For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ : ಮಂಗಳೂರನ್ನು ಬಗ್ಗು ಬಡಿದ ಹುಬ್ಬಳ್ಳಿ ಹುಲಿಗಳು

By Mahesh

ಮೈಸೂರು, ಸೆ.18: ಇದೇ ಮೊದಲ ಬಾರಿಗೆ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಐಪಿಎಲ್ ಮಾದರಿಯಂತೆ ಎಲಿಮಿನೇಟರ್ ಪಂದ್ಯ ಅಳವಡಿಸಲಾಗಿದ್ದು, ಕೆಪಿಎಲ್ ಎಲಿಮಿನೇಟರ್ ನಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು 9 ವಿಕೆಟ್ ಗಳಿಂದ ಹುಬ್ಬಳ್ಳಿ ಟೈಗರ್ಸ್ ಬಗ್ಗುಬಡಿದಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮಂಗಳೂರು ತಂಡವನ್ನು 20 ಓವರ್ ಗಳಲ್ಲಿ 101 ಸ್ಕೋರಿಗೆ ಆಲೌಟ್ ಮಾಡಿದ ಟೈಗರ್ಸ್ ತಂಡ, 14.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Hubli Tigers thrash Mangalore United in Eliminator


ಹುಬ್ಬಳ್ಳಿ ಪರ ಆರಂಭಿಕ ಆಟಗಾರ ಮಹಮ್ಮದ್ ತಾಹಾ 43 ಎಸೆತಗಳಲ್ಲಿ 58 ರನ್ ಗಳಿಸಿ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

ಹುಬ್ಬಳ್ಳಿ ತಂಡ ಶುಕ್ರವಾರ ರಾತ್ರಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋಲುವ ತಂಡ (ಬೆಳಗಾವಿ ಪ್ಯಾಂಥರ್ಸ್ ಅಥವಾ ಬಿಜಾಪುರ್ ಬುಲ್ಸ್) ವಿರುದ್ಧ ನಾಳೆ ಕ್ವಾಲಿಫೈಯರ್ 2 ನಲ್ಲಿ ಎದುರಿಸಲಿದೆ. [ಕೆಪಿಎಲ್: ದಾಖಲೆ ಬರೆದ 15ರ ಹರೆಯದ ಮೈಸೂರು ಹುಡುಗ]

ಸ್ಕೋರ್ ಕಾರ್ಡ್

ಮಂಗಳೂರು ಯುನೈಟೆಡ್ : 20 ಓವರ್ ಗಳಲ್ಲಿ 101ರನ್ ಆಲೌಟ್
ಕುನಾಲ್ ಕಪೂರ್ 23 ರನ್, ಕಿಶೋರ್ ಕಾಮತ್ 13/2, ಎಸ್ ಕೌಶಿಕ್ 25/2, ದಿಕ್ಷಾಂಶು ನೇಗಿ 13/3

ಹುಬ್ಬಳ್ಳಿ ಟೈಗರ್ಸ್
ಕೆಬಿ ಪವನ್ 27, ಮೊಹಮ್ಮದ್ ತಾಹಾ (ನಾಟೌಟ್) 58ರನ್ (43ಎಸೆತ, 8X4, 1X6), ನಿತಿನ್ ಭಿಲ್ಲೆ 16

ಫಲಿತಾಂಶ: ಹುಬ್ಬಳ್ಳಿಗೆ 9ವಿಕೆಟ್ ಗಳ ಜಯ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+