Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್ 2019: ಬಳ್ಳಾರಿ ಟಸ್ಕರ್ಸ್ ಮಣಿಸಿ ಟ್ರೋಫಿ ಎತ್ತಿದ ಹುಬ್ಳಿ ಟೈಗರ್ಸ್

KPL 2019 Final: Hubli Tigers beat Bellary Tuskers by 8 runs

ಮೈಸೂರು, ಆಗಸ್ಟ್ 31: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) 2019ರಲ್ಲಿ ಚಾಂಪಿಯನ್ ಆಗಿ ಹುಬ್ಳಿ ಟೈಗರ್ಸ್ ಹೊರಹೊಮ್ಮಿದೆ. ಶನಿವಾರ (ಆಗಸ್ಟ್ 31) ನಡೆದ ಫೈನಲ್ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್ ತಂಡವನ್ನು 8 ರನ್‌ನಿಂದ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದಿತು.

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಳಿ ಟೈಗರ್ಸ್, ಆದಿತ್ಯ ಸೋಮಣ್ಣ 47 (38 ಎಸೆತ), ಲವನೀತ್ ಸಿಸೋಡಿಯಾ 29, ಪ್ರವೀಣ್ ದೂಬೆ ಅಜೇಯ 26, ಶ್ರೇಯಸ್ ಗೋಪಾಲ್ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿತು.

ಗುರಿ ಬೆನ್ನತ್ತಿದ ಬಳ್ಳಾರಿ ಸಟ್ಕರ್ಸ್ ತಂಡವನ್ನು ಆರಂಭದಲ್ಲೇ ಹುಬ್ಳಿ ಬೌಲರ್‌ಗಳು ಕಾಡಹತ್ತಿದರು. ಆದರೆ ದೇವದತ್ ಪಡಿಕಳ್ 68 (48), ಸಿಎಂ ಗೌತಮ್ 29, ಭವೇಶ್ ಗುಲೇಚಾ 15, ಅಬ್ರಾಝ್ ಖಾಝಿ 13 ರನ್‌ ಕೊಡುಗೆಯೊಂದಿಗೆ ಬಳ್ಳಾರಿ 20 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 144 ರನ್ ಮಾಡಿತು.

ಬಳ್ಳಾರಿ ಇನ್ನಿಂಗ್ಸ್‌ನಲ್ಲಿ ಹುಬ್ಳಿಯ ಅಭಿಲಾಷ್ ಶೆಟ್ಟಿ 3, ಆದಿತ್ಯ ಸೋಮಣ್ಣ 3 ವಿಕೆಟ್‌ನೊಂದಿಗೆ ಮಿಂಚಿದರು. ಹುಬ್ಳಿ ಟೈಗರ್ಸ್‌ನ ಆದಿತ್ಯ ಸೋಮಣ್ಣ ಪಂದ್ಯಶ್ರೇಷ್ಠ, ಬಳ್ಳಾರಿ ಟಸ್ಕರ್ಸ್‌ನ ಕೃಷ್ಣಪ್ಪ ಗೌತಮ್ ಸರಣಿ ಶ್ರೇಷ್ಠರೆನಿಸಿದರು. ಹುಬ್ಳಿ ಟೈಗರ್ಸ್ ಇದು ಮೂರನೇ ಸಾರಿ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಹುಬ್ಳಿಗೆ ಟ್ರೋಫಿ ಒಲಿದಿದೆ.

Story first published: Saturday, August 31, 2019, 23:32 [IST]
Other articles published on Aug 31, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+