ಭಾರತದ ಸ್ಟಾರ್ ಚೆಸ್ ಪಟು ಕೊನೇರು ಹಂಪಿ ಇತಿಹಾಸ ನಿರ್ಮಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತದ ಆಟಗಾರ್ತಿ ಫೈನಲ್‌ನಲ್ಲಿ ಇಂಡೋನೇಷ್ಯಾದ ಐರಿನ್ ಸುಖಂದರ್ ಅವರನ್ನು ಸೋಲಿಸಿದರು. 37 ವರ್ಷ ವಯಸ್ಸಿನ ಹಂಪಿ 11 ರಲ್ಲಿ 8.5 ಅಂಕಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು. ಗ್ರ್ಯಾಂಡ್ ಮಾಸ್ಟರ್ ಆದ ಭಾರತದ ಮೊದಲ ಮಹಿಳಾ ಆಟಗಾರ್ತಿ ಹಂಪಿ, ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈಗಾಗಲೇ ವಿಶ್ವ ಟೆಸ್ಟ್ ಲೋಕದಲ್ಲಿ ತಮ್ಮ ಛಾಪು ಮೂಡಿಸಿರುವ ಕೋನೇರು ಹಂಪಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು.
ಹಂಪಿ ಫೈನಲ್‌ನಲ್ಲಿ ಇಂಡೋನೇಷ್ಯಾದ ಐರಿನ್ ಸುಖಂದರ್ ಅವರನ್ನು ಸೋಲಿಸಿದರು. ಇದಕ್ಕೂ ಮುನ್ನ ಹಂಪಿ 2019ರಲ್ಲಿ ಜಾರ್ಜಿಯಾದಲ್ಲಿ ನಡೆದ ಈ ಚಾಂಪಿಯನ್‌ಶಿಪ್ ಗೆದ್ದಿದ್ದರು. ಇದು ಭಾರತದ ಗ್ರ್ಯಾಂಡ್‌ಮಾಸ್ಟರ್ ಹಂಪಿಗೆ ನಿರ್ಣಾಯಕ ಗೆಲುವು. ಚಾಂಪಿಯನ್‌ಶಿಪ್ ಗೆಲ್ಲಲು ಅವರಿಗೆ ಬೇಕಾಗಿರುವುದು ಸುಲಭದ ಗೆಲುವು ಆಗಿತ್ತು. ಒಂದು ವೇಳೆ ಹಂಪಿ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದರೆ ಡ್ರಾ ಅಥವಾ ಸೋಲು ಕಂಡಿದ್ದರೆ, ಪ್ರಶಸ್ತಿ ಎತ್ತುವ ಕನಸು ಭಗ್ನ ಗೊಳ್ಳುತ್ತಿತ್ತು. ಪುರುಷರ ವಿಭಾಗದಲ್ಲಿ ರಷ್ಯಾದ 18 ವರ್ಷದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಗೆದ್ದರು. ಕಿರಿಯ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಕೊನೇರು ಹಂಪಿ ಯಶಸ್ಸಿನ ಹಿಂದಿ ಶಕ್ತಿ ತಂದೆ. ಕೊನೇರು ಅವರ ತಂದೆ ಅಶೋಕ್ ಅವರಿಗೆ ಐದು ವರ್ಷ ಇರುವಾಗ ಇವರಿಗೆ ತರಬೇತಿ ನೀಡಲು ಆರಂಭಿಸಿದರು. ಅಲ್ಲದೆ ಇವರು ಸಹ ಚೆಸ್ ಆಟಗಾರ. ಮಗಳ ಚೆಸ್ ಕನಸು ನನಸಾಗಿಸಲು ಕೆಲಸ ಬಿಟ್ಟು ಹಂಪಿ ತರಬೇತಿ ಆರಂಭಿಸಿದರು. 6 ಮತ್ತು 7 ನೇ ವಯಸ್ಸಿನಲ್ಲಿ, ಹಂಪಿ ರಾಜ್ಯ ಚಾಂಪಿಯನ್‌ಶಿಪ್ ಗೆದ್ದರು. ಇದಾದ ನಂತರ ಅವರು 12, 14, 16 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್ ಆದರು.
ಭಾರತದ ಚೆಸ್ ಕ್ರೀಡಾ ಪಟುಗಳು ಅಮೋಘ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ. ಇತ್ತೀಚಿಗೆ ಸಿಂಗಾಪುರದಲ್ಲಿ ನಡೆದ ಕ್ಲಾಸಿಕಲ್ ಚೆಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದ ಭಾರತದ ಡಿ ಗುಕೇಶ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಇದಾದ ಬಳಿಕ ಈಗ ಕೊನೇರು ಹಂಪಿ ರ್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಅಬ್ಬರಿಸಿದರು.
ಕೊನೇರು ಹಂಪಿ ರ್ಯಾಪಿಡ್ ಚೆಸ್ ಹೊರತಾಗಿ ಹಂಪಿ ಇತರೆ ಮಾದರಿಯಲ್ಲೂ ಮಿಂಚು ಹರಿಸಿದ್ದಾರೆ. ಅವರು 2022 ರ ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದ್ದರು. 2024 ರಲ್ಲಿ, ಮಹಿಳಾ ಅಭ್ಯರ್ಥಿಗಳು ಪಂದ್ಯಾವಳಿಯನ್ನು ಗೆಲ್ಲುವ ಸಮೀಪಕ್ಕೆ ಬಂದು ನಿರಾಸೆ ಅನುಭವಿಸಿದ್ದರು. ವೈಯಕ್ತಿಕ ಕಾರಣಗಳಿಂದ ಹಂಪಿ ಬುಡಾಪೆಸ್ಟ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿರಲಿಲ್ಲ.