Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025, SRH vs KKR: ಫೈನಲಿಸ್ಟ್‌ಗಳ ಕಾಳಗದಲ್ಲಿ ಗೆಲ್ಲೋದ್ಯಾರು?

ಐಪಿಎಲ್ 2025 ರ ಸೀಸನ್ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್ 2024 ರ ಫೈನಲಿಸ್ಟ್‌ಗಳು ಇಂದು ಅಂದರೆ ಗುರುವಾರ ಕೋಲ್ಕತ್ತಾದ ಈರ್ಡನ್ ಗಾರ್ಡನ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಐಪಿಎಲ್ 2025 ರ 15ನೇ ಪಂದ್ಯವೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವೆ ನಡೆಯಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಉಭಯ ತಂಡಗಳು ಗೆಲುವಿನ ಹುಡುಕಾಟದಲ್ಲಿವೆ.

ಪ್ರಸ್ತುತ ಅಂಕಪಟ್ಟಿಯಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಎಸ್‌ಆರ್‌ಹೆಚ್ ಎಂಟನೇ ಮತ್ತು ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿರುವ ಕೆಕೆಆರ್ ಹತ್ತನೇ ಸ್ಥಾನದಲ್ಲಿದೆ. ಐಪಿಎಲ್ 2025 ರಲ್ಲಿ ಉಭಯ ತಂಡಗಳು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಸೋಲಿಗೆ ಕಾರಣಗಳು ಭಿನ್ನವಾಗಿವೆ.

Kolkata Knight Riders vs Sunrisers Hyderabad IPL 2025 15th Match Preview

ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಬ್ಯಾಟಿಂಗ್ ಲೈನ್ ಅಪ್ ಸಂಪೂರ್ಣ ಮಂಕಾಗಿದೆ. ಐಪಿಎಲ್ 2024 ರಲ್ಲಿ ತೋರಿದ ಸಂಘಟಿತ ಪ್ರದರ್ಶನ ಈ ಬಾರಿ ಕಂಡು ಬಂದಿಲ್ಲ. ಮತ್ತೊಂದೆಡೆ ಎಸ್‌ಆರ್‌ಹೆಚ್ ಸ್ಪೋಟಕ ಬ್ಯಾಟಿಂಗ್ ಸೈಲೆಂಟ್ ಆಗಿರುವುದು ಎದುರಾಳಿ ತಂಡಗಳ ಗೆಲುವಿಗೆ ಕಾರಣವಾಗಿದೆ. ಉತ್ತಮ ಆರಂಭ ಪಡೆಯುವಲ್ಲಿ ಕಮ್ಮಿನ್ಸ್ ಪಡೆ ಯಶಸ್ವಿಯಾಗುತ್ತಿಲ್ಲ.

ಕೆಕೆಆರ್‍‌ನ ಪ್ರಮುಖ ಆಟಗಾರರು

ಸುನಿಲ್ ನರೈನ್ (ಪವರ್-ಹಿಟ್ಟರ್ ಮತ್ತು ಪ್ರಮುಖ ಬೌಲರ್)
ಕ್ವಿಂಟನ್ ಡಿ ಕಾಕ್ (ಸ್ಫೋಟಕ ಆರಂಭಿಕ)
ಆಂಡ್ರೆ ರಸೆಲ್ (ಆಲ್‌ರೌಂಡರ್, ಪಂದ್ಯ ಬದಲಾಯಿಸಬಲ್ಲ ಆಟಗಾರ)
ವೆಂಕಟೇಶ್ ಅಯ್ಯರ್ (ಭರವಸೆಯ ಮಧ್ಯಮ ಕ್ರಮಾಂಕದ ಬ್ಯಾಟರ್)

ಎಸ್‌ಆರ್‌ಹೆಚ್ ಸ್ಟಾರ್ ಆಟಗಾರರು

ಟ್ರಾವಿಸ್ ಹೆಡ್ (ಸ್ಫೋಟಕ ಆರಂಭಿಕ)
ಅಭಿಷೇಕ್ ಶರ್ಮಾ (ಯುವ ಆಕ್ರಮಣಕಾರಿ ಬ್ಯಾಟರ್)
ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್-ಫಿನಿಷರ್)
ಪ್ಯಾಟ್ ಕಮ್ಮಿನ್ಸ್ (ಬೌಲಿಂಗ್ ನೇತೃತ್ವ)
ಮೊಹಮ್ಮದ್ ಶಮಿ ( ಸ್ಟಾರ್ ವೇಗಿ)

ಪಿಚ್ ವರದಿ

ಕಳೆದ ವಾರದಿಂದ ಈಡನ್ ಗಾರ್ಡನ್ಸ್ ಮೈದಾನವು ಚರ್ಚೆಯಲ್ಲಿದೆ. ಆರ್‌ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಬಳಸಲಾದ ಪಿಚ್ ಕೆಕೆಆರ್‌ಗೆ ಹಿನ್ನಡೆಯಾಯಿತು. ನಾಯಕ ರಹಾನೆ ತಂಡದ ಸ್ಪಿನ್ನರ್‌ಗಳಿಗೆ ಸರಿಹೊಂದುವಂತಹ ನಿಧಾನವಾದದ್ದನ್ನು ಕೇಳಿದರು. ಈಗ ಎಸ್‌ಆರ್‍‌ಹೆಚ್ ವಿರುದ್ಧದ ಪಂದ್ಯಕ್ಕಾಗಿ ಎರಡು ಪಿಚ್‌ಗಳನ್ನು ರೆಡಿ ಮಾಡಲಾಗಿದೆ. ಎರಡರಲ್ಲೂ ಹುಲ್ಲು ತುಂಬಾ ಕಡಿಮೆ ಇದ್ದು, ಇದು ಸ್ಪಿನ್ನರ್‍‌ಗಳಿಗೆ ವರದಾನವಾಗಬಹುದು.

ಹೆಡ್‌ ಟು ಹೆಡ್

ಐಪಿಎಲ್ ಇತಿಹಾಸದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಬಲಿಷ್ಠ ತಂಡಗಳಾಗಿವೆ. ಉಭಯ ತಂಡಗಳ ನಡುವೆ ಇಲ್ಲಿವರೆಗೆ 29 ಪಂದ್ಯಗಳು ನಡೆದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 19 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಕೇವಲ 9 ಪಂದ್ಯಗಳಲ್ಲಿ ಮಾತ್ರ ಯಶಸ್ಸು ಕಂಡಿದೆ.

ಸಂಭಾವ್ಯ ಪ್ಲೇಯಿಂಗ್-11

ಕೋಲ್ಕತ್ತಾ ನೈಟ್ ರೈಡರ್ಸ್: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಆಂಗ್‌ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಮನೀಶ್ ಪಾಂಡೆ.

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿಕೆಟ್‌ಕೀಪರ್), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಜೀಶನ್ ಅನ್ಸಾರಿ, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ವಿಯಾನ್ ಮುಲ್ಡರ್.

Story first published: Thursday, April 3, 2025, 7:08 [IST]
Other articles published on Apr 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+