Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಕ್ರಿಕೆಟ್‌ಗಾಗಿಯೇ ಬರಲಿದೆ ವಿಶಿಷ್ಟ ಕೂಕಬುರ್ರಾ ಚೆಂಡು

ಟಿ20 ಕ್ರಿಕೆಟ್‌ಗಾಗಿಯೇ ಬರಲಿದೆ ವಿಶಿಷ್ಟ ಕೂಕಬುರ್ರಾ ಚೆಂಡು | Oneindia Kannada
kookburra to introduce new ball for t20

ಬೆಂಗಳೂರು, ಜುಲೈ 8: ಕೂಕಬುರ್ರಾ ಚೆಂಡುಗಳ ತಯಾರಕ ಕಂಪೆನಿಯು ಟಿ20 ಕ್ರಿಕೆಟ್‌ಗೆಂದೇ ವಿಶೇಷವಾದ ಚೆಂಡನ್ನು ವಿನ್ಯಾಸಗೊಳಿಸಿದೆ.

ಈ ಹೊಸ ಮಾದರಿಯ ಚೆಂಡು ಇನ್ನು ಎರಡು ವರ್ಷಗಳಲ್ಲಿ ಟಿ20 ಲೀಗ್‌ಗಳು ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗೆ ಲಭ್ಯವಾಗಲಿದೆ.

'ಟರ್ಫ್ 20' ಎಂಬ ಈ ಚೆಂಡು ದೀರ್ಘಾವಧಿವರೆಗೆ ತನ್ನ ಗಡಸುತನವನ್ನು ಉಳಿಸಿಕೊಳ್ಳಲಿದೆ. ಇದರಿಂದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವಾಗಲಿದೆ.

ಇನ್ನೊಂದೆಡೆ ಇದರಲ್ಲಿನ ಸೀಮ್ ಸಾಮರ್ಥ್ಯ ಬೌಲರ್‌ಗಳಿಗೂ ಸಹಾಯ ಮಾಡಲಿದೆ. ಬೌನ್ಸಿ ಪಿಚ್‌ಗಳಲ್ಲಿಯೂ ಹೆಚ್ಚು ಸಮಯ ಆಡಿದಾಗಲೂ ಅದು ಹೊಳಪು ಕಳೆದುಕೊಳ್ಳದಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಟಿ20 ಹಾಗೂ ಏಕದಿನ ಕ್ರಿಕೆಟ್‌ ಪಂದ್ಯಗಳಿಗೆ ಪ್ರಸ್ತುತ ಕೂಕಬುರ್ರಾ ಬಿಳಿ ಚೆಂಡನ್ನು ಬಳಸಲಾಗುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಹೊಸ ಮಾದರಿಯ ಚೆಂಡು ಸಮತೋಲನ ತಂದುಕೊಡಲಿದೆ ಎಂದು ಕೂಕಬುರ್ರಾ ತಯಾರಕರು ಹೇಳಿಕೊಂಡಿದ್ದಾರೆ.

ಈ ಚೆಂಡನ್ನು ಗಾಳಿ ಫಿರಂಗಿಗಳಲ್ಲಿ ಮತ್ತು ವಿಂಡ್ ಟನಲ್‌ಗಳಲ್ಲಿ ಪರೀಕ್ಷಿಸಲಾಗಿದೆ. ಕಳೆದ ವಾರ ಟೂರ್ನಮೆಂಟ್ ಒಂದರಲ್ಲಿ ಆಡಿಸುವ ಮೂಲಕ ಪ್ರಯೋಗಿಸಲಾಗಿದೆ.

2020ರಲ್ಲಿ ಈ ಚೆಂಡು ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದ್ದು, ಅಲ್ಲಿಯವರೆಗೂ ನಿರಂತರವಾಗಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕಂಪೆನಿ ತಿಳಿಸಿದೆ.

ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್‌ಗೆ ಬಳಸುವ ಚೆಂಡುಗಳು 80 ಓವರ್‌ಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ಟಿ20 ವಿಭಿನ್ನವಾದ ಆಟ. ಇಲ್ಲಿ 20 ಓವರ್‌ಗಳು ಮಾತ್ರ ಬೌಲ್ ಮಾಡಬೇಕಾದರೂ ಟೆಸ್ಟ್ ಕ್ರಿಕೆಟ್‌ಗಿಂತ ಅದರ ತೀವ್ರತೆ ಹಾಗೂ ಆಕ್ರಮಣಶೀಲತೆ ಹೆಚ್ಚಿರುತ್ತದೆ.

ಈಗ ಪ್ರಯೋಗಕ್ಕೆ ಒಳಪಡಿಸಿರುವ ಚೆಂಡಿನಲ್ಲಿ ಆಡಿದ ಆಟಗಾರರ ಅಭಿಪ್ರಾಯವನ್ನು ಕೂಕಬುರ್ರಾ ಪಡೆದುಕೊಂಡಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಷ್ಟೇನೂ ವ್ಯತ್ಯಾಸ ಕಂಡುಬಂದಿಲ್ಲ. ಆದರೆ 20 ಓವರ್ ಕಳೆದ ಬಳಿಕವೂ ಚೆಂಡಿನ ಗಡಸುತನ ಹಾಗೆಯೇ ಉಳಿದಿದೆ ಎಂದು ಆಟಗಾರರು ಹೇಳಿದ್ದಾರೆ.

Story first published: Sunday, July 8, 2018, 13:38 [IST]
Other articles published on Jul 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+