ಕೆಪಿಎಲ್ 2019: ಬಿಜಾಪುರ್ ಬುಲ್ಸ್‌ಗೆ ಸೋಲುಣಿಸಿದ ಬಳ್ಳಾರಿ ಟಸ್ಕರ್ಸ್

ಬೆಂಗಳೂರು, ಆಗಸ್ಟ್ 20: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ (ಆಗಸ್ಟ್ 20) ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ 2019ರ 8ನೇ ಪಂದ್ಯದಲ್ಲಿ ಬುಜಾಪುರ್ ಬುಲ್ಸ್ ವಿರುದ್ಧ ಬಳ್ಳಾರಿ ಟಸ್ಕರ್ಸ್ 7 ವಿಕೆಟ್ ಜಯ ಗಳಿಸಿದೆ. ಅಭಿಷೇಕ್ ರೆಡ್ಡಿ ಮತ್ತು ಸಿಎ ಕಾರ್ತಿಕ್ ಅರ್ಧಶತಕದ ಬೆಂಬಲದೊಂದಿಗೆ ಟಸ್ಕರ್ಸ್ ಸತತ 3ನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಿಜಾಪುರ್ ಬುಲ್ಸ್, ನಾಯಕ ಭರತ್ ಚಿಪ್ಲಿ 50 (39 ಎಸೆತ), ರಾಜು ಭಟ್ಕಳ್ 62 (43) ಗಣನೀಯ ರನ್‌ನೊಂದಿಗೆ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ನಷ್ಟದೊಂದಿಗೆ 162 ರನ್ ಮಾಡಿತು. ಬುಲ್ಸ್ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಕೃಷ್ಣಪ್ಪ ಗೌತಮ್ 3, ಪ್ರಸಿದ್ಧ್ ಕೃಷ್ಣ 2, ಸಿಎ ಕಾರ್ತಿಕ್ 1 ವಿಕೆಟ್ ಪಡೆದರು.
ಗುರಿ ಬೆಂಬತ್ತಿದ್ದ ಬಳ್ಳಾರಿ ಟಸ್ಕರ್ಸ್‌ಗೆ ಆರಂಭಿಕ ಆಟಗಾರರಾದ ಅಭಿಷೇಕ್ ಮತ್ತು ಕಾರ್ತಿಕ್ ಅವರ ಉತ್ತಮ ಜೊತೆಯಾಟದ ಬೆಂಬಲ ಲಭಿಸಿತು. ಅಭಿಷೇಕ್ ಅಜೇಯ 62 (54), ಕಾರ್ತಿಕ್ 57 (36), ದೇವದತ್ ಪಡಿಕಳ್ 29 ರನ್ ಸೇರಿಸಿ ತಂಡ ಬೆಂಬಲಿಸಿದರು.
18.5 ಓವರ್‌ಗೆ ಬಳ್ಳಾರಿ ಟಸ್ಕರ್ಸ್ 3 ವಿಕೆಟ್ ಕಳೆದು 163 ರನ್‌ನೊಂದಿಗೆ ಗೆಲುವಿನ ನಗು ಬೀರಿತು. ಪ್ರತೀಕ್ ಜೈನ್, ನವೀನ್ ಎಂಜಿ ಮತ್ತು ಸುನೀಲ್ ರಾಜು ತಲಾ 1 ವಿಕೆಟ್ ಪಡೆದರು. ಟಸ್ಕರ್ಸ್‌ನ ಅಭಿಷೇಕ್ ರೆಡ್ಡಿ ಪಂದ್ಯಶ್ರೇಷ್ಠರೆನಿಸಿದರು. ಈ ಪಂದ್ಯದ ಬಳಿಕ ಟಸ್ಕರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications