒಂದು ಪಂದ್ಯದಲ್ಲಷ್ಟೇ ಕೊಂಚ ಉತ್ತಮ ಬ್ಯಾಟಿಂಗ್ ನೀಡಿದ್ದರು. ಇನ್ನು ಆ್ಯಂಡ್ರೆ ರಸೆಲ್, ಸುನಿಲ್ ನರೈನ್ ಇನ್ನಷ್ಟೇ ಒಳ್ಳೆಯ ಆಟ ತೋರಿಸಬೇಕಿದೆ.

Story first published: Friday, October 16, 2020, 10:07 [IST]
Other articles published on Oct 16, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+