ಕೆಪಿಎಲ್: ಲಯನ್ಸ್ ಮಣಿಸಿ ಕ್ವಾಲಿಫೈಯರ್-2ಕ್ಕೆ ಲಗ್ಗೆಯಿಟ್ಟ ಟೈಗರ್ಸ್

ಮೈಸೂರು, ಆಗಸ್ಟ್ 30: ನಾಯಕ ವಿನಯ್ ಕುಮಾರ್, ಮೊಹಮ್ಮದ್ ತಾಹ, ಕೆಬಿ ಪವನ್ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಶಿವಮೊಗ್ಗ ಲಯನ್ಸ್ ವಿರುದ್ಧ 20 ರನ್ ಗೆಲುವು ದಾಖಲಿಸಿರುವ ಹುಬ್ಳಿ ಟೈಗರ್ಸ್ ತಂಡ, ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2019ರಲ್ಲಿ ಕ್ವಾಲಿಫೈಯರ್-2ಕ್ಕೆ ಲಗ್ಗೆಯಿಟ್ಟಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂನಲ್ಲಿ ಗುರುವಾರ (ಆಗಸ್ಟ್ 29) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ಅಧಿಕಾರಯುತ ಗೆಲುವು ಸಾಧಿಸಿತು. ಆಗಸ್ಟ್ 30ರಂದು ನಡೆಯುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಸೆಣಸಾಡಲಿವೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹುಬ್ಳಿ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ತಾಹ 41 (22 ಎಸೆತ) ರನ್ ಸೇರಿಸಿದರು. ಇನ್ನು ವಿನಯ್ 55 (45), ಪವನ್ ಅಜೇಯ 56 (39), ಪ್ರವೀಣ್ ದೂಬೆ 23 (8) ರನ್ ಕೊಡುಗೆ ನೀಡಿದರು. ಟೈಗರ್ಸ್, 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 190 ರನ್ ಮಾಡಿತು.
ಗುರಿ ಬೆಂಬತ್ತಿದ ಶಿವಮೊಗ್ಗ ಲಯನ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಅರ್ಜುನ್ ಹೊಯ್ಸಳ 5, ನಿಹಾಲ್ ಉಲ್ಲಾಳ್ 0, ಸುಜಿತ್ ಎನ್ ಗೌಡ 9 ರನ್‌ಗೆ ವಿಕೆಟ್ ಒಪ್ಪಿಸಿದರು. ಪವನ್ ದೇಶಪಾಂಡೆ 38, ಎಂ ನಿಧೀಶ್ 26, ನಾಯಕ ಅಭಿಮನ್ಯು ಮಿಥುನ್ 40 (19 ಎಸೆತ) ರನ್ ಸೇರಿಸಿ ಗೆಲುವಿಗಾಗಿ ಹೋರಾಟ ವ್ಯರ್ಥವಾಯಿತು.
ಶಿವಮೊಗ್ಗ ಲಯನ್ಸ್ 20 ಓವರ್‌ಗೆ 10 ವಿಕೆಟ್ ಕಳೆದು 170 ರನ್ ಪೇರಿಸಿತು. ಲಯನ್ಸ್ ಇನ್ನಿಂಗ್ಸ್‌ನಲ್ಲಿ ಹುಬ್ಳಿಯ ಮಿತ್ರಕಾಂತ್ ಯಾದವ್ ಮತ್ತು ಅಭಿಲಾಷ್ ಶೆಟ್ಟಿ ತಲಾ 3, ಆದಿತ್ಯ ಸೋಮಣ್ಣ ವಿಕೆಟ್‌ಗಳೊಂದಿಗೆ ಗಮನ ಸೆಳೆದರು. ಕೆಬಿ ಪವನ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications