ಕೆಪಿಎಲ್ : ಕಿಚ್ಚನ ಹುಡ್ಗರಿಗೆ ಹೀನಾಯ ಸೋಲು
ಮೈಸೂರು, ಸೆ.2: ಕಿಚ್ಚ ಸುದೀಪ್ ಅವರು ಬೆಂಗಳೂರಿನಲ್ಲಿ ಮಂಗಳವಾರ 41ನೇ ಹುಟ್ಟುಹಬ್ಬ ಆಚರಣೆ ಸಂಭ್ರಮದಲ್ಲಿದ್ದಾರೆ. ಅದರೆ, ಸೋಮವಾರ ಕಿಚ್ಚನ ಹುಡ್ಗರು ಕೆಪಿಎಲ್ ನಲ್ಲಿ ಹೀನಾಯ ಸೋಲು ಕಂಡರು. ರಾಕ್ ಸ್ಟಾರ್ಸ್ ತಂಡವನ್ನು ಬೆಳಗಾವಿ ಪ್ಯಾಂಥರ್ಸ್ ತಂಡ 96 ರನ್ ಗಳಿಂದ ಸೋಲಿಸಿ ವಿಜಯೋತ್ಸವ ಆಚರಿಸಿದೆ.
ಗಂಗೋತ್ರಿ ಗ್ಲೇಡ್ ನಲ್ಲಿ ನಡೆದ ಕಾರ್ಬನ್ ಒಡೆಯರ್ ಕಪ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಆಟಗಾರರು ರನ್ ಮಳೆಗೈದು ಪ್ರೇಕ್ಷಕರಿಗೆ ಖುಷಿ ಕೊಟ್ಟರು. ಬೆಳಗಾವಿ ತಂಡ 20 ಓವರ್ ಗಳಲ್ಲಿ 214/4 ರನ್ ಗಳಿಸಿ ಸುದೀಪ್ ತಂಡಕ್ಕೆ ಬೃಹತ್ ಸವಾಲು ಒಡ್ಡಿತ್ತು.
ವೇಳಾಪಟ್ಟಿ || ಕೆಪಿಎಲ್ ಎಬಿಸಿಡಿ
ಗೆಲುವಿನ ಗುರಿ ಬೆನ್ನು ಹತ್ತಿದ ಕಿಚ್ಚನ ಪಡೆ 16.3 ಓವರ್ ಗಳಲ್ಲಿ 118ರನ್ ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಅನೇಕ ದಾಖಲೆಗಳು ಮುರಿದು ಬಿದ್ದವು. ಬೆಳಗಾವಿ ಸ್ಕೋರ್ ಮಾಡಿದ 214 ರನ್ ಮೊತ್ತ ಕೂಡಾ ಕೆಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಎನಿಸಿದೆ. 96ಗಳ ಅಂತರದ ಜಯ ಕೂಡಾ ದಾಖಲೆಯಾಗಿದೆ.

ಬೆಳಗಾವಿ ಪರ ಆರಂಭಿಕ ಆಟಗಾರ ಭರತ್ ಚಿಪ್ಳಿ 46 ಎಸೆತಗಳಲ್ಲಿ 77 ರನ್ ಸಿಡಿಸಿದರೆ, ನಾಯಕ ವಿನಯ್ ಕುಮಾರ್ ಅವರು 12 ಎಸೆತಗಳಲ್ಲಿ 18 ರನ್ ಚೆಚ್ಚಿದರು. ಆದರೆ, ವಿನಯ್ ಬೌಲಿಂಗ್ ಮಾಡದಿದ್ದದ್ದು ವಿಶೇಷವಾಗಿತ್ತು.
ಕೆಪಿಎಲ್ ನಲ್ಲಿ ಕಿಚ್ಚ ಸುದೀಪ್ ಅವರ ರಾಕ್ ಸ್ಟಾರ್ಸ್ ತಂಡ ಸತತ ಮೂರು ಸೋಲು ಕಂಡಿದೆ. ಬಳ್ಳಾರಿ ಟಸ್ಕರ್ಸ್ ವಿರುದ್ಧ 73 ರನ್ ಗಳಿಂದ ಸೋಲು ಅನುಭವಿಸಿದರೆ, ಮಂಗಳೂರು ಯುನೈಟೆಡ್ ತಂಡ ಸುದೀಪ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿತ್ತು.[ಮಂಗಳೂರು ವಿರುದ್ಧ ಕಿಚ್ಚನ ಹುಡ್ಗರಿಗೆ ಸೋಲು]
ಸ್ಕೋರ್ ವಿವರ:
ಬೆಳಗಾವಿ ಪ್ಯಾಂಥರ್ಸ್ 214/4, 20 ಓವರ್ಸ್
* ಭರತ್ ಚಿಪ್ಳಿ 77(46 ಎಸೆತಗಳು, 6x4, 3x6)
* ಸುನೀಲ್ ರಾಜು 38 (35ಎ, 2x4, 1x6),
* ಎಂ ನಿಧೀಶ್ 37 (20ಎ, 2x4, 3x6),
* ಆರ್ ವಿನಯ್ ಕುಮಾರ್ 18 (12ಎ, 1x6),
* ಕೆ ಗೌತಮ್ 15 (6 ಎ, 2x6),
ವಿವೇಕ್ ಗೋಪಾಲ್ 1/29, ವಿಕ್ರಾಂತ್ 1/27, ಶಬ್ಬೀರ್ ಅಹ್ಲುವಾಲಿಯಾ 1/53)
ರಾಕ್ ಸ್ಟಾರ್ಸ್ 118 ಆಲೌಟ್, 16.3 ಓವರ್ಸ್* ರಾಜೀವ್ 41 (22b, 7x4, 1x6),
* ಸುದೀಪ್ 30 (22b, 1x4, 3x6),
ಬಿ ನವೀನ್ 3/16, ಕೆ ಗೌತಮ್ 3/28, ಸ್ಟಾಲಿನ್ ಹೂವರ್ 1/13, ಎನ್ ಸಿ ಅಯ್ಯಪ್ಪ 1/22
ಪಂದ್ಯಶ್ರೇಷ್ಠ: ಭರತ್ ಚಿಪ್ಳಿ(ಪ್ಯಾಂಥರ್ಸ್)
ಶ್ರೇಷ್ಠ ಫೀಲ್ಡರ್ : ಜೆ ಕಾರ್ತಿಕ್ (ರಾಕ್ ಸ್ಟಾರ್ಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
