IPL 2025: ಇತಿಹಾಸ ಸೃಷ್ಟಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವನ್ನು 80 ರನ್‌ಗಳಿಂದ ಸೋಲಿಸುವ ಮೂಲಕ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಗೆಲುವು ದಾಖಲಿಸಿತು. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಕೆಕೆಆರ್ 3 ವಿವಿಧ ಎದುರಾಳಿ ತಂಡಗಳ ವಿರುದ್ಧ 20 ಕ್ಕೂ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಮೊದಲ ಐಪಿಎಲ್ ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ 29 ಪಂದ್ಯಗಳು ನಡೆದಿವೆ. ಇದರಲ್ಲಿ ಕೆಕೆಆರ್ 20 ಪಂದ್ಯಗಳನ್ನು ಗೆದ್ದು ದಾಖಲೆ ಸೃಷ್ಟಿಸಿದೆ. ಕೆಕೆಆರ್ ಈಗ ಎಸ್‌ಆರ್‌ಹೆಚ್ ವಿರುದ್ಧ ಸತತ 5 ಪಂದ್ಯಗಳನ್ನು ಗೆದ್ದಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಹೊರೆತುಪಡಿಸಿ ಕೆಕೆಆರ್, ಪಂಜಾಬ್ ಕಿಂಗ್ಸ್ (21 ಗೆಲುವುಗಳು) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (21 ಗೆಲುವುಗಳು) ವಿರುದ್ಧ 20 ಕ್ಕೂ ಹೆಚ್ಚು ಗೆಲುವುಗಳನ್ನು ದಾಖಲಿಸಿ ಸಾದನೆ ಮಾಡಿದೆ. ಇದರೊಂದಿಗೆ ಕೆಕೆಆರ್ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳನ್ನು 20 ಕ್ಕೂ ಹೆಚ್ಚು ಬಾರಿ ಸೋಲಿಸಿದ ಮೊದಲ ತಂಡವಾಯಿತು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ವೆಂಕಟೇಶ್ ಅಯ್ಯರ್ ಕೆಕೆಆರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅವರು 29 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 60 ರನ್ ಗಳಿಸಿದರು. ಮತ್ತೊಂದೆಡೆ ಪವರ್ ಪ್ಲೇನಲ್ಲಿ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಶಾಕ್ ನೀಡಿದ ವೇಗದ ಬೌಲರ್ ವೈಭವ್ ಅರೋರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಅಂಗಕೃಷ್ ರಘುವಂಶಿ ಮತ್ತು ವೆಂಕಟೇಶ್ ಅಯ್ಯರ್ ಅರ್ಧಶತಕಗಳನ್ನು ಗಳಿಸಿದರು. ಬೌಲಿಂಗ್ ವಿಭಾಗದಲ್ಲಿ ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ಜೋಡಿ ಅದ್ಭುತ ಬೌಲಿಂಗ್ ಮಾಡಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 120 ರನ್‌ಗಳಿಗೆ ಆಲೌಟ್ ಮಾಡಿತು. ಇಬ್ಬರೂ ತಲಾ 3 ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ಆಂಡ್ರೆ ರಸೆಲ್ ಎರಡು ವಿಕೆಟ್ ಪಡೆದರು. ಈ ಗೆಲುವಿನ ನಂತರ, ಕೆಕೆಆರ್ 4 ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ ಏರಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಮೊಯಿನ್ ಅಲಿ, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಅನ್ರಿಚ್ ನಾರ್ಟ್ಜೆ, ವೈಭವ್ ಅರೋರಾ, ಅನುಕುಲ್ ರಾಯ್, ಲುವ್ನಿತ್ ಸಿಸೋಡಿಯಾ, ರೋವ್ಮನ್ ಪೊವೆಲ್, ಮಯಾಂಕ್ ಮಾರ್ಕಾಂಡೆ, ರಹಮಾನುಲ್ಲಾ ಗುರ್ಬಾಜ್, ಚೇತನ್ ಸಕರಿಯಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications