ಭಾರತ ತೊರೆದ ಕೆಕೆಆರ್ ನಾಯಕ ಇಯಾನ್ ಮಾರ್ಗನ್

ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಇಯಾನ್ ಮಾರ್ಗನ್ ಭಾರತ ತೊರೆದು ಮಾಲ್ಡೀವ್ಸ್‌ನತ್ತ ಪ್ರಯಾಣಿಸಿದ್ದಾರೆ. ಕೋವಿಡ್-19 ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ರದ್ದಾಗಿದ್ದರಿಂದ ಇಂಗ್ಲೆಂಡ್ ರಾಷ್ಟ್ರೀಯ ತಂಡದ ನಾಯಕ ಮಾರ್ಗನ್ ಭಾರತ ತೊರೆದಿದ್ದಾರೆ.
ಐಪಿಎಲ್ ಬಯೋ ಬಬಲ್ ಒಂಗೆ ಕೋವಿಡ್-19 ಪ್ರಕರಣಗಳು ಹೆಚ್ಚತೊಡಗಿದ್ದರಿಂದ ಉದ್ದೇಶಿತ ಟೂರ್ನಿ ಅರ್ಧದಲ್ಲೇ ನಿಲ್ಲಿಸಲ್ಪಟ್ಟಿತು. ಹೀಗಾಗಿ ಟೂರ್ನಿ ಸಲುವಾಗಿ ಭಾರತಕ್ಕೆ ಬಂದಿದ್ದ ಕ್ರಿಕೆಟಿಗರೆಲ್ಲ ಅವರವರ ದೇಶಗಳಿಗೆ ಪ್ರಯಾಣ ಬೆಳೆಸತೊಡಗಿದ್ದಾರೆ.
ಇಯಾನ್ ಮಾರ್ಗನ್ ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮೆಂಟರ್ ಡೇವಿಡ್ ಹಸ್ಸಿ, ಬೌಲಿಂಗ್ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಕೂಡ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಎರಡು ವಾರಗಳ ಕ್ವಾರಂಟೈನ್ ಬಳಿಕ ಈ ಆಟಗಾರರು ತಮ್ಮ ದೇಶಗಳಿಗೆ ತೆರಳಲಿದ್ದಾರೆ.
ಮೇ 7ರ ಶುಕ್ರವಾರ ಟ್ವೀಟ್ ಮಾಡಿರುವ ಕೆಕೆಆರ್, 'ನಾಯಕನಿಗೆ, ಮೆಂಟರ್‌ಗೆ, ಕಮಿನ್ಸ್‌ಗೆ ಗುಡ್ ಬೈ. ಅವರೆಲ್ಲ ಸುರಕ್ಷಿತವಾಗಿ ಭಾರತ ತೊರೆದು ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದಾರೆ. ದಂತಕತೆಗಳಿಗೆ ಶುಭ ಕೋರುತ್ತೇವೆ. ಸುರಕ್ಷಿತವಾಗಿ ಪ್ರಯಾಣಿಸಿ ಮನೆಗೆ ಸೇರಿ. ಶೀಘ್ರ ಮತ್ತೆ ಸಿಗೋಣ' ಎಂದು ಬರೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications