Turning point: ಕೋಲ್ಕತ್ತಾದ ಇನ್ನಿಂಗ್ಸ್ ಎಲ್ಲಿ ಹಳಿ ತಪ್ಪಿತು?
ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ದಾಖಲೆಯ ಗುರಿಯನ್ನು ಬೆನ್ನಟ್ಟುವ ಹಂತಕ್ಕೆ ತಲುಪಿತ್ತು. ಆದರೆ ಲಕ್ನೋ ಸೂಪರ್ ಜೈಂಟ್ಸ್ 4 ರನ್‌ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತು. ಭರ್ಜರಿ ಆರಂಭದ ನಡುವೆ ಕೂಡ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸುವಲ್ಲಿ ಎಡವಿತು. ಇದರೊಂದಿಗೆ ಐಪಿಎಲ್ 2025 ರಲ್ಲಿ ಮೂರನೇ ಸೋಲನ್ನು ಎದುರಿಸಬೇಕಾಯಿತು.
ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಅವರ ಅಜೇಯ 87 ರನ್ ಮತ್ತು ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಆದರೆ ಗೆಲುವಿನ ಸನಿಹದಲ್ಲಿದ ಕೆಕೆಆರ್ ಸೋಲಿನ ಸುಳಿಗೆ ಸಿಲುಕಿಕೊಳ್ಳಬೇಕಾಯಿತು. ಈ ಪಂದ್ಯಕ್ಕೆ ಯಾವ ಹಂತದಲ್ಲಿ ತಿರುವು ಸಿಕ್ಕಿತ್ತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಲಕ್ನೋ ಸೂಪರ್ ಜೈಂಟ್ಸ್ ನೀಡಿದ 239 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಕೆಕೆಆರ್, ಪವರ್‌ಪ್ಲೇ ಮತ್ತು ಆರಂಭಿಕ ಮಧ್ಯದ ಓವರ್‌ಗಳಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಕ್ವಿಂಟನ್ ಡಿ ಕಾಕ್ 15 ರನ್ ಗಳಿಸಿ ಔಟದರೆ, ಸುನಿಲ್ ನರೈನ್ 30 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ವೇಳೆ ನಾಯಕ ಅಜಿಂಕ್ಯ ರಹಾನೆ 61 ರನ್‌ಗಳೊಂದಿಗೆ ತಂಡಕ್ಕೆ ಆಸರೆಯಾದರು. ವೆಂಕಟೇಶ್ ಅಯ್ಯರ್ ಕೂಡ 45 ರನ್ ಗಳಿಸಿ ಕೆಕೆಆರ್ ತಂಡವನ್ನು ಪಂದ್ಯದಲ್ಲಿ ಜೀವಂತಗೊಳಿಸಿದರು. ಈ ಮೂಲಕ 12 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 123 ರನ್ ಗಳಿತು.
ಇದಾದ ನಂತರ 13 ಮತ್ತು 16ನೇ ಓವರ್‌ಗಳ ನಡುವೆ ಕೆಕೆಆರ್ ಕೇವಲ 23 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಕೆಕೆಆರ್ ಚೇಸಿಂಗ್ ಸಂಪೂರ್ಣವಾಗಿ ಹಳಿ ತಪ್ಪಿತು. ರಮಣದೀಪ್ ಸಿಂಗ್ 1 ರನ್, ಗಅಂಗ್‌ಕ್ರಿಶ್ ರಘುವಂಶಿ 5 ರನ್, ಆಂಡ್ರೆ ರಸೆಲ್ 7 ರನ್ ಗಳಿಸಿ ಔಟಾದರು. ಹೀಗಾಗಿ ಎಲ್ಲಾ ಒತ್ತಡ ರಿಂಕು ಸಿಂಗ್ ಮೇಲೆ ಬಿತ್ತು. ಅಲ್ಲದೆ, ಇದು ಕೆಕೆಆರ್ ತಂಡದ ಸೋಲನ್ನು ಖಚಿತ ಪಡೆಸಿತು.
ಕೊನೆಯಲ್ಲಿ ರಿಂಕು 15 ಎಸೆತಗಳಲ್ಲಿ 38 ರನ್ ಗಳಿಸಿ ಗೆಲುವಿಗಾಗಿ ಹೋರಾಟ ನಡೆಸಿದರು. ಹರ್ಷಿತ್ ರಾಣಾ 9 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗುಳಿದರು. ಲಕ್ನೋ ಪರ ಆಕಾಶ್ ದೀಪ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಅವೇಶ್ ಖಾನ್, ದಿಗ್ವೇಶ್ ರಾಠಿ ಮತ್ತು ರವಿ ಬಿಷ್ಣೋಯ್ ತಲಾ ಒಂದೊಂದು ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications