ಕೆಪಿಎಲ್: ಪಾಂಡೆ ಅರ್ಧಶತಕ, ಬೆಂಗಳೂರು ವಿರುದ್ಧ ಬೆಳಗಾವಿ ಜಯಭೇರಿ

ಬೆಂಗಳೂರು, ಆಗಸ್ಟ್ 23: ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ನ ಅದೃಷ್ಟವೇ ಸರಿ ಇದ್ದಂತಿಲ್ಲ. ಆಡಿರುವ ಒಟ್ಟು ಐದು ಪಂದ್ಯಗಳಲ್ಲಿ ಬೆಂಗಳೂರು ಕೇವಲ 1 ಗೆಲುವು ದಾಖಲಿಸಿದೆ. ಶುಕ್ರವಾರದ (ಆಗಸ್ಟ್ 23) ಪಂದ್ಯದಲ್ಲೂ ಬೆಂಗಳೂರು ತಂಡ, ಬೆಳಗಾವಿ ಪ್ಯಾಂಥರ್ಸ್ ಎದುರು 8 ವಿಕೆಟ್‌ಗಳ ಸೋಲನುಭವಿಸಿತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಪಿಎಲ್ 14ನೇ ಪಂದ್ಯದಲ್ಲಿ ನಾಯಕ ಮನೀಷ್ ಪಾಂಡೆ ಅಜೇಯ ಅರ್ಧ ಶತಕ ಬಾರಿಸಿದ್ದರಿಂದ ಬೆಳಗಾವಿ ಪ್ಯಾಂಥರ್ಸ್ ಸುಲಭ ಜಯ ಗಳಿಸಿದೆ. ಇದು ಟೂರ್ನಿಯಲ್ಲಿ ಬೆಳಗಾವಿಗೆ ಲಭಿಸಿದ ಮೊದಲ ಜಯ. ಬೆಂಗಳೂರಿನ ಪಾಲಿಗೆ 2ನೇ ಸೋಲು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ಬ್ಲಾಸ್ಟರ್ಸ್ ತಂಡ, ಶರತ್ ಬಿಆರ್ 32, ನಾಯಕ ರಂಗಸೇನ್ ಜೋನಾಥನ್ 29, ನಿಕಿನ್ ಜೋಸ್ 21 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 110 ರನ್ ಗಳಿಸಿತು. ಬೆಂಗಳೂರು ಇನ್ನಿಂಗ್ಸ್ ವೇಳೆ ಝಹೂರ್ ಫಾರೂಕಿ 2, ದರ್ಶನ್ ಎಂಬಿ 3, ರಿತೇಶ್ ಭಟ್ಕಳ್ 2 ವಿಕೆಟ್ ಪಡೆದು ತಂಡವನ್ನು ಕಾಡಿದರು.
ಸುಲಭ ರನ್ ಗುರಿ ಬೆನ್ನತ್ತಿದ ಬೆಳಗಾವಿ ಪ್ಯಾಂಥರ್ಸ್, ದಿಕ್ಷಾಂಶು ನೇಗಿ 18, ಪಾಂಡೆ 58 (30), ಅಭಿನವ್ ಮನೋಹರ್ 22 ರನ್ ಸೇರ್ಪಡೆಯೊಂದಿಗೆ 11.5ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 115 ರನ್ ಗಳಿಸಿತು. ಇದರೊಂದಿಗೆ ಬೆಂಗಳೂರು, ಆಡಿರುವ 5 ಪಂದ್ಯಗಳಲ್ಲಿ 1 ಗೆಲುವು, 2 ಸೋಲು, 1 ಟೈ, 1 ಫಾಲಿತಾಂಶವಿಲ್ಲ ಅನ್ನಿಸಿಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಶಿವಮೊಗ್ಗ ಲಯನ್ಸ್, ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಳಿ ಟೈಗರ್ಸ್ ಅಗ್ರ ಮೂರು ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications