IPL 2025: ಕೆಕೆಆರ್ ಮಣಿಸಲು ಲಕ್ನೋ ಸಜ್ಜು; ಸ್ಟಾರ್ ಆಟಗಾರರ ಮೇಲೆ ಚಿತ್ತ
ಐಪಿಎಲ್ 2025 ರಲ್ಲಿ ಇಂದು ಅಂದರೆ ಮಂಗಳವಾರ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 3.30 ಗಂಟೆಗೆ ಆರಂಭವಾಗಲಿರುವ ಐಪಿಎಲ್ 2025 ರ 1ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ತಂಡಗಳು ಸೆಣಸಾಡಲಿವೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ.
ಹಾಲಿ ಚಾಂಪಿಯನ್ ಕೆಕೆಆರ್ ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಅಡಿದೆ. ಇದರಲ್ಲಿ ಕೆಕೆಆರ್ ತಲಾ ಎರಡು ಗೆಲುವು ಮತ್ತು ಸೋಲುಗಳನ್ನು ಕಂಡಿದ್ದು, ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2025 ರಲ್ಲಿ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಎಲ್‌ಎಸ್‌ಜಿ ರನ್ ರೇಟ್ ಕಡಿಮೆ ಇರುವ ಕಾರಣ ಕೆಕೆಆರ್‌ಗಿಂತ ಒಂದು ಸ್ಥಾನ ಕೆಳಗಿದೆ.

ಹೊಸ ನಾಯಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಕೆಕೆಆರ್ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಲು ಸಜ್ಜಾಗಿದೆ. ಕೆಕೆಆರ್ ತವರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 80 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇದೇ ಉತ್ಸಾಹದಲ್ಲಿರುವ ಕೆಕೆಆರ್ ತಂಡ ಲಕ್ನೋ ತಂಡವನ್ನು ಕಟ್ಟಿ ಹಾಕಲು ತಂತ್ರ ರೂಪಿಸಿದೆ. ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ರೋಮಾಚ ಗೆಲುವು ಸಾಧಿಸಿದೆ. ಲಕ್ನೋ ತಂಡದ ನಾಯಕ ರಿಷಭ್ ಪಂತ್ ನಾಲ್ಕು ಪಂದ್ಯಗಳಲ್ಲಿಯೂ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ರಿಷಭ್ ಪಂತ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಕೆಕೆಆರ್ ಟಾಪ್ ರನ್ ಗೆಟರ್ಸ್
ಆಂಗ್ಕ್ರಿಶ್ ರಘುವಂಶಿ- 4 ಪಂದ್ಯ, 128 ರನ್
ಅಜಿಂಕ್ಯಾ ರಹಾನೆ- 4 ಪಂದ್ಯ, 123 ರನ್
ಕ್ವಿಂಟನ್ ಡಿ ಕಾಕ್- 4 ಪಂದ್ಯ, 103 ರನ್

ಕೆಕೆಆರ್ ಟಾಪ್ ವಿಕೆಟ್ ಟೇಕರ್ಸ್
ವರುಣ್ ಚಕ್ರವರ್ತಿ- 4 ಪಂದ್ಯ, 6 ವಿಕೆಟ್
ವೈಭವ್ ಅರೋರಾ- 4 ಪಂದ್ಯ, 6 ವಿಕೆಟ್
ಆಂಡ್ರೆ ರಸೆಲ್- 4 ಪಂದ್ಯ, 4 ವಿಕೆಟ್
ಕೆಕೆಆರ್ ಸಂಭಾವ್ಯ ಪ್ಕೇಯಿಂಗ್-11: ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಮೊಯಿನ್ ಅಲಿ, ಸುನಿಲ್ ನರೈನ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಎಲ್‌ಎಸ್‌ಜಿ ಟಾಪ್ ರನ್ ಗೆಟರ್ಸ್
ನಿಕೋಲಸ್ ಪೂರನ್- 4 ಪಂದ್ಯ, 201 ರನ್
ಮಿಚೆಲ್ ಮಾರ್ಷ್- 4 ಪಂದ್ಯ, 184 ರನ್
ಐಡೆನ್ ಮಾರ್ಕ್ರಾಮ್- 4 ಪಂದ್ಯ, 97 ರನ್
ಎಲ್‌ಎಸ್‌ಜಿ ಟಾಪ್ ವಿಕೆಟ್ ಟೇಕರ್ಸ್
ಶಾರ್ದೂಲ್ ಠಾಕೂರ್- 4 ಪಂದ್ಯ, 7 ವಿಕೆಟ್
ದಿಗ್ವೇಶ್ ರಾಠಿ- 4 ಪಂದ್ಯ, 6 ವಿಕೆಟ್
ರವಿ ಬಿಷ್ಣೋಯಿ- 4 ಪಂದ್ಯ, 6 ವಿಕೆಟ್
ಎಲ್‌ಎಸ್‌ಜಿ ಸಂಭಾವ್ಯ ತಂಡ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ-ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ದಿಗ್ವೇಶ್ ರಾಠಿ, ಅವೇಶ್ ಖಾನ್, ರವಿ ಬಿಷ್ಣೋಯ್
ಹೆಡ್- ಟು ಹೆಡ್
ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಮೇಲುಗೈ ಸಾಧಿಸಿದೆ. ಆದರೆ ಐಪಿಎಲ್ 2025 ರಲ್ಲಿ ಉಭಯ ತಂಡಗಳಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಎರಡೂ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಕೆಕೆಆರ್ 2 ಬಾರಿ ಗೆದ್ದಿದ್ದರೆ, ಎಸ್‌ಆರ್‌ಹೆಚ್ ಮೂರು ಬಾರಿ ಗೆದ್ದಿದೆ.
ಈಡನ್ ಗಾರ್ಡನ್ಸ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಬ್ಯಾಟರ್‍ಗಳು ರನ್ ಮಳೆ ಸುರಿಸುವ ಸಾಧ್ಯತೆಯಿದೆ. ಉಭಯ ತಂಡಗಳಲ್ಲಿ ಸ್ಪೋಟಕ ಬ್ಯಾಟರ್‍ಗಳ ದಂಡೆಯಿದೆ. ಹೀಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಸ್ಕೋರ್ ಮ್ಯಾಚ್ ಆಗುವ ಸಾಧ್ಯತೆಯಿದೆ. ನಿಕೋಲಸ್ ಪೂರನ್ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಬ್ಯಾಟರ್ ಆಗಿದ್ದಾರೆ. ವರುಣ್ ಚಕ್ರವರ್ತಿ ಕೆಕೆಆರ್ ತಂಡದ ಸ್ಟಾರ್ ಬೌಲರ್ ಎನಿಸಿಕೊಂಡಿದ್ದಾರೆ. ಈ ಇಬ್ಬರ ನಡುವಿನ ಕಾದಾಟ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications