ಟೀಮ್ ಇಂಡಿಯಾ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗೆ 189 ರನ್‌ಗಳಿಸಿದೆ. ಅಲ್ಲದೆ ಮೊದಲ ಟೆಸ್ಟ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಮುನ್ನಡೆ ಸಾಧಿಸಿದೆ. ಆದರೆ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದರಿಂದ ರಿಟೈರ್ಡ್ ಹರ್ಟ್ ಆದರು. ಅಲ್ಲದೆ ಮೈದಾನಕ್ಕೆ ಇಳಿಯಲಿಲ್ಲ. ದಕ್ಷಿಣ ಆಫ್ರಿಕಾದ ಪರ ಸೈಮನ್ ಹಾರ್ಮರ್ 4 ವಿಕೆಟ್ ಕಬಳಿಸಿದರು.
ಶನಿವಾರ ದಿನದಾಟವನ್ನು 1 ವಿಕೆಟ್‌ಗೆ 37 ರನ್‌ಗಳಿಂದ ಆಟ ಮುಂದುವರಿಸಿದ ಭಾರತ, ಉತ್ತಮ ಆರಂಭವನ್ನು ಕಂಡಿತು. ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕೆಎಲ್ ರಾಹುಲ್ ಹಾಗೂ ವಾಷಿಂಗ್ಟನ್ ಸುಂದರ್ ಸ್ಥಿರ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸೈಮನ್ ಹಾರ್ಮರ್ ಬೇರ್ಪಡಿಸುವಲ್ಲಿ ಸಫಲರಾದರು. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಾಷಿಂಗ್ಟನ್ ಸುಂದರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ವಾಷಿಂಗ್ಟನ್ ಸುಂದರ್ 82 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿದರು. ಎರಡನೇ ವಿಕೆಟ್‌ಗೆ ರಾಹುಲ್ ಹಾಗೂ ವಾಷಿಂಗ್ಟನ್ ಸುಂದರ್ 166 ಎಸೆತಗಳಲ್ಲಿ 57 ರನ್ ಸೇರಿಸಿತು.

ಎರಡನೇ ದಿನದ ಮೊದಲ ಅವಧಿಯಲ್ಲಿ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡಲು ಬಂದರು. ಇವರು 3 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸುತ್ತಿದ್ದಂತೆ ಭರವಸೆ ಮೂಡಿಸಿದ್ದರು. ಆದರೆ ಇವರು ಕತ್ತಿನ ಭಾಗದಲ್ಲಿ ಸ್ನಾಯು ಸೆಳೆತ ಕಂಡು ಬಂದಿದ್ದು ಇವರು ಮೈದಾನದಿಂದ ಹೊರ ನಡೆದರು. ಈ ಬಗ್ಗೆ ಬಿಸಿಸಿಐ ಸಹ ಬಿಗ್ ಅಪ್‌ಡೇಟ್ ನೀಡಿದೆ. ಅದರ ನಂತರ ಶುಭ್ಮನ್ ಗಿಲ್ ಈಗ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡುತ್ತಾರೋ ಇಲ್ಲವೋ ಎಂಬುದನ್ನು ಅವರ ಸ್ಥಿತಿಯನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.
ಕನ್ನಡಿಗ ಕೆಎಲ್ ರಾಹುಲ್ 119 ಎಸೆತಗಳನ್ನು ಎದುರಿಸಿ ನೆಲಕಚ್ಚಿ ಬ್ಯಾಟ್ ಮಾಡುವ ಸೂಚನೆಯನ್ನು ನೀಡಿದರು. ಆದರೆ ಇವರು 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 39 ರನ್ ಬಾರಿಸಿದ್ದಾಗ ಕೇಶವ್ ಮಹಾರಾಜ್ ತೋಡಿದ ಖೆಡ್ಡಾಗೆ ಬಲಿಯಾದರು. ಇವರು ಈ ಪಂದ್ಯದಲ್ಲಿ ದೊಡ್ಡ ಮೈಲಿಗಲ್ಲು ತಲುಪಿದರು. ಇವರು 66 ಟೆಸ್ಟ್ ಪಂದ್ಯಗಳಲ್ಲಿ 4024 ರನ್ ಸಿಡಿಸಿದ ಸಾಧನೆಯನ್ನು ಮಾಡಿದರು.

ಉಪನಾಯಕ ರಿಷಭ್ ಪಂತ್ 27, ರವೀಂದ್ರ ಜಡೇಜಾ 27, ಧ್ರುವ್ ಜುರೇಲ್ 14, ಅಕ್ಷರ್ ಪಟೇಲ್ 16 ರನ್ ಬಾರಿಸಿದರು. ಅಂತಿಮವಾಗಿ ಭಾರತ 62.2 ಓವರ್‌ಗಳಲ್ಲಿ 189 ರನ್ ಸೇರಿಸಿ ಆಲೌಟ್ ಆಯಿತು. ದಕ್ಷಿಣ ಆಪ್ರಿಕಾ ಪರ ಸೈಮನ್ ಹಾರ್ಮರ್ ಬಿಗುವಿನ ದಾಳಿ ನಡೆಸಿ 4 ವಿಕೆಟ್ ಕಬಳಿಸಿದರು. ಮಾರ್ಕೊ ಜಾನ್ಸನ್ 3 ವಿಕೆಟ್ ಉರುಳಿಸಿದರು.