ಐಪಿಎಲ್ 2025 ರಲ್ಲಿ ಸೋಮವಾರದಂದು ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ರೋಚಕ ಪಂದ್ಯ ನಡೆಯಲಿದೆ. ಈ ಬಾರಿ ಉಭಯ ತಂಡಗಳು ಬಲಿಷ್ಠವಾಗಿ ಕಾಣುತ್ತಿವೆ. ಇದೇ ಕಾರಣಕ್ಕೆ ಅಭಿಮಾನಿಗಳು ಈ ಪಂದ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೆಯಿದೆ.
ಐಪಿಎಲ್ 18ನೇ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಅದ್ಭುತ ಫಾರ್ಮ್‌ನಲ್ಲಿ ಕಾಣುತ್ತಿದೆ. ಜಿಟಿ ಇಲ್ಲಿವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಜಯಗಳಿಸಿದ್ದು, 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಆಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ ಕೆಕೆಆರ್ 7 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು ಪಾಯಿಂಟ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ತನ್ನ ಸ್ಥಾನ ಉಳಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಬಾರಿ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ. ಇತ್ತ ಗುಜರಾತ್ ಟೈಟನ್ಸ್ ತಂಡ ತನ್ನ ಚೊಚ್ಚಲ ಸೀಸನ್‌ನಲ್ಲಿಯೇ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಉಭಯ ತಂಡಗಳ ಹೆಡ್ ಟು ಹೆಡ್ ನೋಡಿದರೆ, ಕೆಕೆಆರ್ ಪ್ರಾಬಲ್ಯ ಸಾಧಿಸಿದೆ. ಗುಜರಾತ್ ಮತ್ತು ಕೋಲ್ಕತ್ತಾ ನಡುವೆ ಇದುವರೆಗೆ ಒಟ್ಟು 4 ಪಂದ್ಯಗಳು ನಡೆದಿವೆ. ಕೆಕೆಆರ್ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಗುಜರಾತ್ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಒಂದ್ಯ ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
ಕೋಲ್ಕತ್ತಾ ನೈಟ್ ರೈಟರ್ಸ್ ತಂಡದ ಪರ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು ಪವರ್‌ಪ್ಲೇ ಮತ್ತು ಮಿಡಲ್ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆದು ತಂಡವನ್ನು ಗೆಲುವಿನತ್ತ ಮುನ್ನಡೆಸಬಲ್ಲರು. ಕೋಲ್ಕತ್ತಾ ಪಿಚ್ ಸ್ಪಿನ್ನರ್‌ಗಳಿಗೆ ಬೆಂಬಲ ಸಿಗುವುದರಿಂದ ಚಕ್ರವರ್ತಿ ಈ ಲಾಭವನ್ನು ಪಡೆದುಕೊಳ್ಳಬಹುದು.
ಅಜಿಂಕ್ಯ ರಹಾನೆ- 7 ಪಂದ್ಯ, 221 ರನ್
ಆಂಗ್ಕ್ರಿಶ್ ರಘುವಂಶಿ- 6 ಪಂದ್ಯ, 170 ರನ್
ಕ್ವಿಂಟನ್ ಡಿ ಕಾಕ್- 7 ಪಂದ್ಯ, 143 ರನ್
ವರುಣ್ ಚಕ್ರವರ್ತಿ- 7 ಪಂದ್ಯ, 10 ವಿಕೆಟ್
ಹರ್ಷಿತ್ ರಾಣಾ- 7 ಪಂದ್ಯ, 10 ವಿಕೆಟ್
ವೈಭವ್ ಅರೋರಾ- 7 ಪಂದ್ಯ, 8 ವಿಕೆಟ್
ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ಅನ್ರಿಚ್ ನಾರ್ಟ್ಜೆ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಪ್ಲೇಯರ್: ಆಂಗ್ಕ್ರಿಶ್ ರಘುವಂಶಿ
ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಜೋಸ್ ಬಟ್ಲರ್ ಪ್ರಮುಖ ಪಾತ್ರ ವಹಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಆಡುತ್ತಿರುವ ಬಟ್ಲರ್ ಸ್ಪೋಟಲ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ. ಬಟ್ಲರ್ ತಮ್ಮ ತಂಡಕ್ಕಾಗಿ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಏಳು ಪಂದ್ಯಗಳಲ್ಲಿ ಅವರು 315 ರನ್ ಕಲೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ, ಅವರು ಏಕಾಂಗಿಯಾಗಿ ಅಜೇಯ 97 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದರು.
ಬಿ ಸಾಯಿ ಸುದರ್ಶನ್- 7 ಪಂದ್ಯ, 365 ರನ್
ಜೋಸ್ ಬಟ್ಲರ್- 7 ಪಂದ್ಯ, 315 ರನ್
ಶುಭಮನ್ ಗಿಲ್- 7 ಪಂದ್ಯ, 215 ರನ್
ಪ್ರಸಿದ್ಧ್ ಕೃಷ್ಣ- 7 ಪಂದ್ಯ, 14 ವಿಕೆಟ್
ಆರ್ ಸಾಯಿ ಕಿಶೋರ್- 7 ಪಂದ್ಯ, 11 ವಿಕೆಟ್
ಮೊಹಮ್ಮದ್ ಸಿರಾಜ್- 7 ಪಂದ್ಯ, 11 ವಿಕೆಟ್
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ.
ಇಂಪ್ಯಾಕ್ಟ್ ಆಟಗಾರ: ಶೆರ್ಫೇನ್ ರುದರ್ಫೋರ್ಡ್