KKR vs MI IPL 2024: ಕೋಲ್ಕತ್ತಾ ಎದುರು ತವರಿನಲ್ಲಿ ಮುಗ್ಗರಿಸಿದ ಮುಂಬೈ; ಕೆಕೆಆರ್‌ಗೆ ಭರ್ಜರಿ ಜಯ
ಶುಕ್ರವಾರ, ಮೇ 3ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 51ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಎದುರು ಮುಂಬೈ ಇಂಡಿಯನ್ಸ್ (ಎಂಐ) ಹೀನಾಯವಾಗಿ ಸೋಲಿಗೆ ಶರಣಾಗಿದೆ.
ಕೋಲ್ಕತ್ತಾ ನೀಡಿದ 170 ರನ್‌ಗಳ ಗುರಿ ಬೆನ್ನಟ್ಟಿದ್ದ ಮುಂಬೈಗೆ ಗೆಲ್ಲಲು ಸಾಧ್ಯವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ ತನ್ನಲ್ಲೆ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 145 ರನ್ ಗಳಿಸಿತು. ಹೀಗಾಗಿ ಕೆಕೆಆರ್ 24 ರನ್‌ಗಳ ಭರ್ಜರಿ ಜಯಗಳಿಸಿದೆ.

ಮುಂಬೈ ಪರ ಆರಂಭಿಕರಾಗಿ ಕಣಕ್ಕೀಳಿದ ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ ಜೋಡಿ ಮತ್ತೆ ಉತ್ತಮ ರನ್ ಕಲೆ ಹಾಕುವುದಲ್ಲಿ ಎಡವಿತು. ಒಂದು ಸಿಕ್ಸರ್ ಹಾಗು ಬೌಂಡರಿಗಷ್ಟೆ ಸೀಮಿತವಾದ ಇಶಾನ್ (13) ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ರೋಹಿತ್ ಶರ್ಮಾ ಕೂಡ 11 ರನ್‌ಗೆ ಸುನಿಲ್ ನರೈನ್ ಅವರಿಗೆ ಔಟ್ ಆದರು.
ಮೂರನೇ ಕ್ರಮಾಂಕದಲ್ಲಿ ಬಂದ ನಮನ್ ಧೀರ್ ಸಹಾ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ವರುಣ್ ಚಕ್ರವರ್ತಿ ಬೌಲಿಂಗ್ ನಲ್ಲಿ ನಮನ್ ಧೀರ್ (11) ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ಸೂರ್ಯಕುಮಾರ್ ಯಾದವ್ ನಿಧಾನವಾಗಿ ಬ್ಯಾಟ್ ಬೀಸಿ ರನ್ ಗಳಿಸಿದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬಂದಿದ್ದ ತಿಲಕ್ ವರ್ಮಾ ಕೇವಲ 4 ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ನೀಡಿದರು.

ತಿಲಕ್ ವರ್ಮಾ ಹಿಂದೆಯೇ ನೆಹಾಲ್ ವಧೇರಾ (6) ಸಹಾ ಸುನಿಲ್ ನರೈನ್ ಸ್ಪಿನ್ ಮೋಡಿಗೆ ಬಲಿಯಾದರು. ಈ ಹಂತದಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ ಒಂದು ರನ್‌ಗೆ ಆಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು.
ಹೀಗೆ ಸಾಲು ಸಾಲು ವಿಕೆಟ್‌ಗಳು ಬೀಳುತ್ತಿದರೂ ಕ್ರೀಸ್‌ಗೆ ಕಚ್ಚಿ ನಿಂತು ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. 35 ಎಸೆತಗಳಲ್ಲಿ 6 ಬೌಂಡರಿ ಹಾಗು 2 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ಈ ಹಂತದಲ್ಲಿ ಮುಂಬೈ ತಂಡ ಗೆಲುವಿನ ಸನಿಹ ಬಂದಿತ್ತು. ಆದರೆ ಆಂಡ್ರೆ ರಸೆಲ್ ಸೂರ್ಯಕುಮಾರ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಕೊನೆಯಲ್ಲಿ ಮುಂಬೈ ಗೆಲುವಿಗೆ ಹೋರಾಟ ನಡೆಸಿದ ಟಿಮ್ ಡೇವಿಡ್ 24 ರನ್‌ಗಳಿಸಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ನೀಡಿ ಹೊರ ನಡೆದರು. ಬಳಿಕ ಬಂದ ಪಿಯೂಷ್ ಚಾವ್ಲಾ ಹಾಗು ಕ್ರೀಸ್‌ನಲ್ಲಿದ್ದ ಜೆರಾಲ್ಡ್ ಕೋಟ್ಜಿ ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ಹೀಗಾಗಿ ಮುಂಬೈ ಅಲೌಟ್ ಆಗುವ ಮೂಲಕ ಕೆಕೆಆರ್ ಎದುರು ಪಂದ್ಯವನ್ನು ಸೋಲಬೇಕಾಯಿತು.
ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರೆ, ಸುನಿಲ್ ನರೈನ್, ಆಂಡ್ರೆ ರಸೆಲ್ ಮತ್ತು ವರುಣ್ ಚಕ್ರವರ್ತಿ 2 ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ಗೆಲುವಿನ ಕೊಡುಗೆ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications