ನಿಶಾಂತ್ ಶತಕ, ರಾಕ್ ಸ್ಟಾರ್ಸ್ ವಿರುದ್ಧ ಮಂಗಳೂರಿಗೆ ಜಯ
ಹುಬ್ಬಳ್ಳಿ, ಸೆ. 20: ಮಂಗಳೂರು ಯುನೈಟೆಡ್ ನ ಆರಂಭಿಕ ಆಟಗಾರ ನಿಶಾಂತ್ ಶೇಖಾವತ್ ಭರ್ಜರಿ ಶತಕ ನೆರವಿನಿಂದ ರಾಕ್ ಸ್ಟಾರ್ಸ್ ವಿರುದ್ಧ 53ರನ್ ಗಳ ಸುಲಭ ಜಯ ದಾಖಲಿಸಿದೆ. ಕೆಪಿಎಲ್ 5ನೇ ಆವೃತ್ತಿಯ ಪಂದ್ಯದಲ್ಲಿ ಕಿಚ್ಚ ಸುದೀಪ್ ನೇತೃತ್ವದ ರಾಕ್‌ಸ್ಟಾರ‍್ಸ್ ತಂಡದ ಸೋಮವಾರ ಮತ್ತೆ ಸೋಲು ಕಂಡಿದೆ.
ನಿಶಾಂತ್ ಶೇಖಾವತ್ 106 ರನ್ (61 ಎಸೆತ, 8X4, 5X6) ಬಾರಿಸಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಐದನೇ ಆವೃತ್ತಿಯ ಮೊದಲ ಶತಕ ಹಾಗೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಕೆಪಿಎಲ್ ನ 7ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮಂಗಳೂರು ತಂಡಕ್ಕೆ ನಿಶಾಂತ್ ಆಸರೆಯಾದರು. ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್‌ಗೆ 195 ರನ್ ಸ್ಕೋರ್ ಮಾಡಿತು.
ಇದಕ್ಕೆ ಪ್ರತಿಯಾಗಿ ಸುದೀಪ್ ಅವರ ರಾಕ್‌ಸ್ಟಾರ‍್ಸ್ ತಂಡ 7 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಂಗಳೂರು ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಇದು ಮೊದಲ ಗೆಲುವಾಗಿದೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: KPL 2016: Nishant Shekhawat hits 1st ton
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications