ಲೋ ಸ್ಕೋರ್ ಡಿಫೆಂಡ್ ಮಾಡಿಕೊಂಡ ಕೋನಾರ್ಕ್, ಕೊನೆಯ ಓವರ್‌ನಲ್ಲಿ ಮಿಂಚಿದ ಇರ್ಫಾನ್ ಪಠಾಣ್
ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC 2024) ಸೆಪ್ಟೆಂಬರ್ 20 ರಂದು ಪ್ರಾರಂಭವಾಗಿದೆ. ಇದರ ಮೊದಲ ಪಂದ್ಯದಲ್ಲಿ ಕೋನಾರ್ಕ್ ಸೂರ್ಯಾಜ್ ಮತ್ತು ಮಣಿಪಾಲ್ ಟೈಗರ್ಸ್ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಕೋನಾರ್ಕ್ ಸೂರ್ಯಾಜ್ ಲೋ ಸ್ಕೋರ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಸಫಲವಾಯಿತು. ಈ ಪಂದ್ಯದ ಕೊನೆಯ ಓವರ್‌ನ್ನು ಇರ್ಫಾನ್ ಪಠಾಣ್ ಎಸೆದರು. ಇವರ ಈ ಬೌಲಿಂಗ್ ಧಾಟಿಯನ್ನು ಕಂಡು ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.
ಈ ಪಂದ್ಯದಲ್ಲಿ ಇರ್ಫಾನ್ ಪಠಾಣ್ ತಮ್ಮಲ್ಲಿ ಇನ್ನು ಬಿಗುವಿನ ದಾಳಿ ನಡೆಸುವ ಕ್ಷಮತೆ ಇದೆ ಎಂದು ಸಾರಿ ಹೇಳಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋನಾರ್ಕ್ ಸೂರ್ಯಾಜ್ 9 ವಿಕೆಟ್‌ಗೆ 104 ರನ್ ಸೇರಿಸಿತು. ಇದಕ್ಕೆ ಉತ್ತವಾಗಿ ಬ್ಯಾಟ್ ಮಾಡಿದ ಮಣಿಪಾಲ್ ಟೈಗರ್ಸ್ 8 ವಿಕೆಟ್‌ಗೆ 102 ರನ್ ಕಲೆ ಹಾಕಿ ಸೋಲು ಕಂಡಿತು.

ಇರ್ಫಾನ್ ಪಠಾಣ್ ಮಾರಕ ದಾಳಿ
ಈ ಪಂದ್ಯದ ಕೊನೆಯ ಓವರನ್ನು ಕೋನಾರ್ಕ್ ನಾಯಕ ಇರ್ಫಾನ್ ಪಠಾಣ್ ಬೌಲ್ ಮಾಡಿದರು. ಕೊನೆಯ 6 ಎಸೆತದಲ್ಲಿ ಮಣಿಪಾಲ್ ಟೈಗರ್ಸ್‌ಗೆ ಗೆಲ್ಲಲು 12 ರನ್ ಅವಶ್ಯಕತೆ ಇತ್ತು. ಇರ್ಫಾನ್ ಪಠಾಣ್ ಮೊದಲ ಎಸೆತವನ್ನು ವೈಡ್ ಹಾಕಿದರು. ನಂತರದ ಎಸೆತದಲ್ಲಿ ಅನುರೀತ್ ಸಿಂಗ್ ಸಿಕ್ಸರ್ ಬಾರಿಸಿದರು. ನಂತರ ಪಠಾಣ್ ಎರಡು ಸಿಂಗಲ್ ನೀಡಿದರು. ಅಲ್ಲದೆ ಎದುರಾಳಿ ತಂಡದ ಗೆಲುವಿನ ಆಸೆಗೆ ಬ್ರೇಕ್ ಹಾಕಿದರು.
ಮಣಿಪಾಲ ಗೆಲುವಿಗೆ ಕೊನೆಯ ಎಸೆತದಲ್ಲಿ 3 ರನ್ ಗಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಓಬುಸ್ ಏರಿಯಲ್ ಶಾಟ್ ಬಾರಿಸಿದರು. ಇವರು ಹೊಡೆದ ಶಾಟ್‌ನ್ನು ಉತ್ತಮ ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಅಂಬಟಿ ರಾಯುಡು ಸಫಲರಾದರು.
ಕೋನಾರ್ಕ್ ಸೂರ್ಯಜ್ ತಂಡದ ಪರ ಮುನವೀರ (11), ರಾಸ್ ಟೇಲರ್ (14), ಇರ್ಫಾನ್ ಪಠಾಣ್ (18), ಅವರು ಕೊಂಚ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಮಣಿಪಾಲ ತಂಡದ ಪರ ಅನುರಿತ್ ಸಿಂಗ್, ಪಿಯೆನಾರ್ ತಲಾ ಎರಡು ವಿಕೆಟ್ ಕಬಳಿಸಿದರು.
ಇದಕ್ಕುತವಾಗಿ ಬ್ಯಾಟ್ ಮಾಡಿದ ಮಣಿಪಾಲ್ ತಂಡದ ಪರ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕೇವಲ 38 ರನ್ ಆಗುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಡೇನಿಯಲ್ ಕ್ರಿಶ್ಚಿಯನ್ (30) ಹಾಗೂ ಒಬಸ್ ಪಿಯೆನಾರ್ (34) ತಂಡಕ್ಕೆ ಆಧಾರವಾದರೂ, ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications