ಭಾರತ ಕಾಪಾಡಿದ ಪೂಜಾರಗೆ ವಿಶೇಷ ಗೌರವ ಸಲ್ಲಿಸಿದ ಕೋಲ್ಕತ್ತಾ ಪೊಲೀಸ್!


ಕೋಲ್ಕತ್ತಾ, ಡಿಸೆಂಬರ್ 7: ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ ಭಾರತದ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರಿಗೆ ಕೋಲ್ಕತ್ತಾ ಪೊಲೀಸ್ ವಿಶೇಷ ಗೌರವ ಸಲ್ಲಿಸಿದ್ದಾರೆ. ಅಡಿಲೇಡ್ ನಲ್ಲಿ ಗುರುವಾರ (ಡಿಸೆಂಬರ್ 6) ಆರಂಭಗೊಂಡ ಭಾರತ vs ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ ಶತಕ ಸಿಡಿಸಿ ರನ್ ಕುಸಿತದಲ್ಲಿದ್ದ ಭಾರತವನ್ನು ಕಾಪಾಡಿದ್ದರು.
ಗುರುವಾರ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಬಹುಬೇಗನೆ ವಿಕೆಟ್ ಕಳೆದುಕೊಂಡು ಭೀತಿಯನ್ನನುಭವಿಸಿತ್ತು. ಲೋಕೇಶ್ ರಾಹುಲ್ 2, ಮುರಳಿ ವಿಜಯ್ 11, ವಿರಾಟ್ ಕೊಹ್ಲಿ 3, ಅಜಿಂಕ್ಯ ರಹಾನೆ 13 ರನ್ ಪೇರಿಸಿ ವಿಕೆಟ್ ಒಪ್ಪಿಸಿದ್ದರಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ತೀರಾ ಕನಿಷ್ಠ ರನ್‌ಗಳಿಸುವ ಸಾಧ್ಯತೆಯಿತ್ತು.
ಆದರೆ ಆ ವೇಳೆ ಭಾರತದ ಬೆಂಬಲಕ್ಕೆ ನಿಂತವರು ಪೂಜಾರ ಒಬ್ಬರೆ. 3ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಂಡಿದ್ದ ಪೂಜಾರ ಪಂದ್ಯದ ಕೊನೇಕ್ಷಣದವರೆಗೂ ನಿಂತರು. ಹೀಗಾಗಿ ಪೂಜಾರ ಅವರ 123 ರನ್ ಕೊಡುಗೆ ಭಾರತವನ್ನು ಗಮನಾರ್ಹವಾಗಿ ಮೇಲೆತ್ತಿತ್ತು.
ಇಂಡಿಯನ್ ವಾಲ್ 2!
ಪೂಜಾರ 87.5 ಓವರ್‌ವರೆಗೂ ನಿಂತಿದ್ದರಿಂದ ಭಾರತ 88 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 250 ರನ್ ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಪೂಜಾರ ಆಟಕ ಕಂಡಿರುವ ಕ್ರಿಕೆಟ್ ಅಭಿಮಾನಿಗಳು ಪೂಜಾರ ಅವರನ್ನೀಗ 'ಇಂಡಿಯನ್ ವಾಲ್ 2' ಅಂತ ಕರೆಯತೊಡಗಿದ್ದಾರೆ. ಪೂಜಾರ ಬಿಟ್ಟರೆ ಭಾರತಕ್ಕೆ ಅಳಿಲ ಸೇವೆ ಸಲ್ಲಿಸಿದವರೆಂದರೆ ರೋಹಿತ್ ಶರ್ಮಾ (37), ರಿಷಬ್ ಪಂತ್ (25) ಮತ್ತು ರವಿಚಂದ್ರನ್ ಅಶ್ವಿನ್ (25).
ಪೂಜಾರ ಅವರಂತೆ ರಕ್ಷಿಸಬೇಕು
ಪೂಜಾರ ಅವರ ಈ ಸಾಹಸವನ್ನು ಮೆಚ್ಚಿಕೊಂಡಿರುವ ಕೋಲ್ಕತ್ತಾದ ಪೊಲೀಸ್ ಒಬ್ಬರು ಟ್ವೀಟ್ ಮೂಲಕ ಪೂಜಾರಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. 'ರಕ್ಷಿಸುವುದಿದ್ದರೆ ಪೂಜಾರ ಅವರಂತೆ ರಕ್ಷಿಸಬೇಕು' ಎಂದು ಟ್ವೀಟರ್ ನಲ್ಲಿ ಪೊಲೀಸ್ ಬರೆದುಕೊಂಡಿದ್ದಾರೆ.
ಟ್ರಾಫಿಕ್ ನಿಯಮ ಜಾಗೃತಿ
ಪೋಸ್ಟ್ ಮಾಡಲಾಗಿರುವ ಈ ಟ್ವೀಟನ್ನು ಟ್ರಾಫಿಕ್ ನಿಯಮ ಜಾಗೃತಿಯ ಪ್ರಚಾರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಒಂದೆಡೆ ಸೆಂಚುರಿ ಬಾರಿಸಿದ ಪೂಜಾರ ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಕಾರಿನ ಚಾಲಕ ಸೀಟ್ ಬೆಲ್ಟ್ ಧರಿಸಿ ಕುಳಿತಿದ್ದಾರೆ.
5,000 ರನ್
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಎದುರು ಸಾಧಾರಣ ಮೊತ್ತವನ್ನಷ್ಟೇ ಪೇರಿಸಲು ಶಕ್ತವಾದ ಭಾರತ ಆಸೀಸ್ ಇನ್ನಿಂಗ್ಸ್ ವೇಳೆ ಎದುರಾಳಿಯನ್ನೂ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್ ಗೆ ಇಳಿದಿರುವ ಆಸ್ಟ್ರೇಲಿಯಾ ಶುಕ್ರವಾರ (ಡಿಸೆಂಬರ್ 7) ದಿನದಾಂತ್ಯಕ್ಕೆ 88 ಓವರ್‌ಗಳಲ್ಲಿ 7 ವಿಕೆಟ್ ಕಳೆದು 191 ರನ್ ಪೇರಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿನ ಶತಕದೊಂದಿಗೆ ಪೂಜಾರ, ಟೆಸ್ಟ್ ನಲ್ಲಿ 5,000 ರನ್ ಪೂರೈಸಿದ ಭಾರತದ 12ನೇ ಆಟಗಾರ ಎನಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications