ಕೆಪಿಎಲ್ 2019: ಪ್ಯಾಂಥರ್ಸ್ ಮಣಿಸಿ ಫೈನಲ್ ಬಸ್ ಹತ್ತಿದ ಟಸ್ಕರ್ಸ್

ಮೈಸೂರು, ಆಗಸ್ಟ್ 28: ಕೆಪಿಎಲ್ 2019ರ ಕ್ವಾಲಿಫೈಯರ್-1 ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಬಳ್ಳಾರಿ ಟಸ್ಕರ್ಸ್ 37 ರನ್ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದೆ. ನಾಯಕ ಸಿಎಂ ಗೌತಮ್ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ಬಳ್ಳಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಬುಧವಾರ (ಆಗಸ್ಟ್ 28) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಳ್ಳಾರಿ ಟಸ್ಕರ್ಸ್ ಪರ ಗೌತಮ್ 96 (63 ಎಸೆತ), ದೇವದತ್ ಪಡಿಕಳ್ 19. ಕಾರ್ತಿಕ್ ಸಿಎ 25, ಝೀಶನ್ ಅಲಿ 32 ರನ್ ಕೊಡುಗೆಯಿತ್ತರು.
ಟಸ್ಕರ್ಸ್ 20 ಓವರ್‌ಗೆ 7 ವಿಕೆಟ್ ಕಳೆದು 201 ಗರಿಷ್ಠ ರನ್ ಮಾಡಿತು. ಬಳ್ಳಾರಿ ಇನ್ನಿಂಗ್ಸ್‌ನಲ್ಲಿ ಝಹೂರ್ ಫಾರೂಕಿ 2, ಅವಿನಾಶ್ ಡಿ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಗುರಿ ಬೆಂಬತ್ತಿದ ಬೆಳಗಾವಿಯಿಂದ ಆರಂಭದಲ್ಲೇ ವಿಕೆಟ್ ಉರುಳುತ್ತ ಸಾಗಿದ್ದರಿಂದ ಬಳ್ಳಾರಿ ನೀಡಿದ್ದ ಗುರಿ ತಲುಪಲಾಗಲಿಲ್ಲ.
ಸ್ಟ್ಯಾಲಿನ್ ಹೂವರ್ 39, ಅಭಿನವ್ ಮನೋಹರ್ ಅಜೇಯ 62 (39 ಎಸೆತ), ಅವಿನಾಶ್ ಡಿ 31 (17 ಎಸೆತ) ರನ್‌ನೊಂದಿಗೆ ಬೆಳಗಾವಿ ಪ್ಯಾಂಥರ್ಸ್ 20 ಓವರ್‌ಗೆ 7 ವಿಕೆಟ್ ಕಳೆದು 164 ರನ್ ಗಳಿಸಲಷ್ಟೇ ಶಕ್ತವಾಯ್ತು. ಸಿಎಂ ಗೌತಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆಗಸ್ಟ್ 29ರ ಗುರುವಾರ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ಮತ್ತು ಶಿವಮೊಗ್ಗ ಲಯನ್ಸ್ ಕಾದಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications