IPL 2025: ರಾಜಸ್ಥಾನ ವಿರುದ್ಧ ಕೋಲ್ಕತ್ತಾಗೆ ಮಾಡು ಇಲ್ಲವೇ ಮಡಿ ಪಂದ್ಯ
ಇಂದು (ಮೇ 4) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 53ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡವನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಎದುರಿಸಲಿದೆ. ಈ ಪಂದ್ಯವು ಈಡನ್ ಗಾರ್ಡನ್ಸ್‌ನಲ್ಲಿ ಮಧ್ಯಾಹ್ನ 3:30 ರಿಂದ ಆರಂಭವಾಗಲಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಕೆಕೆಆರ್‌ಗೆ ಈ ಪಂದ್ಯ ಬಹಳ ಮುಖ್ಯವಾಗಿದೆ. ಈ ಪಂದ್ಯದಲ್ಲಿ ಸೋತರೆ, ಐಪಿಎಲ್ 2025 ರ ಪ್ಲೇಆಫ್‌ನಿಂದ ಹೊರಬಿದ್ದ ಮೂರನೇ ತಂಡವಾಗಲಿದೆ.
ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್‌ನಿಂದ ಹೊರಬಿದ್ದಿವೆ. ಆದ್ದರಿಂದ, ಈ ಪಂದ್ಯವು ರಾಜಸ್ಥಾನಕ್ಕೆ ತಂಡದ ಸ್ಥಿತಿಯನ್ನು ಸುಧಾರಿಸಬಹುದು. ಜೊತೆಗೆ ಎದುರಾಳಿ ತಂಡವನ್ನು ಪ್ಲೇಆಫ್ ರೇಸ್‌ನಿಂದ ಹೊರಗಿಡಬಹುದು. ರಾಜಸ್ಥಾನ ತಂಡ 11 ಪಂದ್ಯಗಳಿಂದ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕೋಲ್ಕತ್ತಾ ತಂಡ 10 ಪಂದ್ಯಗಳಿಂದ 9 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಪಿಚ್ ವರದಿ
ಈಡನ್ ಗಾರ್ಡನ್ಸ್‌ನ ಪಿಚ್ ಬ್ಯಾಟರ್ಸ್‌ಗೆ ರನ್ ಗಳಿಸಲು ಹೇಳಿ ಮಾಡಿಸಿದಂತಿದೆ. ಈ ಪಿಚ್‌ನಲ್ಲಿ ಹೈ ಸ್ಕೋರಿಂಗ್ ಪಂದ್ಯದ ನಿರೀಕ್ಷೆಯಿದೆ. ಹಿಂದಿನ ಬಾರಿ, ಮೈದಾನದಲ್ಲಿ ಮಧ್ಯಾಹ್ನದ ಪಂದ್ಯವನ್ನು ಆಡಲಾಗುತ್ತಿತ್ತು. ಈ ವೇಳೆ 500 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಲಾಗಿತ್ತು. 200 ರಿಂದ 210 ರ ನಡುವಿನ ಸ್ಕೋರ್ ಅನ್ನು ಮೊದಲು ಬ್ಯಾಟಿಂಗ್ ಮಾಡುವ ತಂಡ ಗಳಿಸಬಹುದು. ಈ ಮೈದಾನದಲ್ಲಿ ಚೇಸಿಂಗ್ ತಂಡಗಳು ಹೆಚ್ಚಿನ ಯಶಸ್ಸನ್ನು ಕಂಡಿವೆ. ಆದ್ದರಿಂದ ಟಾಸ್ ಗೆದ್ದ ತಂಡಗಳು ಸಾಮಾನ್ಯವಾಗಿ ಮೊದಲು ಬೌಲಿಂಗ್ ಮಾಡಲು ಬಯಸುತ್ತವೆ.
ಹೆಡ್ ಟು ಹೆಡ್
ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಲವು ರೋಚಕ ಪಂದ್ಯಗಳು ನಡೆದಿವೆ. ಇದುವರೆಗೆ ಉಭಯ ತಂಡಗಳ ನಡುವೆ 31 ಪಂದ್ಯಗಳು ನಡೆದಿದೆ. ಕೋಲ್ಕತ್ತಾ 15 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ 14 ರಲ್ಲಿ ಜಯ ಸಾಧಸಿದೆ. ಎರಡು ಪಂದ್ಯಗಳು ಫಲಿತಾಂಶ ಕಂಡಿಲ್ಲ. ಈ ಅಂಕಿಅಂಶಗಳನ್ನು ನೋಡಿದರೆ, ಎರಡೂ ತಂಡಗಳು ಸಮಾನ ಬಲವನ್ನು ಹೊಂದಿವೆ.
ರಾಜಸ್ಥಾನ ಬಲಾಬಲ
ಜೈಪುರದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 100 ರನ್‌ಗಳಿಂದ ಸೋತ ನಂತರ ರಾಜಸ್ಥಾನ ರಾಯಲ್ಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಫಾರ್ಮ್ ಸಮಸ್ಯೆ ಎದುರಿಸುತ್ತಿದೆ. ಇದರ ಹೊರತಾಗಿಯೂ, ರಾಜಸ್ಥಾನ ಇನ್ನೂ ಅಪಾಯಕಾರಿ ತಂಡವಾಗಿದೆ. ರಾಜಸ್ಥಾನ ತಂಡದ ಹಿನ್ನಡೆಗೆ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಅವರ ದೀರ್ಘಕಾಲದ ಗಾಯವೂ ಒಂದು ಕಾರಣ.
14 ವರ್ಷದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್‌ನಲ್ಲಿ ತಂಡದ ಪರ ಅಬ್ಬರಿಸುತ್ತಿದ್ದಾರೆ. ಆದರೆ, ನಾಯಕ ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರಂತಹ ಬ್ಯಾಟರ್ಸ್ ಉತ್ತಮ ಫಾರ್ಮ್‌ನಲ್ಲಿಲ್ಲ. ರಾಜಸ್ಥಾನ ಬೌಲಿಂಗ್‌ನಲ್ಲಿಯೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜೋಫ್ರಾ ಆರ್ಚರ್ ಮತ್ತು ಮಹೇಶ್ ತೀಕ್ಷಣ ಅವರಂತಹ ಸ್ಟಾರ್ ಬೌಲರ್‌ಗಳು ದುಬಾರಿ ಆಗುತ್ತಿದ್ದಾರೆ.
ಆರ್‌ಆರ್ ಟಾಪ್ ರನ್ ಗೆಟರ್ಸ್
ಯಶಸ್ವಿ ಜೈಸ್ವಾಲ್- 11 ಪಂದ್ಯ, 439 ರನ್
ರಿಯಾನ್ ಪರಾಗ್- 11 ಪಂದ್ಯ, 282 ರನ್
ಧ್ರುವ್ ಜುರೆಲ್- 11 ಪಂದ್ಯ, 249 ರನ್
ಆರ್‌ಆರ್ ಟಾಪ್ ವಿಕೆಟ್ ಟೇಕರ್ಸ್
ವನಿಂದು ಹಸರಂಗ- 8 ಪಂದ್ಯ, 10 ವಿಕೆಟ್
ಜೋಫ್ರಾ ಆರ್ಚರ್- 11 ಪಂದ್ಯ, 10 ವಿಕೆಟ್
ಮಹೀಶ್ ತೀಕ್ಷಣ- 10 ಪಂದ್ಯ, 10 ವಿಕೆಟ್
ಆರ್‌ಆರ್ ಸಂಭಾವ್ಯ ಪ್ಲೇಯಿಂಗ್-11: ರಿಯಾನ್ ಪರಾಗ್ (ನಾಯಕ), ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಆಕಾಶ್ ಮಧ್ವಾಲ್, ಕುಮಾರಕೇಯ ಸಿಂಗ್, ಕ್ವೀನಾ ಎಂಫಾಕಾ.
ಕೋಲ್ಕತ್ತಾ ಸಾಮರ್ಥ್ಯ
ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇಲ್ಲಿಯವರೆಗೆ ನಿರೀಕ್ಷಿಸಿದಷ್ಟು ಏನೂ ಆಗಿಲ್ಲ. ಏಕೆಂದರೆ ಕೋಲ್ಕತ್ತಾ ತಂಡ ತವರು ನೆಲದಲ್ಲಿ ಸೋಲುಗಳನ್ನು ಎದುರಿಸಿದೆ. ಈಡನ್ ಗಾರ್ಡನ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಅವರು ಗೆದ್ದಿರುವುದು ಒಂದೇ ಒಂದು ಪಂದ್ಯ. ಕೆಕೆಆರ್ ಬ್ಯಾಟರ್ಸ್ ರನ್ ಗಳಿಸುವಲ್ಲಿ ಎಡುವುತ್ತಿದ್ದಾರೆ. ರಿಂಕು ಸಿಂಗ್ ಮತ್ತು ವೆಂಕಟೇಶ್ ಅಯ್ಯರ್ ಅವರಿಂದಲ್ಲೂ ಉತ್ತಮ ಪ್ರದರ್ಶನ ಬಂದಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 14 ರನ್‌ಗಳ ಗೆಲುವು ಕೋಲ್ಕತ್ತಾ ತಂಡಕ್ಕೆ ಪ್ಲೇಆಫ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿದೆ. ಈ ಪಂದ್ಯದಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದ ನಾಯಕ ಅಜಿಂಕ್ಯ ರಹಾನೆ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾನುವಾರದ ಪಂದ್ಯಕ್ಕೆ ಅವರು ಫಿಟ್ ಆಗುವ ನಿರೀಕ್ಷೆಯಿದೆ. ಬೌಲಿಂಗ್‌ನಲ್ಲಿ ಸ್ವಲ್ಪ ಸಮಾಧಾನ ಕಂಡುಬಂದಿದೆ. ಡೆಲ್ಲಿ ವಿರುದ್ಧ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರ ಸ್ಪಿನ್ ಜೋಡಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಹರ್ಷತ್ ರಾಣಾ ಕೂಡ ಉತ್ತಮ ಲಯದಲ್ಲಿದ್ದಾರೆ.
ಕೆಕೆಆರ್ ಟಾಪ್ ರನ್ ಗೆಟರ್ಸ್
ಅಜಿಂಕ್ಯಾ ರಹಾನೆ- 10 ಪಂದ್ಯ, 297 ರನ್
ಅಂಗ್‌ಕ್ರಿಶ್ ರಘುವಂಶಿ- 9 ಪಂದ್ಯ, 241 ರನ್
ಸುನಿಲ್ ನರೈನ್- 9 ಪಂದ್ಯ, 178 ರನ್
ಕೆಕೆಆರ್ ಟಾಪ್ ವಿಕೆಟ್ ಟೇಕರ್ಸ್
ವರುಣ್ ಚಕ್ರವರ್ತಿ- 10 ಪಂದ್ಯ, 13 ವಿಕೆಟ್
ವೈಭವ್ ಆರೋರಾ- 9 ಪಂದ್ಯ, 12 ವಿಕೆಟ್
ಹರ್ಷಿತ್ ರಾಣಾ- 10 ಪಂದ್ಯ, 11 ವಿಕೆಟ್
ಕೆಕೆಆರ್ ಸಂಭಾವ್ಯ ಪ್ಲೇಯಿಂಗ್-11: ಅಜಿಂಕ್ಯ ರಹಾನೆ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ಆಂಗ್‌ಕ್ರಿಶ್ ರಘುವಂಶಿ, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವರುಣ್ ಚಕ್ರವರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications