ಕೆಪಿಎಲ್ 2015: ಶಿವಮೊಗ್ಗ ವಿರುದ್ಧ ಬಿಜಾಪುರಕ್ಕೆ ರೋಚಕ ಜಯ
ಹುಬ್ಬಳ್ಳಿ, ಸೆ. 09: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಸತತ ಜಯ ಸಾಧಿಸಿ ಗೆಲುವಿನ ನಾಗಲೋಟ ಕಂಡಿರುವ ಹೊಸ ತಂಡ ನಮ್ಮ ಶಿವಮೊಗ್ಗಕ್ಕೆ ಬಿಜಾಪುರ ಬ್ರೇಕ್ ಹಾಕಿದೆ. ಬುಧವಾರ ನಡೆದ ಪಂದ್ಯದ ಕೊನೆ ಓವರ್ ನಲ್ಲಿ ಬಿಜಾಪುರ್ ಬುಲ್ಸ್ ತಂಡ ರೋಚಕ ಜಯ ದಾಖಲಿಸಿದೆ.
ಈ ಪಂದ್ಯಕ್ಕೂ ಮುನ್ನ ಕಿಚ್ಚ ಸುದೀಪ್ ಒಡೆತನದ ನಮ್ಮ ಶಿವಮೊಗ್ಗ ತಂಡದ ಕೆಪಿಎಲ್ ನಲ್ಲಿ ಸತತವಾಗಿ ಮೂರು ಪಂದ್ಯ ಗೆದ್ದುಕೊಂಡು ಭರ್ಜರಿಯಾಗಿ ಟೂರ್ನಿಯಲ್ಲಿ ಪ್ರದರ್ಶನ ನೀಡಿತ್ತು. ಈ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ ತಂಡವನ್ನು ಸೋಲಿಸಿದ ಬಿಜಾಪುರ್ ಬುಲ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಶಿವಮೊಗ್ಗ ತಂಡ 20 ಓವರ್ ಗಳಲ್ಲಿ 161/7
ಬಿಜಾಪುರ್ ಬುಲ್ಸ್ ತಂಡ 20 ಓವರ್ ಗಳಲ್ಲಿ 165/3
11ನೇ ಪಂದ್ಯದ ವರದಿ: ಆರಂಭಿಕ ದಾಂಡಿಗರಾದ ಸಾದಿಕ್ ಕಿರ್ಮಾನಿ ಮತ್ತು ಸಮರ್ಥ್ ಬ್ಯಾಟಿಂಗ್ ನೆರವಿನಿಂದ ನಮ್ಮ ಶಿವಮೊಗ್ಗ ತಂಡ ಮಂಗಳವಾರ ನಡೆದ ಕೆಪಿಎಲ್‌ನ ಹನ್ನೊಂದನೆ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 147 ರನ್‌ಗಳ ಸವಾಲನ್ನು ಪಡೆದಿದ್ದ ನಮ್ಮ ಶಿವಮೊಗ್ಗ ತಂಡ 16.3 ಓವರ್‌ಗಳಲ್ಲಿ 148 ರನ್ ಗಳಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications