Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್ 2019: ಪ್ಯಾಂಥರ್ಸ್‌ಗೆ ಸೋಲುಣಿಸಿದ ಟೈಗರ್ಸ್ ಪ್ರಶಸ್ತಿ ಸುತ್ತಿಗೆ

KPL 2019: Hubli Tigers trounce Belagavi Panthers to march into final

ಮೈಸೂರು, ಆಗಸ್ಟ್ 31: ಮೊಹಮ್ಮದ್ ತಾಹ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆಲ್ ರೌಂಡರ್ ವಿನಯ್ ಕುಮಾರ್ ನಾಯಕತ್ವದ ಹುಬ್ಳಿ ಟೈಗರ್ಸ್ ತಂಡ ಕರ್ನಾಟಕ ಪ್ರೀಮಿಯರ್ ಲೀಗ್‌ 2019ರ ಫೈನಲ್‌ಗೆ ಪ್ರವೇಶಿಸಿದೆ. ಕ್ವಾಲಿಫೈಯರ್-2ರಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಟೈಗರ್ಸ್ 26 ರನ್ ಜಯ ಗಳಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹುಬ್ಳಿ ಟೈಗರ್ಸ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ತಾಹ 63 (44 ಎಸೆತ), ಕೆಬಿ ಪವನ್ 31 (19), ಪ್ರವೀಣ್ ದೂಬೆ 29 ರನ್ ಕೊಡುಗೆ ನೀಡಿದರು. ಟೈಗರ್ಸ್ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 154 ರನ್ ಗಳಿಸಿತು.

ಗುರಿ ಬೆನ್ನತ್ತಿದ ಬೆಳಗಾವಿ ಪ್ಯಾಂಥರ್ಸ್‌ಗೆ ಬ್ಯಾಟ್ಸ್ಮನ್‌ಗಳ ಬೆಂಬಲ ಲಭಿಸಲಿಲ್ಲ. ಸ್ಟ್ಯಾಲಿನ್ ಹೂವರ್ 12, ಅವಿನಾಶ್ ಡಿ 13, ಅಭಿನವ್ ಮನೋಹರ್ 38, ರಿತೇಶ್ ಭಟ್ಕಳ್ 10, ದರ್ಶನ್ ಎಂಬಿ 9, ಶುಭಂಗ್ ಹೆಗ್ಡೆ 25 ರನ್ ಮಾತ್ರ ಗಮನಾರ್ಹವೆನಿಸಿತು.

ಪ್ಯಾಂಥರ್ಸ್ 19.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 128 ರನ್ ಪೇರಿಸಿ ಶರಣಾಯಿತು. ಬೆಳಗಾವಿ ಇನ್ನಿಂಗ್ಸ್‌ನಲ್ಲಿ ಅಭಿಲಾಷ್ ಶೆಟ್ಟಿ 3, ಆದಿತ್ಯ ಸೋಮಣ್ಣ, ಶ್ರೇಯಸ್ ಗೋಪಾಲ್, ಪ್ರವೀಣ್ ದೂಬೆ ತಲಾ 2 ವಿಕೆಟ್‌ ಪಡೆದು ಮಿಂಚಿದರು. ಹುಬ್ಳಿ ಇನ್ನಿಂಗ್ಸ್‌ನಲ್ಲಿ ರಿತೇಶ್ ಭಟ್ಕಳ್ 2, ಶ್ರೀಶ ಆಚಾರ್ 3 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಹುಬ್ಳಿ ಪರ ಸ್ಫೋಟಕ ಅರ್ಧ ಶತಕ ಸಿಡಿಸಿದ ಮೊಹಮ್ಮದ್ ತಾಹ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಫೈನಲ್ ಪಂದ್ಯ ಆಗಸ್ಟ್ 31ರಂದು ನಡೆಯಲಿದ್ದು, ಪ್ರಶಸ್ತಿಗಾಗಿ ಬಳ್ಳಾರಿ ಟಸ್ಕರ್ಸ್-ಹುಬ್ಳಿ ಟೈಗರ್ಸ್ ಸೆಣಸಾಡಲಿವೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂನಲ್ಲೇ ಫೈನಲ್ ಪಂದ್ಯ 7 pmಗೆ ನಡೆಯಲಿದೆ.

Story first published: Saturday, August 31, 2019, 1:07 [IST]
Other articles published on Aug 31, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+