ಕೆಪಿಎಲ್ : ಹಾಲಿ ಚಾಂಪಿಯನ್ ಮೈಸೂರಿಗೆ ಮುಖಭಂಗ
ಮೈಸೂರು, ಸೆ. 15: ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ ತೀವ್ರ ಮುಖಭಂಗ ಅನುಭವಿಸಿದೆ. ಮಂಗಳವಾರ ರಾತ್ರಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 24ರನ್ ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ಪ್ಲೇ ಆಫ್ ನಿಂದ ಮೈಸೂರು ಹೊರಬಿದ್ದಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 156 ರನ್ ಗಳಿಸಬೇಕಿದ್ದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿ ಸೊಲೊಪ್ಪಿಕೊಂಡಿತು.

ಕೆಪಿಎಲ್ 2015ರಲ್ಲಿ 6 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿರುವ ಮೈಸೂರು ವಾರಿಯರ್ಸ್ ತಂಡ ಅಂಕಪಟ್ಟಿಯಲ್ಲಿ ರಾಕ್ ಸ್ಟಾರ್ಸ್ ಗಿಂತ ಒಂದು ಸ್ಥಾನ ಮೇಲಿದ್ದು 7ನೇ ಸ್ಥಾನದಲ್ಲಿದೆ.[ ಮೈಸೂರು ವಿರುದ್ಧ ನಮ್ಮ ಶಿವಮೊಗ್ಗಕ್ಕೆ ರೋಚಕ ಜಯ]
ಈ ಗೆಲುವಿನೊಂದಿಗೆ ಹುಬ್ಬಳ್ಳಿ ತಂಡ ಮೂರನೇ ಸ್ಥಾನಕ್ಕೇರಿದ್ದು, ಇನ್ನೂ ಒಂದು ಪಂದ್ಯ ಆಡಬೇಕಿದೆ. ಟಾಪ್ 4 ತಂಡಗಳು ಪ್ಲೇ ಆಫ್ ಗೆ ಅರ್ಹತೆ ಪಡೆಯಲಿವೆ. ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಿಜಾಪುರ್ ಬುಲ್ಸ್ ತಂಡಗಳು ಈಗಾಗಲೇ ಅರ್ಹತೆ ಗಳಿಸಿವೆ.
ಹುಬ್ಬಳ್ಳಿ ಟೈಗರ್ಸ್ 155/7: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತ್ತು. ಮಹಮ್ಮದ್ ತಾಹಾ 37 ರನ್ (33 ಎಸೆತ, 6x4), ಕೆಬಿ ಪವನ್ 36 ರನ್, ಚೇತನ್ ವಿಲಿಯಮ್ಸ್ 43 ರನ್ (26ಎಸೆತ, 3x4, 3x6), ಆನಂದ್ ದೊಡ್ಡಮನಿ 22/3, ಕೆ ಗೌತಮ್ 28/2.
ಮೈಸೂರು ವಾರಿಯರ್ಸ್ : 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131
ಸಿಎಂ ಗೌತಮ್ 30(33ಎಸೆತ), ಜೆ ಸುಚಿತ್ 27ರನ್ (16 ಎಸೆತ, 4X4), ಹುಬ್ಬಳ್ಳಿ ಪತ ಕಿಶೋರ್ ಕಾಮತ್ 3-012-3, ಕ್ರಾಂತಿ ಕುಮಾರ್ 3-0-15-2
ಫಲಿತಾಂಶ : ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 24ರನ್ ಗಳ ಜಯ.(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications