ಬಿನ್ನಿ, ಕರುಣ್ ಗಾಗಿ ಕೆಪಿಎಲ್ ವೇಳಾಪಟ್ಟಿ ಬದಲು
ಬೆಂಗಳೂರು, ಆಗಸ್ಟ್ 27: ಶ್ರೀಲಂಕಾ ಪ್ರವಾಸದಲ್ಲಿರುವ ಕರ್ನಾಟಕದ ಸ್ಟಾರ್ ಆಟಗಾರರಾದ ಸ್ಟುವರ್ಟ್ ಬಿನ್ನಿ ಹಾಗೂ ಕರುಣ್ ನಾಯರ್ ಗಾಗಿ ಕೆಪಿಎಲ್ ಟೂರ್ನಿ ವೇಳಾಪಟ್ಟಿ ಬದಲಾಯಿಸಲಾಗಿದೆ ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ಹೇಳಿದ್ದಾರೆ.
ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ 4ನೇ ಸೀಸನ್ ಪಂದ್ಯಾವಳಿಗಳು ಸೆಪ್ಟೆಂಬರ್ 2ರಿಂದ ಆರಂಭವಾಗಬೇಕಿತ್ತು. ಇದಕ್ಕೆ ಬದಲಾಗಿ ಸೆ. 3 ರಿಂದ ಆರಂಭಗೊಳ್ಳಲಿದೆ ಎಂದು ವಿನಯ್ ಮೃತ್ಯುಂಜಯ ಹೇಳಿದ್ದಾರೆ.

ಮಂಗಳೂರು ಯುನೈಟೆಡ್ ಹಾಗೂ ನಮ್ಮ ಶಿವಮೊಗ್ಗ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗಲಿವೆ. ಈ ಎರಡೂ ತಂಡಗಳ ಸ್ಟಾರ್ ಆಟಗಾರರಾದ ಸ್ಟುವರ್ಟ್ ಬಿನ್ನಿ ಹಾಗೂ ಕರುಣ್ ನಾಯರ್ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಆಗಸ್ಟ್ 28ರಿಂದ ಶ್ರೀಲಂಕಾ ವಿರುದ್ಧ ಭಾರತ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವಾಡಲಿದೆ. ಇದರಿಂದ ನಿಗದಿಯಾಗಿದ್ದ ಎಲ್ಲ ಪಂದ್ಯಗಳು ಮರು ದಿನ ನಡೆಯಲಿವೆ. ವಿಶ್ರಾಂತಿ ದಿನವನ್ನು ಸೆ.10ರ ಬದಲಾಗಿ ಸೆ.11ಕ್ಕೆ ನೀಡಲಾಗಿದೆ.
ಸ್ಟುವರ್ಟ್ ಬಿನ್ನಿ ಅವರು ನಮ್ಮ ಶಿವಮೊಗ್ಗ ತಂಡದ ಪರ ಆಡುತ್ತಿದ್ದಾರೆ ಹಾಗೂ ಕರುಣ್ ನಾಯರ್ ಅವರು ಮಂಗಳೂರು ಯುನೈಟೆಡ್ ತಂಡದಲ್ಲಿದ್ದಾರೆ. ಪಂದ್ಯಗಳು ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ನಡೆಯಲಿವೆ. ಕಿಚ್ಚ ಸುದೀಪ್ ಅವರ ಆಲ್ ಸ್ಟಾರ್ ತಂಡ ಸೇರಿದಂತೆ 8 ತಂಡಗಳು ಈ ಬಾರಿ ಕಾರ್ಬನ್ ಕೆಪಿಎಲ್ ಕಪ್ ಗಾಗಿ ಸೆಣೆಸಲಿವೆ. ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ನಲ್ಲಿ ಪ್ರಸಾರವಾಗಲಿದೆ. (ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: KPL 2015 postponed for Binny, Nair
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications