Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs MI IPL 2024: ಕೋಲ್ಕತ್ತಾ ಸಂಘಟಿತ ಬೌಲಿಂಗ್‌ ದಾಳಿಗೆ ಮಣಿದ ಮುಂಬೈ; ಕೆಕೆಆರ್‌ಗೆ ಗೆಲುವು

ಶುಕ್ರವಾರ, ಮೇ 11ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಎದುರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ಗೆದ್ದು ಬೀಗಿದೆ.

ಕೋಲ್ಕತ್ತಾ ನೀಡಿದ 158 ರನ್‌ಗಳ ಗುರಿ ಬೆನ್ನಟ್ಟಿದ್ದ ಮುಂಬೈಗೆ ಗೆಲ್ಲಲು ಸಾಧ್ಯವಾಗಲಿಲ್ಲ. ನಿಗದಿತ 16 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 139 ರನ್ ಗಳಿಸಿತು. ಹೀಗಾಗಿ ಕೆಕೆಆರ್‌ 16 ರನ್‌ಗಳ ಭರ್ಜರಿ ಜಯಗಳಿಸಿ ಪ್ಲೇ ಆಪ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ.

Kolkata Knight Riders win against Mumbai Indiansh

ಮುಂಬೈ ಪರ ಆರಂಭಿಕರಾಗಿ ಕಣಕ್ಕೀಳಿದ ಇಶಾನ್‌ ಕಿಶಾನ್ ಮತ್ತು ರೋಹಿತ್‌ ಶರ್ಮಾ ಜೋಡಿ ಪವರ್‌ ಪ್ಲೇನಲ್ಲಿ ಉತ್ತಮ ರನ್‌ ಕಲೆ ಹಾಕಿತು. ಬಿರುಸಿನ ಬ್ಯಾಟಿಂಗ್‌ ಮಾಡಿದ ಇಶಾನ್‌ ಕಿಶನ್‌ ಕೇವಲ 22 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 5 ಬೌಂಡರಿ ಮೂಲಕ 40 ರನ್‌ ಹೊಡೆದು ಸುನಿಲ್‌ ನರೈನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

ಇನ್ನೊಂದೆಡೆ ನಿಧಾನವಾಗಿ ಆಡುತ್ತಿದ್ದ ರೋಹಿತ್‌ ಶರ್ಮಾ (19) ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿ ಔಟ್‌ ಆದರು. ನಂತರ ಬಂದ ಯಾವುದೇ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಕಚ್ಚಿ ನಿಲ್ಲಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್ (11) ಆಂಡ್ರೆ ರಸೆಲ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

ಬಳಿಕ ನಾಯಕ ಹಾರ್ದಿಕ್‌ ಪಾಂಡ್ಯ (2) ವರುಣ್ ಚಕ್ರವರ್ತಿ ಅವರಿಗೆ ವಿಕೆಟ್‌ ಒಪ್ಪಿಸಿದರೆ, ಬಂದ ದಾರಿಗೆ ಸುಂಕವಿಲ್ಲದಂತೆ ಟಿಮ್‌ ಡೇವಿಡ್ ಶೂನ್ಯಕ್ಕೆ ‌ಆಂಡ್ರೆ ರಸೆಲ್‌ ಬೌಲಿಂಗ್‌ನಲ್ಲಿ ಔಟ್‌ ಆದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬಂದಿದ್ದ ತಿಲಕ್‌ ವರ್ಮಾ ನಿಧಾನವಾಗಿ ರನ್‌ ಗಳಿಸಿದರು. ಆದರೆ ನೆಹಾಲ್ ವಧೇರಾ (3) ರನ್‌ ಔಟ್‌ ಆಗಿ ತಮ್ಮ ಆಟ ನಿಲ್ಲಿಸಿದರು.

ಮುಂಬೈ ಗೆಲುವಿಗೆ ಕೊನೆಯಲ್ಲಿ ಹೋರಾಟ ನಡೆಸುತ್ತಿದ್ದ ತಿಲಕ್‌ ವರ್ಮಾ (32) ಮತ್ತು ನಮನ್ ಧೀರ್ (17) ಅವರನ್ನು ಒಂದೇ ಓವರ್‌ನಲ್ಲಿ ಹರ್ಷಿತ್ ರಾಣಾ ಔಟ್‌ ಮಾಡುವ ಮೂಲಕ ಕೆಕೆಆರ್‌ ಗೆಲುವನ್ನು ಖಾತರಿ ಪಡಿಸಿದರು. ಕೊನೆಯಲ್ಲಿ ಅನ್ಶುಲ್ ಕಾಂಬೋಜ್ ಅಜೇಯ (2) ಮತ್ತು ಪಿಯೂಷ್ ಚಾವ್ಲಾ (1) ಗಳಿಸಿದರು.

ಕೆಕೆಆರ್‌ ಪರ ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮತ್ತು ಹರ್ಷಿತ್‌ ರಾಣಾ 2 ವಿಕೆಟ್‌ ಪಡೆದರೆ, ಸುನಿಲ್ ನರೈನ್ 1 ವಿಕೆಟ್‌ ಪಡೆದರು.

Story first published: Sunday, May 12, 2024, 0:40 [IST]
Other articles published on May 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+